Dakshina Kannada: ತಿಂಗಳಾಡಿ: ನಿದ್ದೆ ಮಂಪರಿಗೆ ಜಾರಿದ ಚಾಲಕ; ಚರಂಡಿಗೆ ಬಿದ್ದ ಓಮ್ನಿ

Share the Article

Dakshina Kannada: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರೊಂದು ರಸ್ತೆಯಿಂದ ತುಸು ದೂರದಲ್ಲಿ ಇರುವ ಚರಂಡಿಗೆ ಬಿದ್ದ ಘಟನೆಯೊಂದು ಸೆ.19 (ಇಂದು) ಬೆಳಿಗ್ಗೆ ನಡೆದಿರುವ ಕುರಿತು ವರದಿಯಾಗಿದೆ. ಈ ಘಟನೆ ನಡೆದಿರುವುದು ತಿಂಗಳಾಡಿ ಬಡಕೋಡಿ ರಸ್ತೆಯ ನೆಕ್ಕಿಲು ಎಂಬಲ್ಲಿ. ಚಾಲಕ ಮಾತ್ರ ಓಮ್ನಿಯಲ್ಲಿ ಇದ್ದ ಪರಿಣಾಮ ಯಾವುದೇ ಅಪಾಯವಾಗಿಲ್ಲ.

ಗಾಡಿ ತಿಂಗಳಾಡಿಯಿಂದ ರೆಂಜಲಾಡಿಗೆ ಹೋಗುತ್ತಿತ್ತು. ಈ ಘಟನೆ ಬೆಳಗಿನ ಜಾವ 7.30 ರ ಸುಮಾರಿಗೆ ನಡೆದಿದೆ. ರೆಂಜಲಾಡಿ ನಿವಾಸಿ ರಫೀಕ್‌ ಎಂಬುವವರು ಗಾಡಿ ಚಲಾಯಿಸುತ್ತಿದ್ದರು. ನಿದ್ದೆ ಮಂಪರು ಆವರಿಸಿದ ಕಾರಣ ವಾಹನ ಹತೋಟಿಗೆ ಸಿಗದೆ ರಸ್ತೆಯಿಂದ ಸುಮಾರು ಒಂದು ಮೀಟರ್‌ ದೂರದಲ್ಲಿರುವ ಚರಂಡಿಗೆ ಉರಳಿ ಬಿದಿದದೆ.

ವಾಹನ ಬಿದ್ದ ಜಾಗದ ಪಕ್ಕದಲ್ಲೇ ವಿದ್ಯುತ್‌ ಕಂಬವಿತ್ತು. ಅದಕ್ಕೆ ಡಿಕ್ಕಿ ಹೊಡೆಯುತ್ತಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ.
ನಂತರ ಕ್ರೇನ್‌ ಸಹಾಯದ ಮೂಲಕ ಓಮ್ನಿಯನ್ನು ಮೇಲಕ್ಕೆ ಎತ್ತಲಾಗಿದ್ದು, ಗಾಡಿ ಸಂಪೂರ್ಣ ಜಖಂ ಗೊಂಡಿರುವ ಕುರಿತು ವರದಿಯಾಗಿದೆ.

Leave A Reply