Nitin Ghadkari: ಕೇಂದ್ರ ಮಂತ್ರಿ, ಬಿಜೆಪಿ ನೇತಾರ ನಿತಿನ್ ಗಡ್ಕರಿಗೆ ಪ್ರತಿಪಕ್ಷಗಳಿಂದ ಪ್ರಧಾನಿ ಹುದ್ದೆ ಆಫರ್ – ಗಡ್ಕರಿ ಪ್ರತಿಕ್ರಿಯೆ ಏನು ?

Nitin Ghadkari: ಲೋಕಸಭಾ ಚುನುವಾಣೆ (Lok Sabha election)ಯ ಫಲಿತಾಂಶ ಹೊರಬಿದ್ದು ಎನ್‌ಡಿಎ (NDA) ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 3 ತಿಂಗಳು ಕಳೆದಿದ್ದು, ಇದೀಗ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ (Nitin Gadkari) ರಹಸ್ಯ ವಿಚಾರವೊಂದನ್ನು ಬಹಿರಂಗಪಡಿಸಿ ತಮ್ಮ ಪಕ್ಷ, ಮಿತ್ರ ಪಕ್ಷಗಳಿಗೆ ಹಾಗೂ ಪ್ರತಿಪಕ್ಷಗಳಿಗೆಲ್ಲಾ ಅಚ್ಚರಿ ಉಂಟುಮಾಡಿದ್ದಾರೆ.

ಹೌದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು, ನನ್ನನ್ನು ಪ್ರಧಾನಿಹುದ್ದೆಗೆ ಬೆಂಬಲಿಸುವ ಭರವಸೆ ನೀಡಿದ್ದವು. ತಾವು ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಾದರೆ ತಮ್ಮನ್ನು ಬೆಂಬಲಿಸುವುದಾಗಿ ಪ್ರತಿಪಕ್ಷದ ನಾಯಕರೊಬ್ಬರು ಆದರೆ ನಾನು ಆ ಪ್ರಸ್ತಾವವನ್ನು ತಿರಸ್ಕರಿಸಿದ್ದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಹಿರಂಗಪಡಿಸಿದ್ದಾರೆ. ಸದ್ಯ ಈ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಲ್ಲದೆ ಈ ಕುರಿತು ಮಾತನಾಡಿದ ಅವರು “ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ನೀವು ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಾದರೆ ನಾವು ಬೆಂಬಲಿಸುತ್ತೇವೆ ಎಂದು ಪ್ರತಿಪಕ್ಷದ ನಾಯಕರೊಬ್ಬರು ನನ್ನ ಬಳಿ ಹೇಳಿದ್ದರು. ನಾನು ಈ ಕೊಡುಗೆಯನ್ನು ಸ್ಪಷ್ಟವಾಗಿ ನಿರಾಕರಿಸಿದೆ. ನೀವು ನನ್ನನ್ನು ಏಕೆ ಬೆಂಬಲಿಸಬೇಕು ಮತ್ತು ನಾನು ನಿಮ್ಮ ಬೆಂಬಲವನ್ನು ಏಕೆ ತೆಗೆದುಕೊಳ್ಳಬೇಕು ಎಂದು ನಾನು ಪ್ರಶ್ನಿಸಿದೆ. ಪ್ರಧಾನಿಯಾಗುವುದು ನನ್ನ ಜೀವನದ ಗುರಿಯಲ್ಲ. ನಾನು ನನ್ನ ನಂಬಿಕೆ ಮತ್ತು ಸಂಘಟನೆಗೆ ನಿಷ್ಠನಾಗಿದ್ದೇನೆ ಮತ್ತು ನಾನು ಯಾವುದೇ ಹುದ್ದೆಗಾಗಿ ರಾಜಿ ಮಾಡಿಕೊಳ್ಳಲು ಹೋಗುವುದಿಲ್ಲ” ಎಂದು ಬಿಜೆಪಿಯ ಹಿರಿಯ ನಾಯಕ ತಿಳಿಸಿದ್ದಾರೆ.

ಹೀಗೆ ಸಾರ್ವತ್ರಿಕ ಚುನಾವಣೆಗೆ ಮುನ್ನ ದೇಶದ ಅತ್ಯುನ್ನತ ಹುದ್ದೆಗೆ ತಮ್ಮ ಹೆಸರನ್ನು ಪರಿಗಣಿಸಲಾಗಿತ್ತು ಎಂಬ ವದಂತಿಗಳನ್ನು ದೃಢಪಡಿಸಿದ್ದಾರೆ. ಅಂದಹಾಗೆ ಗಡ್ಕರಿ ಅವರು ಕಳೆದ ಮಾರ್ಚ್ ನಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಪಿಎಂ ಹುದ್ದೆಗೆ ನಾನು ರೇಸ್ ನಲ್ಲಿಲ್ಲ. ಸಂಘ ಸಿದ್ಧಾಂತಕ್ಕೆ ನಾನು ಬದ್ಧ ಎಂದು ಹೇಳಿದ್ದರು.

Leave A Reply

Your email address will not be published.