Home Entertainment Bigg Boss Kannada 11: ಸೆ. 29ಕ್ಕೆ ಬಿಗ್ ಬಾಸ್ 11 ಪ್ರಾರಂಭ – ಕಿಚ್ಚನ...

Bigg Boss Kannada 11: ಸೆ. 29ಕ್ಕೆ ಬಿಗ್ ಬಾಸ್ 11 ಪ್ರಾರಂಭ – ಕಿಚ್ಚನ ನಿರೂಪಣೆ ಫಿಕ್ಸ್ !! ಆದ್ರೆ ಡೊಡ್ಮನೆ ಪ್ರವೇಶಿಸುವ ಸ್ಫರ್ಧಿಗಳ್ಯಾರು ?

Hindu neighbor gifts plot of land

Hindu neighbour gifts land to Muslim journalist

Bigg Boss Kannada 11: ಅಂತೂ ಇಂತೂ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟೆಂಬರ್ 29 ರಂದು ‘ಬಿಗ್ ಬಾಸ್ ಕನ್ನಡ 11’ ಶುರುವಾಗಲಿದ್ದು, ಹೋಸ್ಟ್ ಆಗಿ ಕಿಚ್ಚ ಸುದೀಪ್ ಅವರೇ ಮುಂದುವರೆಯಲಿದ್ದಾರೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಅವರನ್ನ ಕಂಡ ಮೇಲೆ ‘ಬಿಗ್ ಬಾಸ್’ ಪ್ರಿಯರಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಆದರೀಗ ಒಂದು ಒಂದು ಕುತೂಹಲ ತಣಿಯಿತು, ಈಗ ಮತ್ತೊಂದು ಕುತೂಹಲ ಎದುರಾಗಿದೆ. ಅದೇ ಈ ಸಲದ ಬಿಗ್ ಬಾಸ್ ಸ್ಪರ್ಧಿಗಳು ಯಾರು? ಎಂಬುದು.

ಹೌದು, ಇತ್ತೀಚೆಗೆ ನಡೆದ ಗಿಚ್ಚಿ ಗಿಲಿಗಿಲಿ(Giccha Giligili) ಫಿನಾಲೆಯಲ್ಲಿ ಬಿಗ್​ಬಾಸ್​ ಪ್ರೋಮೋ ಪ್ರದರ್ಶನ ಮಾಡುವ ಮೂಲಕ ಬಿಗ್​ಬಾಸ್​ ಸೀಸನ್​ 11(Bigg Boss Kannada -11) ಅನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಈಗಾಗಲೇ ಯಶಸ್ವಿ 10 ಆವೃತ್ತಿಯನ್ನು ಮುಗಿಸಿರುವ ಬಿಗ್​ಬಾಸ್ ಶೋ 11ನೇ ಆವೃತ್ತಿಗೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಈ ಬಾರಿ ಸಮ್​ಥಿಂಗ್​ ಸ್ಪೆಷಲ್​ ಸಹ ಇರಲಿದ್ದು, ಇದು ಹೊಸ ಅಧ್ಯಾಯ ಎಂದು ಹೇಳಿರುವುದರಿಂದ ಈ ಶೋ ಮೇಲೆ ಹೆಚ್ಚು ನಿರೀಕ್ಷೆ ಇದೆ. ಇಷ್ಟೆಲ್ಲ ಹೇಳಿದ ಬಳಿಕ ನಿಮ್ಮ ತಲೆಗೆ ಬರುವ ಮೊದಲ ಪ್ರಶ್ನೆಯೆಂದರೆ, ಈ ಬಾರಿ ಬಿಗ್​ಬಾಸ್​ನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದು. ಸದ್ಯದ ಮಾಹಿತಿ ಪ್ರಕಾರ ಕೆಲ ಸಂಭಾವ್ಯ ಸ್ಪರ್ಧಿಗಳ ಹೆಸರು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

