Actor Darshan: ಪೆರೋಲ್ ಮೇಲೆ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ನನ್ನು ಹೊರತರಲು ಪ್ಲ್ಯಾನ್
Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ದರ್ಶನ್ ಹಾಗೂ ಗ್ಯಾಂಗ್‌ಗೆ ಇಂದಿಗೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಪೂರ್ಣಗೊಳ್ಳಲಿದೆ. ಇಂದು (ಸೆ.9) ಕೋರ್ಟ್‌ನಲ್ಲಿ ಇದರ ವಿಚಾರಣೆ ನಡೆಯಲಿದೆ. ಹಾಗೆನೇ ದರ್ಶನ್‌ನನ್ನು ಪೆರೋಲ್ ಮೇಲೆ ತರುವ ಪ್ಲ್ಯಾನ್ ನಡೆಯುತ್ತಿದೆ ಎನ್ನಲಾಗಿದೆ
ಇಂದು ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಂಡರೂ, ಜಾಮೀನು ಸಿಗುವುದು ದೂರದ ಮಾತು. ಹಾಗಾಗಿ ದರ್ಶನ್ ಅವರನ್ನು ಪೆರೋಲ್ ಮೇಲೆ ಎರಡು ಗಂಟೆ ಹೊರಗೆ ತರುವ ಪ್ಲ್ಯಾನ್ ನಡೆದಿದೆ ಎನ್ನುವ ವಿಚಾರವೊಂದು ವರದಿಯಾಗಿದೆ. ಇದನ್ನು ನಿರ್ಮಾಪಕಿ ಶಿಲ್ಪಾ ಶ್ರೀನಿವಾಸ್ ಹೇಳಿರುವುದಾಗಿ ಟಿವಿ9 ವರದಿ ಮಾಡಿದೆ.
ಲಾಯರ್ ಬಳಿ ದರ್ಶನ್ ಅವರನ್ನು ಹೊರಗೆ ತರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತಾಡಿದ್ದೇನೆ. ಅದೆಷ್ಟು ಶುಲ್ಕ ಆಗುತ್ತದೆಯೋ ಅಷ್ಟು ಕೊಟ್ಟು ಕರೆ ತರುವ ಆಲೋಚನೆ ಇದೆ. ಅಕ್ಟೋಬರ್ 22 ರಂದು ಉಪೇಂದ್ರ ನಿರ್ದೇಶನ ಮಾಡಿದ್ದ “ಉಪೇಂದ್ರ” ಚಿತ್ರಕ್ಕೆ 25 ವರ್ಷ ಆಗುತ್ತದೆ. ಇದನ್ನು ಸಂಭ್ರಮ ಮಾಡಲು ಶಿಲ್ಪಾ ಅವರು ನಿರ್ಧಾರ ಮಾಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಸಿನಿಮಾ ರಂಗದ ಉಪೇಂದ್ರ, ಸುದೀಪ್, ದರ್ಶನ್ ಸೇರಿ ಎಲ್ಲಾ ಸ್ಟಾರ್‌ಗಳನ್ನು ಒಂದೇ ವೇದಿಕೆಗೆ ತರುವ ಪ್ಲ್ಯಾನ್ ಇರುವುದರಿಂದ ದರ್ಶನ್ ಅವರನ್ನು ಪೆರೋಲ್ ಮೇಲೆ ತರುವ ಆಲೋಚನೆ ಶಿಲ್ಪಾಗೆ ಇದೆ.
ದರ್ಶನ್ ಅವರನ್ನು ಹೊರಗೆ ತರಲು ಪ್ರಯತ್ನ ಮಾಡುತ್ತಿರುವುದು ಈ ವಿಶೇಷ ಕಾರ್ಯಕ್ರಮಕ್ಕಾಗಿ. ಇದಕ್ಕೆ ಅವಕಾಶ ಸಿಗುತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ.
Baddiehubs I truly appreciate your technique of writing a blog. I added it to my bookmark site list and will