PM Modi: ಸಿಜೆಐ ಮನೆಯ ಗಣೇಶೋತ್ಸವದಲ್ಲಿ ಪಾಲ್ಗೊಂಡ ವಿವಾದ – ಕೊನೆಗೂ ಮೌನ ಮುರಿದ ಮೋದಿ !!

PM Modi : ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್(CJI Chandrachud) ಅವರ ಮನೆಗೆ ಗಣೇಶ ಚತುರ್ಥಿಯಂದು ಗಣೇಶನ ಪೂಜೆಗಾಗಿ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಭೇಟಿ ನೀಡಿದ್ದು ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ಪ್ರತಿಪಕ್ಷಗಳು ಇದನ್ನು ಟೀಕೆ ಮಾಡುತ್ತಾ ತೀವ್ರವಾಗಿ ವಿರೋಧಿಸಿದ್ದವು. ಆದರೀಗ ಈ ಬೆನ್ನಲ್ಲೇ ಪ್ರಧಾನಿ ಮೋದಿಯವರು CJI ಮನೆ ಭೇಟಿ ಬಗ್ಗೆ ಮೌನ ಮುರಿದಿದ್ದಾರೆ.

ಹೌದು, ಸಿಜೆಐ ಡಿವೈ ಚಂದ್ರಚೂಡ್ ಅವರ ಮನೆಯಲ್ಲಿ ಗಣೇಶ ಪೂಜೆಯಲ್ಲಿ ಪಾಲ್ಗೊಂಡಿದ್ದಕ್ಕೆ ವಿವಾದ ಉಂಟಾದ ಹಿನ್ನೆಲೆ ಪ್ರತಿಕ್ರಿಯಿಸಿದ ಮೋದಿ ‘ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದಕ್ಕೆ ಕಾಂಗ್ರೆಸ್ ಮತ್ತು ಅದರ ‘ಪರಿವಾರ ವ್ಯವಸ್ಥೆ’ ಅತೃಪ್ತಿ ಹೊಂದಿದೆ. ಅಧಿಕಾರ ದಾಹದಿಂದ ಸಮಾಜ ಒಡೆಯುವ ಕೆಲಸದಲ್ಲಿ ತೊಡಗಿರುವವರು ಗಣೇಶ ಪೂಜೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ನಾನು ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಅದರ ಪರಿವಾರದ ಜನರು ಕೋಪಗೊಂಡಿರುವುದನ್ನು ನೀವು ನೋಡಿರಬೇಕು ಎಂದು ಹೇಳಿದ್ದಾರೆ.

ಅಲ್ಲದೆ ‘ಗಣೇಶ ಉತ್ಸವ ನಮ್ಮ ದೇಶಕ್ಕೆ ಕೇವಲ ನಂಬಿಕೆಯ ಹಬ್ಬವಲ್ಲ. ಇದು ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.ಆ ಕಾಲದಲ್ಲೂ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದ ಬ್ರಿಟಿಷರು ಗಣೇಶ ಉತ್ಸವವನ್ನು ದ್ವೇಷಿಸುತ್ತಿದ್ದರು. ಇಂದಿಗೂ ಸಮಾಜವನ್ನು ಒಡೆಯುವ, ಒಡೆಯುವ ಕೆಲಸದಲ್ಲಿ ನಿರತರಾಗಿರುವ ಅಧಿಕಾರ ದಾಹಿಗಳಿಗೆ ಗಣೇಶ ಪೂಜೆಗೆ ತೊಂದರೆಯಾಗುತ್ತಿದೆ. ನಾನು ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಅದರ ಪರಿವಾರ ಕೋಪಗೊಂಡಿರುವುದನ್ನು ನೀವು ನೋಡಿರಬೇಕು’ ಎಂದು ಹೇಳಿದ್ದಾರೆ.

Leave A Reply

Your email address will not be published.