https://www.instagram.com/reel/C_8TWmUCEDW/?igsh=MWZ0dnAwYjFwaXU0cg==

ಬಿಗ್ ಬಾಸ್ 11ರ ಸೀಸನ್ ಗೆ ಇದೀಗ ನಟಿ ಪ್ರೇಮಾ ಅವರ ಹೆಸರು ಸಹ ಕೇಳಿಬರುತ್ತಿದೆ. ಸಿನಿಮಾಗಳಿಂದ ಅಂತರ ಕಾಯ್ದುಕೊಂಡು ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿರುವ ಪ್ರೇಮಾ, ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಶುರುವಾಗಿದೆ. ಸೋಶಿಯಲ್​ ಮೀಡಿಯಾ ಸ್ಟಾರ್​ ವರ್ಷಾ ಕಾವೇರಿ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಖ್ಯಾತ ಯೂಟ್ಯೂಬರ್​ ಡಾ. ಬ್ರೋ ಹೆಸರು ಕೂಡ ಕೇಳಿಬಂದಿದೆ. ಆದರೆ, ಮೂರು ತಿಂಗಳ ಕಾಲ ಒಂದೇ ಕಡೆ ಇರಲು ನನ್ನಿಂದ ಸಾಧ್ಯವಿಲ್ಲ ಎಂದು ಡಾ. ಬ್ರೋ ಹೇಳಿದ್ದಾರೆ. ಒಂದು ವೇಳೆ ಅವರು ಬಂದರೂ ಕೂಡ ಅಚ್ಚರಿಪಡಬೇಕಿಲ್ಲ.

ಇದಲ್ಲದೆ ಹಾಸ್ಯನಟ ರಾಘವೇಂದ್ರ, ತುಕಾಲಿ ಸಂತೋಷ್​ ಪತ್ನಿ ಮಾನಸ, ನಟಿ ಹಾಗೂ ಮಾಡೆಲ್​ ಜ್ಯೋತಿ ರೈ, ನಟಿ ಹಾಗೂ ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ, ಸೋಶಿಯಲ್​ ಮೀಡಿಯಾ ಸ್ಟಾರ್​ ನಾಗರಾಜ್​ ಕುಡಪಲ್ಲಿ, ನಟಿ ಪ್ರಿಯಾ ಶಠಮರ್ಷಣ, ಕಾಮಿಡಿಯನ್​ ಮುಕಳೆಪ್ಪ, ನಟಿ ಪ್ರಿಯಾ ಸವದಿ, ಕಾಮಿಡಿಯನ್​ ಶಿವಪುತ್ರ, ಯುವ ರಾಜಕಾರಣಿ ನಿಶಾ ಯೋಗೇಶ್ವರ್​, ರಾಜಕಾರಣಿ ಮೊಹಮ್ಮದ್ ನಲಪಾಡ್​ ಹ್ಯಾರಿಸ್​, ನಟ ತ್ರಿವಿಕ್ರಮ್, ಸುನಿಲ್ ರಾವ್, ಭವ್ಯ ಗೌಡ, ಮೋಕ್ಷಾ ಪೈ ಹಾಗೂ ರೀಲ್ಸ್ ರೇಷ್ಮಾ ಹೀಗೆ ಬಹುತೇಕರ ಹೆಸರುಗಳು ಕೇಳಿ ಬರ್ತಿವೆ. ಅಲ್ಲದೆ ಮಾಧ್ಯಮ ಲೋಕದ ಆಯಂಕರ್​ಗಳಾದ ಸುಕನ್ಯ, ಜಯಪ್ರಕಾಶ್​ ಶೆಟ್ಟಿ, ಅಜಿತ್​ ಹನುಮಕ್ಕನವರ್​, ಹರೀಶ್​ ನಾಗರಾಜು ಹಾಗೂ ರಾಧಾ ಹೀರೇಗೌಡರ್​ ಹೆಸರುಗಳು ಕೂಡ ಕೇಳಿಬರುತ್ತಿವೆ. ಆದರೆ ಇದೆಲ್ಲದಕ್ಕೂ ಸೆಪ್ಟೆಂಬರ್ 29ರಂದು ಉತ್ತರ ಸಿಗಲಿದೆ.