Karnataka Politics: ಮುಡಾ ಅರ್ಜಿ ವಜಾ – ಇಂದೇ ಸಿದ್ದರಾಮಯ್ಯ ರಾಜೀನಾಮೆ? ಮುಂದಿನ ಸಿಎಂ ಇವ್ರೆನಾ? ಡಿಕೆಶಿ ಅಲ್ವಾ?
Karnataka Politics: ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣದಲ್ಲಿ (MUDA Case) ಸಂಕಷ್ಟ ಎದುರಾಗಿದೆ. ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್ ಅನುಮತಿ ನೀಡಿದ್ದು ಸಿಎಂ ಸಿದ್ದರಾಮಯ್ಯ ಅವರ (CM Siddaramaiah) ಅರ್ಜಿಯನ್ನು ವಜಾ ಮಾಡಿದೆ. ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ (Karnataka High Court) ಎತ್ತಿಹಿಡಿದಿದೆ. ಈ ಬೆನ್ನಲ್ಲೇ ಬಿಜೆಪಿಯು, ಸಿದ್ದರಾಮಯ್ಯ ರಾಜಿನಾಮೆ ಕೊಡಬೇಕೆಂದು ಆದೇಶಿಸಿದೆ. ಹಾಗಿದ್ರೆ ಇಂದೇ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರಾ? ಕೊಟ್ರೆ ಮುಖ್ಯಮಂತ್ರಿ ಯಾರಾಗುತ್ತಾರೆ? ಸಿಎಂ ಪಟ್ಟ ಡಿಕೆಶಿಗೋ ಇಲ್ಲ ಬೇರೆಯವರಿಗೋ?
ಹೈಕೋರ್ಟ್ ಅರ್ಜಿ ವಜಾ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸದ್ಯದಲ್ಲೇ ತನಿಖೆ ಆರಂಭವಾಗಲಿದೆ. ಈ ಹಿನ್ನೆಲೆ ಇಂದೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ ಎಂಬ ಪ್ರಶ್ನೆ ಮೂಡಿದೆ. ತನಿಖೆ ಮುಗಿಯುವವರೆಗೂ ಅಥವಾ ಈ ಕೇಸ್‌ನಿಂದ ಹೊರಬರುವವರೆಗೂ ಒಂದು ವೇಳೆ ಸಿದ್ದರಾಮಯ್ಯರವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲು ಬಯಸಿದ್ರೆ, ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಸಿಎಂ ರಾಜಕೀಯ ಶುರುವಾಗುತ್ತೆ. ಈಗಾಗಲೇ ಅನೇಕ ಹಿರಿಯ ನಾಯಕರು ಸಿಎಂ ಚೇರ್ ಮೇಲೆ ಕಣ್ಣಿಟ್ಟಿದ್ದಾರೆ. ಬಹಿರಂಗವಾಗಿ ಹೇಳಿಕೆ ಕೂಡ ನೀಡಿದ್ದಾರೆ. ಹೀಗಾಗಿ ಯಾರು ಸಿಎಂ ಪಟ್ಟಕ್ಕೇರುತ್ತಾರೆ ಎಂಬದು ಯಕ್ಷ ಪ್ರಶ್ನೆಯಾಗಿದೆ.
