Oyo ರೂಮ್ ಗಳನ್ನು ಹೆಚ್ಚು ಬಳಸೋದೇ ಧಾರ್ಮಿಕ ಯಾತ್ರಾರ್ಥಿಗಳು – CEO ಬಿಚ್ಚಿಟ್ಟರು ಶಾಕಿಂಗ್ ಸತ್ಯ !!

Oyo: ‘ಓಯೋ’ ರೂಮ್ ಎಂದಾಕ್ಷಣ ಇಂದು ಎಲ್ಲರಿಗೂ ನೆನಪಾಗುವುದೇ ಬೇರೆ. ಅಲ್ಲದೆ ಅದನ್ನು ಆರಂಭಿಸಿರೋ ಉದ್ದೇಶ ಕೂಡ ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಅದರ ಬಗ್ಗೆ ಏನೇ ನೆನಪಾದರೂ ತಪ್ಪೇನಲ್ಲ. ಇನ್ನು ದೇಶದ ಬಹುತೇಗ ಚಿಕ್ಕ ಮತ್ತು ದೊಡ್ಡ ನಗರಗಳಲ್ಲಿ ಓಯೋ ಹೋಟೆಲ್‌ಗಳು ಜಾಲ್ತಿಯಲ್ಲಿವೆ. ಹೆಚ್ಚಾಗಿ ಪ್ರವಾಸಿ ಸ್ಥಳಗಳಿಗೆ ಹತ್ತಿರವಿರುವ ನಗರಗಳಲ್ಲಿ ಈ ಹೋಟೆಲ್‌ಗಳು ಕಂಡು ಬರುತ್ತೆ ಹಾಗಿದ್ರೆ. ಈ ಓಯೋ ಹೋಟೆಲ್‌ಗಳಿಗೆ ಯಾರು ಹೆಚ್ಚು ಹೋಗ್ತಾರೆ ಅನ್ನೋದು ಹಲವರ ಕುತೂಹಲ. ಈ ಕುರಿತು ಅಚ್ಚರಿ ಸತ್ಯವೊಂದನ್ನು ಸ್ವತಃ ಓಯೋ ಸಿಇಓ(Oyo CEO) ಅವರೇ ಬಹಿರಂಗಪಡಿಸಿದ್ದಾರೆ.

ಪ್ರೇಮಿಗಳು ಓಯೋವನ್ನು ಹೆಚ್ಚು ಬಳಸುತ್ತಾರೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಓಯೋದ ಸಿಇಒ ರಿತೇಶ್ ಅಗರ್ವಾಲ್ ಸಂದರ್ಶನವೊಂದರಲ್ಲಿ ಓಯೋವನ್ನು ಯಾರು ಹೆಚ್ಚು ಬಳಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಹೌದು, ಸಂದರ್ಶನದಲ್ಲಿ ರಿತೇಶ್ ಅವರು ‘ಓಯೊದಲ್ಲಿ ಧಾರ್ಮಿಕ ಯಾತ್ರಾರ್ಥಿಗಳಿಗಾಗಿ ಸಮಯ ಸೀಮಿತ ವಸತಿ ಸೌಲಭ್ಯಗಳನ್ನು ರಚಿಸಲಾಗಿದೆ. ಕೆಲವೊಮ್ಮೆ ಅವರು ಪ್ರಯಾಣದಿಂದ ದಣಿದಿರುವಾಗ ತಮ್ಮನ್ನು ರಿಫ್ರೆಶ್ ಮಾಡಲು ಅಥವಾ ಕಡಿಮೆ ಸಮಯದ ನಿದ್ರೆ ತೆಗೆದುಕೊಳ್ಳಲು ಈ ಸೌಲಭ್ಯವನ್ನು ಹೆಚ್ಚಾಗಿ ಬಳಸುತ್ತಾರೆ. ಈ ಸೌಲಭ್ಯದಿಂದಾಗಿ ಜನರ ಹಣವನ್ನು ಉಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಆಧ್ಯಾತ್ಮಿಕ ನಗರಗಳಲ್ಲಿ ಓಯೋ ಕೊಠಡಿಗಳ ಬೇಡಿಕೆಯು ಮಹತ್ತರವಾಗಿ ಹೆಚ್ಚಾಗಿದೆ’ ಎಂದು ಹೇಳಿದ್ದಾರೆ.

ಅಂದಹಾಗೆ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ವಸತಿ ನೀಡುವ Oyo ತನ್ನ ಗ್ರಾಹಕರಿಗಾಗಿ ಕಡಿಮೆ ವೆಚ್ಚದಲ್ಲಿ ವಸತಿ ಸೌಲಭ್ಯ ನೀಡುತ್ತದೆ. ಓಯೋದಲ್ಲಿ ರೂಮ್‌ಗಳನ್ನು ಎರಡರಿಂದ ನಾಲ್ಕು ಗಂಟೆಗಳ ಕಾಲ ಮಾತ್ರ ಬುಕ್ ಮಾಡಬಹುದು. ಒಂದು ದಿನಕ್ಕೆ ಅಲ್ಲ, ನೀವು ಹೊರಗಿನ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಲು ಬಯಸಿದರೆ, ನೀವು ಸಂಪೂರ್ಣ ಒಂದು ದಿನದ ದರವನ್ನು ಪಾವತಿಸಬೇಕಾಗುತ್ತದೆ. ಆದರೆ ಓಯೋ ಕೆಲವು ಗಂಟೆಗಳ ಶುಲ್ಕ ಮಾತ್ರ ವಿಧಿಸುತ್ತದೆ. ಇದು ಅನೇಕ ಜನರಿಗೆ ಅನುಕಲ ಮಾಡಿಕೊಡುತ್ತದೆ.

1 Comment
  1. beşiktaş elektrikçi says

    beşiktaş elektrikçi Google SEO sayesinde web sitemin trafiği büyük ölçüde arttı. Kesinlikle öneririm! https://www.royalelektrik.com/

Leave A Reply

Your email address will not be published.