Bangalore: ಬೆಂಗಳೂರು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡಿರುವ ರೈಲು; ವೀಡಿಯೋ ವೈರಲ್

Share the Article

Bangalore: ಬೆಂಗಳೂರಿನಲ್ಲಿದ್ದವರಿಗೆ ಟ್ರಾಫಿಕ್‌ ಸಮಸ್ಯೆ ಗೊತ್ತಿರುತ್ತದೆ. ಪ್ರತಿದಿನ ನಗರದಲ್ಲಿ ಟ್ರಾಫಿಕ್‌ ಜಾಮ್‌ ಆಗುತ್ತಲೇ ಇರುತ್ತದೆ. ಬಸ್ಸು, ಬೈಕು, ಕಾರು ಇತರೆ ವಾಹನಗಳು ಟ್ರಾಫಿಕ್‌ ಜಾಮ್‌ನಿಂದ ಗಂಟೆಗಟ್ಟಲೆ ನಿಂತಿರುವುದು ಸಾಮಾನ್ಯ. ಆದರೆ ಇವೆಲ್ಲವುದರ ಜೊತೆಗೆ ರೈಲು ಕೂಡಾ ನಮ್ಮ ಬೆಂಗಳೂರಿನ ಟ್ರಾಫಿಕ್‌ ಜಾಮ್‌ಗೆ ಸಿಲುಕಿದ ಘಟನೆ ನಡೆದಿದೆ.

ಈ ವೀಡಿಯೋ ವೈರಲ್‌ ಆಗಿದ್ದು, ಜನ ಸಿಕ್ಕಾಪಟ್ಟೆ ಕಮೆಂಟ್‌ ಮಾಡುತ್ತಿದ್ದಾರೆ. ನಮ್‌ ಬೆಂಗ್ಳೂರು ಅಂದ್ರೆ ಸುಮ್ನೆನಾ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಅಂದ ಹಾಗೆ ಈ ಘಟನೆ ನಡೆದಿರುವುದು ಬೆಂಗಳೂರಿನ ಮಾರತಹಳ್ಳಿ ಸಮೀಪದ ಮುನ್ನೆಕೊಲ್ಲಾಲ ರೈಲ್ವೆ ಕ್ರಾಸಿಂಗ್‌ ಬಳಿ. ಟ್ರಾಫಿಕ್‌ ಜಾಮ್‌ನಿಂದ ರೈಲ್ವೆ ಕ್ರಾಸಿಂಗ್‌ ಬಳಿಯೂ ಸಾಲಾಗಿ ವಾಹನಗಳು ನಿಂತಿದ್ದು, ಪರಿಣಾಮ ರೈಲ್ವೆ ಕ್ರಾಸಿಂಗ್‌ ದಾಟಲು ಆಗದೇ ರೈಲು ಕೂಡಾ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡಿದೆ.

ನಾನು ಅಥವಾ ನೀವು ಮಾತ್ರವಲ್ಲ ರೈಲಿಗೂ ಬೆಂಗಳೂರು ಟ್ರಾಫಿಕ್‌ನಿಂದ ತಪ್ಪಿಸಲು ಸಾಧ್ಯವೇ ಇಲ್ಲ ಎಂಬ ಶೀರ್ಷಿಕೆಯನ್ನು ಈ ವೀಡಿಯೋಗೆ ನೀಡಲಾಗಿದೆ.‌

Leave A Reply