SSLC: 10ನೇ ತರಗತಿಯಲ್ಲಿ ಅನುತ್ತೀರ್ಣ ಆದ್ರು ತರಗತಿಗೆ ಹೋಗಬಹುದು: ರಾಜ್ಯ ಸರ್ಕಾರ ಆದೇಶ

SSLC: ರಾಜ್ಯದಲ್ಲಿ 10ನೇ ತರಗತಿಯಲ್ಲಿ (SSLC) ಅನುತ್ತೀರ್ಣ ಆಗುವ ವಿದ್ಯಾರ್ಥಿಗಳಿಗೆ ಸರ್ಕಾರಿ (Government Schools) ಶಾಲೆಗಳಲ್ಲಿ 10ನೇ ತರಗತಿಗೆ (10th class) ಮತ್ತೇ ಹಾಜರಾಗುವ ಅವಕಾಶ ನೀಡಲು ರಾಜ್ಯ ಸರ್ಕಾರ (Karnataka government) ಆದೇಶಿಸಿದೆ. ಇದರ ಕುರಿತಾದ ಪ್ರಗತಿ ಪರಿಶೀಲನೆಗೆ 30.09.2024 ಸಭೆ ಕರೆಯಲಾಗಿದೆ.

ಸರ್ಕಾರದ ಆದೇಶದಂತೆ ಕ್ರಮವಹಿಸಲು ಶಿಕ್ಷಣ ಇಲಾಖೆಯ ಜ್ಞಾಪನ ದಿನಾಂಕ: 03-08-2024ರಲ್ಲಿ ತಿಳಿಸಲಾಗಿತ್ತು. ಈ ವಿಷಯದ ಕುರಿತಾಗಿ ಆಗಿರುವ ಬೆಳವಣಿಗೆ ಪರಿಶೀಲಿಸಲು ದಿನಾಂಕ: 30.09.2024 ರಂದು ಅಪರಾಹ್ನ 3.00 ಗಂಟೆಗೆ ಆಯುಕ್ತರ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಸರೆನ್ಸ್‌ ಸಭೆ ಏರ್ಪಡಿಸಲಾಗಿದೆ.
ಮುಖ್ಯವಾಗಿ ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಶಾಲೆ – ಕಾಲೇಜಿಗೆ ದಾಖಲಾಗಿ ಪಾಠ ಕೇಳುವ ಅವಕಾಶವನ್ನು ಶಿಕ್ಷಣ ಇಲಾಖೆ ಕಲ್ಪಿಸಿದೆ.
ವಿದ್ಯಾರ್ಥಿಗಳು ಮರು ದಾಖಲಾತಿ ಪಡೆದು ಕೇವಲ ತಾವು ಫೇಲ್‌ ಆಗಿರುವ ವಿಷಯಕ್ಕೆ ಮಾತ್ರ ಕ್ಲಾಸ್‌ಗೆ ಹಾಜರಾಗಬಹುದು ಅಥವಾ ಎಲ್ಲ ವಿಷಯಗಳಿಗೂ ಹಾಜರಾಗಬಹುದು. ಇದು ವಿದ್ಯಾರ್ಥಿಯ ಆಸಕ್ತಿಗೆ ಬಿಟ್ಟ ವಿಷಯವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.


ಅದಲ್ಲದೆ ಪ್ರತಿ ವರ್ಷವು ಸಹ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪ್ರತಿ ವರ್ಷ ಕನಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಇಂತಹವರು ಬಹುತೇಕ ಶಿಕ್ಷಣ ಅರ್ಧಕ್ಕೆ ನಿಲ್ಲಿಸುತ್ತಾರೆ ಅದಕ್ಕಾಗಿ ಮರು ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.