High Court: ‘ಮುಸ್ಲಿಮರು ಹೆಚ್ಚಾಗಿರೋ ಪ್ರದೇಶ ಪಾಕಿಸ್ತಾನ’ ಎಂದ ನ್ಯಾಯಮೂರ್ತಿ – ಮಾತು, ತೀರ್ಪಿನ ಮೂಲಕ ಫೇಮಸ್ ಆಗ್ತೀರೋ ಹೈಕೋರ್ಟ್ ಜಡ್ಜ್ ವಿರುದ್ಧ ಭಾರೀ ಆಕ್ರೋಶ
High Court : ತಮ್ಮ ಮಾತುಗಳು, ತೀರ್ಪುಗಳ ಮೂಲಕವೇ ಫೇಮಸ್ ಆಗುತ್ತಾ ಕನ್ನಡ ಜನಗಳಿಗೆ ಹತ್ತಿರಾಗುತ್ತಿರುವವರೆಂದರೆ ಅದು ಕರ್ನಾಟಕ ಹೈಕೋರ್ಟ್(Karnataka High Court) ನ್ಯಾಯಾಧೀಶಾರಾದ ವೇದವ್ಯಾಸಾಚಾರ್ ಶ್ರೀಷಾನಂದ(Vedavyasacharya Shreeshananda Sai) ಅವರು. ಆದರೀಗ ಇವರು ಮಾತಿನ ಭರದಲ್ಲಿ ಒಂದು ಎಡವಟ್ಟನ್ನು ಮಾಡಿಕೊಂಡಿದ್ದು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಹೌದು, ನ್ಯಾಯಾಧೀಶ ವೇದವ್ಯಾಸಾಚಾರ್ಯ ಅವರು ಗೋರಿಪಾಳ್ಯದ ಕುರಿತು ಉಲ್ಲೇಖಿಸುವಾಗ, ಮುಸ್ಲಿಮ್ ಸಮುದಾಯ ಹೆಚ್ಚಾಗಿರುವ ಪ್ರದೇಶವನ್ನು ಪಾಕಿಸ್ತಾನ ಎಂದು ಕರೆದಿರುವುದಾಗಿ ವರದಿಯಾಗಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಏನಿದೆ ವಿಡಿಯೋದಲ್ಲಿ?
ಇತ್ತೀಚೆಗೆ ನಡೆದ ವಿಚಾರಣೆಯೊಂದರ ಸಂದರ್ಭದಲ್ಲಿ, ‘ಮೈಸೂರು ರಸ್ತೆ ಮೇಲುಸೇತುವೆಗೆ ಹೋಗಿ ನೋಡಿ, ಪ್ರತಿ ಆಟೋರಿಕ್ಷಾದಲ್ಲೂ 10 ಮಂದಿಯಿರುತ್ತಾರೆ. ಇಲ್ಲಿ ಕಾನೂನು ಅನ್ವಯಿಸುವುದಿಲ್ಲ. ಯಾಕೆಂದರೆ, ಮೈಸೂರು ಮೇಲ್ಸೇತುವೆಯು ಗೋರಿಪಾಳ್ಯದಿಂದ ಎಡಕ್ಕೆ ಮಾರುಕಟ್ಟೆಗೆ ತೆರಳುತ್ತದೆ. ಇದು ಪಾಕಿಸ್ತಾನದಲ್ಲಿದೆ, ಭಾರತದಲ್ಲಲ್ಲ. ಇದು ವಾಸ್ತವ. ಅಲ್ಲಿಗೆ ಎಷ್ಟೇ ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯನ್ನು ನೇಮಕ ಮಾಡಿದರೂ, ಅವರನ್ನು ಥಳಿಸಲಾಗುತ್ತೆ” ಎಂದು ವೇದವ್ಯಾಸಾಚಾರ್ ಶ್ರೀಷಾನಂದ ಸಾಯಿ ಹೇಳಿದ್ದಾರೆ.
ಸದ್ಯ ಈ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು ಸಾಂವಿಧಾನಿಕ ಹುದ್ದೆಯಲ್ಲಿರುವವರೊಬ್ಬರು ಇಂತಹ ಹೇಳಿಕೆಯನ್ನು ನೀಡಲು ಹೇಗೆ ಸಾಧ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://twitter.com/WazBLR/status/1836435403366371804