CM Atishi: ದೆಹಲಿಯ ನೂತನ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಯಾರು? ಕೇಜ್ರಿವಾಲ್ ಇವರನ್ನೇ ಸಿಎಂ ಮಾಡಿದ್ದೇಕೆ?

CM Atishi: ನಿರೀಕ್ಷೆಯಂತೆ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಸಚಿವೆ ಅತಿಶಿ ಮರ್ಲೆನಾ ಸಿಂಗ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌(Arvind Kejriwal) ಅವರ ನಿವಾಸದಲ್ಲಿ ನಡೆದ ಆಮ್‌ ಆದಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಅತಿಶಿ(CM Atishi) ಅವರನ್ನು ಶಾಸಕರು ಸರ್ವ ಸಮತವಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಶಾಸಕಾಂಗ ಸಭೆಯಲ್ಲಿ ಅತಿಶಿ ಸಿಂಗ್‌ ಹೆಸರನ್ನು ಖುದ್ದು ಕೇಜ್ರಿವಾಲ್‌ ಅವರೇ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲಾ ಶಾಸಕರು ಬೆಂಬಲ ನೀಡಿದರು. ಹಾಗಿದ್ರೆ ಯಾರು ಈ ಅತಿಶಿ? ಇವರನ್ನೇ ಸಿಎಂ ಸ್ಥಾನಕ್ಕೆ ಆರಿಸಿದ್ದೇಕೆ?

ದೆಹಲಿಯ ನೂತನ ಸಿಎಂ ಅತಿಶಿ ಯಾರು?
ಅತಿಶಿ 8 ಜೂನ್ 1981 ರಂದು ಜನಿಸಿದರು. ಅವರ ತಂದೆ-ತಾಯಿ ಇಬ್ಬರೂ ದೆಹಲಿ ವಿಶ್ವವಿದ್ಯಾಲಯದಲ್ಲಿ (ಅತಿಶಿ ತಾಯಿ ತಂದೆ) ಪ್ರಾಧ್ಯಾಪಕರಾಗಿದ್ದರು. ತಂದೆಯ ಹೆಸರು ವಿಜಯ್ ಸಿಂಗ್ ಮತ್ತು ತಾಯಿಯ ಹೆಸರು ತ್ರಿಪ್ತ ಸಿಂಗ್. ತಾಯಿ ತೃಪ್ತಾ ವಾಹಿ ಹಾಗೂ ತಂದೆ ವಿಜಯ್ ಸಿಂಗ್‌ ಇಬ್ಬರೂ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಅತಿಶಿ ಅವರು ಪ್ರವೀಣ್ ಸಿಂಗ್ ಅವರನ್ನು ವರಿಸಿದ್ದಾರೆ. ಅವರೂ ಶಿಕ್ಷಣ ತಜ್ಞ ಹಾಗೂ ಸಂಶೋಧಕ. ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹಲವು ವರ್ಷಗಳಿಂದ ಈ ಜೋಡಿ ಜತೆಗೂಡಿ ಕೆಲಸ ಮಾಡಿದೆ.

ಅತಿಶಿ ಶಿಕ್ಷಣ ಪಡೆದಿದ್ದೆಲ್ಲಿ?
ಅತಿಶಿ ತನ್ನ ಆರಂಭಿಕ ಶಿಕ್ಷಣವನ್ನು ದೆಹಲಿಯ ಸ್ಪ್ರಿಂಗ್‌ಡೇಲ್ ಶಾಲೆಯಲ್ಲಿ ಮಾಡಿದಳು. ಇದಾದ ನಂತರ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಚಿವೆನಿಂಗ್ ಸ್ಕಾಲರ್‌ಶಿಪ್‌ನಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯಕ್ಕೆ ಹೋಗಿ ಅಲ್ಲಿಂದ ಎರಡನೇ ಸ್ನಾತಕೋತ್ತರ ಪದವಿಯನ್ನು ಪಡೆದರು

ರಾಜಕೀಯ ಪ್ರವೇಶ:
2013ರ ಜನವರಿಯಲ್ಲಿ ಅತಿಶಿ ಅವರು ಆಮ್‌ ಆದ್ಮಿ ಪಕ್ಷ ಸೇರಿದರು. ಎಎಪಿಯ ನೀತಿ ನಿರೂಪಣೆಯಲ್ಲಿ ಅತಿಶಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡ ಅವರು, ಅಲ್ಲಿ ಪಡೆದ ಅನುಭವ ಹಾಗೂ ಜ್ಞಾನವನ್ನು ನೀತಿ ರೂಪಿಸುವಲ್ಲಿ ಧಾರೆ ಎರೆದಿದ್ದಾರೆ. 2015ರಲ್ಲಿ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದ ಜಲ ಸತ್ಯಾಗ್ರಹದಲ್ಲಿ ಎಎಪಿ ಮುಖಂಡ ಅಲೋಕ್ ಅಗರವಾಲ್‌ ಬೆನ್ನಿಗೆ ನಿಂತ ಅತಿಶಿ ಹೆಚ್ಚು ಸುದ್ದಿಯಾದರು. ಜತೆಗೆ ಕಾನೂನು ಸಂಘರ್ಷವನ್ನೂ ಎದುರಿಸಿದರು. ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಆದರೆ ಬಿಜೆಪಿ ನಾಯಕ ಗೌತಮ್ ಗಂಭೀರ್ ಅವರಿಂದ ಸೋಲನ್ನು ಎದುರಿಸಬೇಕಾಯಿತು.

