Uttar pradesh: ಹೊತ್ತು, ಹೆತ್ತ ಅಮ್ಮನನ್ನೇ ಬಲತ್ಕರಿಸಿ, ಹೆಂಡ್ತಿ ತರ ಇರು ಎಂದ ಪಾಪಿ ಮಗ!

Share the Article

Uttar pradesh: ಮಕ್ಕಳಿಗೆ ತಾಯಿ ದೇವರಿಗೆ ಸಮಾನ. ಆದ್ರೆ ಇಲ್ಲೊಬ್ಬ ಹೊತ್ತು, ಹೆತ್ತ ಅಮ್ಮನನ್ನೇ ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರವೆಸಗಿ, ಹೆಂಡತಿ ತರ ಇದ್ದು ಬಿಡು ರಾಣಿ ತರ ನೋಡಿಕೊಳ್ಳುವೆ ಎಂದು ಡಿಮ್ಯಾಂಡ್ ಮಾಡಿದ್ದಾನೆ.

ಹೌದು, 60ವರ್ಷದ ಹೆತ್ತ ಅಮ್ಮನ ಮೇಲೆ ಮಗ ಪೈಶಾಚಿಕ ಕೃತ್ಯ ಎಸಗಿರುವ ಘಟನೆ ಉತ್ತರ ಪ್ರದೇಶ (Uttar Pradesh)ದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಈ ಪ್ರಕರಣ ಕುರಿತು 20 ತಿಂಗಳಲ್ಲೇ ವಿಚಾರಣೆ ಪೂರ್ಣಗೊಂಡಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆಯಾಗಿದೆ. ಅಲ್ಲದೇ ಕೋರ್ಟ್ 51 ಸಾವಿರ ರೂಪಾಯಿ ದಂಡ ವಿಧಿಸುವಂತೆ ಆದೇಶ ನೀಡಿದೆ.

ಮಾಹಿತಿ ಪ್ರಕಾರ ಜನವರಿ 16, 2023 ರಂದು ಕೊತ್ವಾಲಿ ದೇಹತ್ ಗ್ರಾಮದಲ್ಲಿ ಈ ಹೇಯ ಕೃತ್ಯ ನಡೆದಿದ್ದು, ಇಲ್ಲಿನ 36 ವರ್ಷದ ಯುವಕ ತನ್ನ 60 ವರ್ಷದ ತಾಯಿಯ ಮೇಲೆ ಅತ್ಯಾಚಾರವೆಸಗಿದ್ದ. ಮೇವು ತರುವ ನೆಪದಲ್ಲಿ ತಾಯಿಯನ್ನು ಕಬ್ಬು ತೋಟಕ್ಕೆ ಕರೆದುಕೊಂಡು ಹೋಗಿದ್ದ ಪಾಪಿ, ಅತ್ಯಾಚಾರವೆಸಗಿದ್ದ. ಅಷ್ಟೇ ಅಲ್ಲ ಕೃತ್ಯದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಾನು ಎಚ್ಚರವಾಗ್ತಿದ್ದಂತೆ ನನಗೆ ಬೆದರಿಕೆ ಹಾಕಿ, ಪ್ರತಿ ರಾತ್ರಿ ನನ್ನ ಜೊತೆ ಮಲಗುವಂತೆ ಹೇಳಿದ್ದ. ಅದಕ್ಕೆ ಒಪ್ಪಿ ಹೇಗೋ ಮನೆಗೆ ಬಂದ ನಾನು ವಿಷ್ಯವನ್ನು ಕಿರಿಯ ಮಗ ಮತ್ತು ಸೊಸೆಗೆ ಹೇಳಿದ್ದೆ ಎಂದು ಸಂತ್ರಸ್ತೆ ಕೋರ್ಟ್ ಮುಂದೆ ಹೇಳಿದ್ದಳು.

ನಂತರ ಸಂತ್ರಸ್ತೆ ಕಿರಿಯ ಮಗ ಜನವರಿ 22ರಂದು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ನಂತರ ಪೊಲೀಸರು ವಿಚಾರಣೆ ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಫಾಸ್ಟ್ ಟ್ರ್ಯಾಕ್ ಕೋರ್ಟ್2ರ ನ್ಯಾಯಾಧೀಶ ವರುಣ್ ಮೋಹಿತ್ ನಿಗಮ್, ಆರೋಪಿಯನ್ನು ತಪ್ಪಿತಸ್ಥನೆಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ 51 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಸದ್ಯ ತನ್ನ ಮಗನೇ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಕೋರ್ಟ್ (Court) ಮೆಟ್ಟಿಲೇರಿದ ತಾಯಿಗೆ ಜಯ ಸಿಕ್ಕಿದೆ.

Leave A Reply