Ayushman Card: ಕೇಂದ್ರ ಸರ್ಕಾರದಿಂದ 5 ಲಕ್ಷ ಉಚಿತ ವಿಮೆ ಪಡೆಯಲು ಹೀಗೆ ಅಪ್ಲೈ ಮಾಡಿ!

Ayushman Card: ಕೇಂದ್ರ ಸರಕಾರದ ಪ್ರಮುಖ ಆರೋಗ್ಯ ವಿಮಾ ಪಾಲಿಸಿಯಾಗಿರುವ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY) ಇದನ್ನು ಸೆಪ್ಟೆಂಬರ್ 2018 ರಲ್ಲಿ ಪರಿಚಯಿಸಲಾಗಿದ್ದು, ಈ ಯೋಜನೆಯು ಆರ್ಥಿಕವಾಗಿ ದುರ್ಬಲವಾಗಿರುವ ಹಿರಿಯ ನಾಗರಿಕರಿಗೆ (Senior Citizens) ಆರ್ಥಿಕ ಭದ್ರತೆ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು (Health care) ನೀಡುವ ಒದಗಿಸುವ ಗುರಿಯನ್ನು ಹೊಂದಿದೆ.

ಈ ಯೋಜನಾ ಫಲವನ್ನು ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ 70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ನೀಡುತ್ತಿದೆ. ಹೌದು, ಈಗಾಗಲೇ AB PM-JAY ವ್ಯಾಪ್ತಿಗೆ ಒಳಪಡುವ ಕುಟುಂಬಗಳಿಗೆ ಸೇರಿದ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಮುಖ್ಯವಾಗಿ ಈ ಯೋಜನೆಯ ಅಡಿಯಲ್ಲಿ ಸಿಗುವ ಪ್ರಯೋಜನಗಳು ಇಂತಿವೆ:

ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ, ಔಷಧ ಮತ್ತು ವೈದ್ಯಕೀಯ ಉಪಭೋಗ್ಯ,ತೀವ್ರ ನಿಗಾ ಸೇವೆಗಳು, ರೋಗನಿರ್ಣಯ ಮತ್ತು ಪ್ರಯೋಗಾಲಯ ತನಿಖೆಗಳು, ವೈದ್ಯಕೀಯ ಅಳವಡಿಕೆ ಸೇವೆಗಳು, ವಸತಿ ಪ್ರಯೋಜನಗಳು, ಆಹಾರ ಸೇವೆಗಳು, 15 ದಿನಗಳವರೆಗೆ ಆಸ್ಪತ್ರೆಗೆ ದಾಖಲಾದ ನಂತರದ ಆರೈಕೆ ಸೌಲಭ್ಯ ದೊರೆಯುತ್ತದೆ.

ಈ ಯೋಜನೆಯು ವಾರ್ಷಿಕವಾಗಿ 5 ಲಕ್ಷವರೆಗೆ ಹೆಚ್ಚುವರಿ ಟಾಪ್-ಅಪ್ ವಿಮಾ ರಕ್ಷಣೆಯನ್ನು ಒದಗಿಸಲಾಗುವುದು. ಈ ಯೋಜನೆ ಸೌಲಭ್ಯ ಪಡೆಯಲು ಈ ರೀತಿ ಅರ್ಜಿ ಅಪ್ಲೈ ಮಾಡಿ.

ಮೊದಲು PMJAY ವೆಬ್‌ಸೈಟ್‌ಗೆ ಭೇಟಿ ನೀಡಿ, ನಂತರ AM I eligible ಟ್ಯಾಬ್ ಮೇಲೆ ಕ್ಲಿಕ್ ಮಾಡಿ. OTP ನಮೂದಿಸುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ. ರಾಜ್ಯ ಮತ್ತು ಯೋಜನೆಯನ್ನು ಆಯ್ಕೆಮಾಡಿ.

*ಅರ್ಜಿದಾರರು https://arogya.karnataka.gov.in/ ಟ್ಯಾಬ್ ಅನ್ನು ತೆರೆಯಬೇಕು ಮತ್ತು ‘# SETU ನಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳಿ. ಈ ಲಿಂಕ್ ನಿಮ್ಮನ್ನು NHA’aSetu ಪೋರ್ಟಾಕ್ಕೆ ಕರೆದೊಯ್ಯುತ್ತದೆ. ನಂತರ ಅರ್ಜಿದಾರರು ಎಲ್ಲಾ ಕಡ್ಡಾಯ ಟ್ಯಾಬ್‌ಗಳನ್ನು ಭರ್ತಿ ಮಾಡುವ ಮೂಲಕ ಸ್ವತಃ ನೋಂದಾಯಿಸಿಕೊಳ್ಳುತ್ತಾರೆ ಮತ್ತು ನಂತರ ಎಲ್ಲಾ ಕಡ್ಡಾಯ ಟ್ಯಾಬ್‌ಗಳನ್ನು ಭರ್ತಿ ಮಾಡುವ ಮೂಲಕ ಸಬ್‌ಮಿಟ್ ಕ್ಲಿಕ್ ಮಾಡಿ.

*ಯಶಸ್ವಿ ನೋಂದಣಿಯ ನಂತರ, ಅರ್ಜಿದಾರರು ಈಗ ತಮ್ಮ KYC ಮಾಡುತ್ತಾರೆ ಮತ್ತು ಅನುಮೋದನೆಗಾಗಿ ಕಾಯಬೇಕು. ಸಕ್ಷಮ ಪ್ರಾಧಿಕಾರದಿಂದ ಕಾರ್ಡ್ (Ayushman Card) ಸಿದ್ಧವಾದ/ಅನುಮೋದಿಸಿದ ನಂತರ, ಫಲಾನುಭವಿಯು ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.

*ನಂತರ ‘ಆಯುಷ್ಮಾನ್ ಕಾರ್ಡ್ ಡೌನ್‌ಲೋಡ್’ ಮೇಲೆ ಕ್ಲಿಕ್ ಮಾಡಿ

*ರಾಜ್ಯವನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಯೊಂದಿಗೆ ಪರಿಶೀಲಿಸಿ.

*ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ.

Leave A Reply

Your email address will not be published.