ಅಂದಹಾಗೆ ಈಗಾಗಲೆ ಮೇಲ್ಮನವಿ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಪರ ವಕೀಲರು ಸಿದ್ಧರಾಗಿದ್ದಾರೆ. ಈ ನಠುವೆ ನಾಯಕತ್ವಕ್ಕೆ ತೊಂದರೆಯಾದ್ರೆ ಪರ್ಯಾಯ ನಾಯಕನಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಅನ್ನೋದು ಈಗ ದೊಡ್ಡ ಪ್ರಶ್ನೆಯಾಗಿದೆ. ಆದರೆ ಈಗಲೇ ಸಿಎಂ ಬದಲಾಗ್ತಾರೆ ಅಂತ ಹೇಳುವುದಕ್ಕೆ ಆಗೋದಿಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೆದ್ರೆ, ಕಾಂಗ್ರೆಸ್ ಪಾಳಯದಲ್ಲಿ ಯಾರಾದರೂ ನಾಯಕತ್ವ ಬಗ್ಗೆ ಪ್ರಶ್ನೆ ಮಾಡಿದರೆ ಮಾತ್ರ ಸಿಎಂ ಬದಲಾವಣೆಯಾಗೋ ಚಾನ್ಸ್ ಹೆಚ್ಚಿರುತ್ತೆ. ಈ ವೇಳೆಗೆ ಕಾಂಗ್ರೆಸ್ ಪರ್ಯಾಯ ನಾಯಕರ ವ್ಯವಸ್ಥೆ ಮಾಡಿರಬೇಕು.
ಈ ನಡುವೆ ಒಂದು ವೇಳೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾದ ಸಂದರ್ಭ ಎದುರಾದರೆ ಆ ಸ್ಥಾನವನ್ನು ಅಲಂಕರಿಸುವ ನಾಯಕನ ಹೆಸರು ಇದೀಗ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಅದುವೇ ಈಗಿನ ಗೃಹ ಸಚಿವ ಪರಮೇಶ್ವರ್(Dr G Parameshwar)ಅವರ ಹೆಸರು. ಯಾಕೆಂದರೆ ಇತ್ತೀಚೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಡುವೆ ನಡೆದ ಸಭೆ ನಡೆಸಿದ್ದಾರೆ. ಆದರೆ ಸಭೆಯಲ್ಲಿ ನಡೆದ ಮಾತುಕತೆ ಬಗ್ಗೆ ಪರಮೇಶ್ವರ್ ತುಟಿ ಬಿಚ್ಚಿಲ್ಲ !!
ಇಷ್ಟೇ ಅಲ್ಲದೆ ಪರಮೇಶ್ವರ್ ಮತ್ತು ಜಾರಕಿಹೊಳಿ ಅವರು ಇತ್ತೀಚೆಗೆ ಅತೃಪ್ತ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿರುವುದು ಕೂಡಾ ಗಮನಾರ್ಹ. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ 2013ರಲ್ಲಿ ಅನಿರೀಕ್ಷಿತ ಸೋಲು ಕಂಡ ನಂತರ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಹೋಯಿತು. ಸಿದ್ದರಾಮಯ್ಯನವರ ಉತ್ತರಾಧಿಕಾರಿ ಎಂದೇ ಬಹುವಾಗಿ ನಂಬಲಾಗಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದ್ಯದ ಸ್ಥಿತಿಯಲ್ಲಿ ಡಿಫೆನ್ಸಿವ್ ಆಗಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಪರಮೇಶ್ವರ್ ಗೆ ಈ ಅವಕಾಶ ಶೀಘ್ರದಲ್ಲೇ ಒದಗಿ ಬರಬಹುದು ಎನ್ನಲಾಗಿದೆ.
ಒಟ್ಟಿನಲ್ಲಿ ‘ರಾಜ್ಯಪಾಲರು ನೀಡಿರುವ ಆದೇಶ ಸರಿಯಾಗಿದೆ. ಯಾವುದೇ ಖಾಸಗಿ ವ್ಯಕ್ತಿ ಸಿಎಂ ವಿರುದ್ದ ತನಿಖೆಗೆ ಕೋರಲು ಅವಕಾಶವಿದೆ’ ಎನ್ನುವ ಮೂಲಕ ಹೈಕೋರ್ಟ್ ದೂರುದಾರರ ಮನವಿಗಳನ್ನು ಎತ್ತಿ ಹಿಡಿದಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರು ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು ಕರ್ನಾಟಕದಲ್ಲಿ ಆಗುವ ಸಾಧ್ಯತೆಗಳಿವೆ.