ಅಂದಹಾಗೆ ಆಮ್‌ ಆದಿ ಪಕ್ಷದ ರಾಷ್ಟ್ರೀಯ ವ್ಯವಹಾರಗಳ ಸಮಿತಿಯ ಸದಸ್ಯರಾಗಿರುವ ಅತಿಶಿ ಸಿಂಗ್‌ ಕೇಜ್ರಿವಾಲ್‌ ಅವರ ನಂಬಿಗಸ್ಥ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಕೇಜ್ರಿವಾಲ್ ಸರಕಾರದಲ್ಲಿ ಲೋಕೋಪಯೋಗಿ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪ್ರವಾಸೋದ್ಯಮ, ಸಂಸ್ಕೃತಿ ಸೇರಿದಂತೆ ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್‌ ಮತ್ತು ಮನೀಶ್‌ ಸಿಸೋಡಿಯ ಜೈಲು ಪಾಲಾದ ಮೇಲೆ ಇಡೀ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಂಡವರಲ್ಲಿ ಇವರು ಒಬ್ಬರು. ದೆಹಲಿಯ ಶಿಕ್ಷಣ ಸಚಿವೆಯಾಗಿ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿದ್ದು, ಉತ್ತಮ ಶಿಕ್ಷಣ, ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಿದ್ದು ದೇಶದಲ್ಲೇ ಕ್ರಾಂತಿಕಾರಿ ಬೆಳೆವಣಿಗೆಯಾಗಿತ್ತು. ದೆಹಲಿಯಲ್ಲಿ ಈಗಲೂ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಗಳು ಎದ್ದು ನಿಂತಿರುವುದರ ಹಿಂದೆ ಅತಿಶಿಯವರ ಪರಿಶ್ರಮವಿದೆ.

ಅತಿಶಿ ಆಸ್ತಿ ವಿವರ :
2019ರ ಲೋಕಸಭೆ ಚುನಾವಣೆ ವೇಳೆ ಅತಿಶಿ ನೀಡಿದ ಚುನಾವಣಾ ಅಫಿಡವಿಟ್ ಪ್ರಕಾರ 1 ಕೋಟಿ 41 ಲಕ್ಷ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ. ಇದರಲ್ಲಿ ಆಕೆಯ ಪತಿಯ ಆದಾಯವೂ ಸೇರಿದೆ. ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹಣ ಠೇವಣಿ ಇಟ್ಟಿದ್ದಾರೆ. 2019 ರಲ್ಲಿ ಅತಿಶಿ ಅವರು ಕಾರು ಮತ್ತು ಆಭರಣದಂತಹ ಯಾವುದೇ ಆಸ್ತಿಯನ್ನು ಹೊಂದಿಲ್ಲ ಎಂದು ಎಫ್‌ಡಿ ತೆಗೆದುಕೊಳ್ಳಲಾಗಿದೆ.

‘ಅತಿಶಿ ಮರ್ಲೆನಾ’ ಹೆಸರಿನ ರಹಸ್ಯ:
ಮೊದಲು ಅತಿಶಿ ತನ್ನ ಪೂರ್ಣ ಹೆಸರನ್ನು ‘ಅತಿಶಿ ಮರ್ಲೆನಾ’ ಎಂದು ಬರೆಯುತ್ತಿದ್ದರು. ಅವರ ಹೆಸರಿನ ಹಿಂದೆಯೂ ಒಂದು ಕುತೂಹಲಕಾರಿ ಕಥೆಯಿದೆ. ವರದಿಗಳ ಪ್ರಕಾರ, ಆಕೆಯ ತಂದೆ ಮಾರ್ಕ್ಸ್ ಮತ್ತು ಲೆನಿನ್ ಅವರಿಂದ ಪ್ರಭಾವಿತರಾಗಿದ್ದರು ಮತ್ತು ಎರಡನ್ನೂ ಸಂಯೋಜಿಸುವ ಮೂಲಕ ತನ್ನ ಮಗಳ ಹೆಸರಿಗೆ ‘ಮರ್ಲೆನಾ’ ಎಂದು ಸೇರಿಸಿದರು. ಆದಾಗ್ಯೂ, 2019 ರ ಲೋಕಸಭೆ ಚುನಾವಣೆಗೆ ಮೊದಲು, ಅವರು ತಮ್ಮ ಹೆಸರಿನಿಂದ ಮರ್ಲೆನಾ ಹೆಸರನ್ನು ತೆಗೆದುಹಾಕಿದರು, ಈ ಮೂಲಕ ತಾನು ಕ್ರಿಶ್ಚಿಯನ್ ಎಂಬ ಗೊಂದಲ ಜನರಿಂದ ದೂರ ಮಾಡಿದರು.

Leave A Reply

Your email address will not be published.