Ayodhya: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ ! – ಅವಿಮುಕ್ತೇಶ್ವರಾನಂದ ಸರಸ್ವತಿ ಶ್ರೀಗಳಿಂದ ಅಚ್ಚರಿ ಹೇಳಿಕೆ.
Ayodhya: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಉತ್ತರಾಖಂಡದ ಜ್ಯೋತಿರ್ ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ(Avimumteshwara Saraswati Swamiji) ಭಾನುವಾರ(ಸೆ22) ಪ್ರತಿಪಾದಿಸಿದ್ದಾರೆ. ಅಲ್ಲದೆ ಅವರು ಇದಕ್ಕೆ ಕಾರಣವನ್ನೂ ನೀಡಿದ್ದಾರೆ.
ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ‘ಅಯೋಧ್ಯೆ(Ayodhya) ಯಲ್ಲಿದ್ದರೂ ರಾಮ ಮಂದಿರಕ್ಕೆ ಏಕೆ ತೆರಳಲಿಲ್ಲ ಎಂಬ ಪ್ರಶ್ನೆ ಶ್ರೀಗಳಿಗೆ ಎದುರಾಗಿದ್ದು, ಇದಕ್ಕೆ ಉತ್ತರಿಸಿದ ಸ್ವಾಮೀಜಿ ಅಯೋಧ್ಯೆಯ ರಾಮ ಮಂದಿರ ಅರ್ಧ ಮಾತ್ರ ಪೂರ್ಣಗೊಂಡಿದೆ. ಹೀಗೆ ಭಾಗಶಃ ನಿರ್ಮಿಸಲಾದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ನಾವು ಅಯೋಧ್ಯೆಯ ಮಂದಿರಕ್ಕೆ ತೆರಳಲಿಲ್ಲ ಎಂದು ಹೇಳಿದ್ದಾರೆ.
ಅಂದಹಾಗೆ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಭಾನುವಾರ(ಸೆ22) ಅಯೋಧ್ಯೆಯಿಂದ ರಾಷ್ಟ್ರವ್ಯಾಪಿ “ಗೋ ಧ್ವಜ ಸ್ಥಾಪನಾ ಭಾರತ ಯಾತ್ರೆ”ಯನ್ನು ಪ್ರಾರಂಭಿಸಿದ್ದು, ಗೋವುಗಳರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸಂವಿಧಾನಾತ್ಮಕ ನಿಬಂಧನೆಗಳನ್ನು ಮತ್ತು ಕಾನೂನುಗಳನ್ನು ಜಾರಿಗೊಳಿಸಬೇಕು. ನಮ್ಮ ದೇಶದಲ್ಲಿ ಗೋವನ್ನು ಗೋ ಮಾತೆ ಎಂದು ಪೂಜಿಸಲಾಗುತ್ತದೆ. ಆದರೂ, ಗೋವನ್ನು ಪೂಜಿಸುವ ದೇಶವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಗೋಮಾಂಸ ರಫ್ತುದಾರನಾಗಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
eyüp elektrikçi SEO hizmetleri ile web sitemizin performansı gözle görülür şekilde arttı. https://www.royalelektrik.com/