Home Entertainment Soundarya: ಈ ಒಬ್ಬ ವ್ಯಕ್ತಿಗೆ ಮಾತ್ರ ಗೊತ್ತಿತ್ತಂತೆ ನಟಿ ಸೌಂದರ್ಯ ಸಾವಿನ ರಹಸ್ಯ- ಆದರೂ ತಪ್ಪಿಸದೆ...

Soundarya: ಈ ಒಬ್ಬ ವ್ಯಕ್ತಿಗೆ ಮಾತ್ರ ಗೊತ್ತಿತ್ತಂತೆ ನಟಿ ಸೌಂದರ್ಯ ಸಾವಿನ ರಹಸ್ಯ- ಆದರೂ ತಪ್ಪಿಸದೆ ಸುಮ್ಮನಿದ್ದಿದ್ದೇಕೆ?

Soundarya

Hindu neighbor gifts plot of land

Hindu neighbour gifts land to Muslim journalist

Soundarya: ಭಾರತೀಯ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ ನಟಿ ಸೌಂದರ್ಯ. 1992ರಲ್ಲಿ ‘ಗಂಧರ್ವ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ(Sandalwood)ಎಂಟ್ರಿ ನೀಡಿದ ಸೌಂದರ್ಯ ಆನಂತರ ಪರಭಾಷೆಗೂ ಕಾಲಿಟ್ಟರು. ನಂತರ ದಿನಗಳಲ್ಲಿ ಪಂಚಭಾಷಾ ತಾರೆಯಾಗಿ ಮಿಂಚಿದರು. ಭಾರತೀಯ ಚಿತ್ರರಂಗದಲ್ಲಿ ಸೌಂದರ್ಯಾ(Soundarya) ಕೆಲಸ ಮಾಡಿದ್ದು ಹನ್ನೆರಡೇ ವರ್ಷವಾದರೂ, ಅವರು ಮಾಡಿರುವ ಸಾಧನೆಗಳು ಒಂದೆರಡಲ್ಲ!

ಆರಂಭದಲ್ಲಿ ಸೌಂದರ್ಯ ನಟಿಸಿದ ಎಲ್ಲಾ ಸಿನಿಮಾಗಳು ಹಿಟ್ ಆದರೂ ನಂತರದಲ್ಲಿ ಸೌಂದರ್ಯ ಜನಪ್ರಿಯತೆ ಕಡಿಮೆಯಾಯಿತು. ಈ ಸಮಯದಲ್ಲಿ ರಾಜಕೀಯಕ್ಕೆ ಹೋಗಲು ಯೋಚಿಸಿದರು. ರಾಜಕೀಯ ಪ್ರವೇಶ ಮಾಡಿಯೇಬಿಟ್ಟರು. 2004 ರಲ್ಲಿ ಬಿಜೆಪಿ(BJP) ಸೇರಿದ ಸೌಂದರ್ಯ 17 ಏಪ್ರಿಲ್ 2004 ರಂದು, ಪಕ್ಷದ ಪ್ರಚಾರದ ಜೊತೆಗೆ ಮತ ಯಾಚನೆಗಾಗಿ ತಮ್ಮ ಸಹೋದರ ಅಮರನಾಥ್ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದರು. ಆದರೆ ಎಲ್ಲಿ ಹೆಲಿಕಾಪ್ಟರ್ ಮೇಲಕ್ಕೆ ಹಾರಿತೋ ಅಲ್ಲೇ ತಾಂತ್ರಿಕ ದೋಷದಿಂದ ಸ್ಫೋಟಗೊಂಡು ಸೌಂದರ್ಯ ಮತ್ತು ಅವರ ಸಹೋದರ ಪ್ರಾಣ ಕಳೆದುಕೊಂಡರು.

ಈ ಘಟನೆ ಇಡೀ ದೇಶವನ್ನೇ ಶೋಕ ಸಾಗರದಲ್ಲಿ ಮುಳುಗಿಸಿತು. ಸೌಂದರ್ಯ ಅಭಿಮಾನಿಗಳನ್ನು ಕಂಗಾಲಾಗಿಸಿತು. ಈ ಸತ್ಯವನ್ನು ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಬಹಳ ಸಮಯ ಬೇಕಾಯಿತು. ಆಗಲೇ ಮದುವೆಯಾಗಿದ್ದ ಸೌಂದರ್ಯ ಮೃತಪಟ್ಟ ಸಮಯದಲ್ಲಿ ಗರ್ಭಿಣಿಯಾಗಿದ್ದರಿಂದ ಈ ವಿಷಯ ಅಭಿಮಾನಿಗಳನ್ನು ಮತ್ತಷ್ಟು ಮನೋವೇದನೆಗೆ ಒಳಗಾಗುವಂತೆ ಮಾಡಿತು.

ಸೌಂದರ್ಯಳ ಸಾವಿನ ಈ ಸಂದರ್ಭದಲ್ಲಿ ಆಗ ಒಂದು ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸೌಂದರ್ಯ ಸಾಯುತ್ತಾರೆ ಎಂಬ ವಿಷಯ ಒಬ್ಬ ವ್ಯಕ್ತಿಗೆ ತಿಳಿದಿತ್ತು ಎಂದು ಜೋರಾಗಿ ಪ್ರಚಾರ ನಡೆಯಿತು. ಈ ವಿಚಾರ ಕೇಳಿ ಎಲ್ಲರೂ ಶಾಕ್ ಆಗಿದ್ದರು. ಯಾರದು ಯಾರದು ಎಂದು ಹುಡುಕಾಡಿದ್ದರು. ಅವರು ಬೇರೆ ಯಾರೂ ಅಲ್ಲ, ಅವರ ತಂದೆ.

ಹೌದು ಸೌಂದರ್ಯ ಜಾತಕದ ಪ್ರಕಾರ ಅವರು ಸಾಯುತ್ತಾರೆ ಎಂದು ಜ್ಯೋತಿಷಿಗಳು ಮೊದಲೇ ತನ್ನ ತಂದೆಗೆ ಹೇಳಿದ್ದರಂತೆ. ಆದರೆ ಆಗ ಅವರು ಈ ವಿಷಯವನ್ನು ಅಷ್ಟಾಗಿ ನಂಬಲಿಲ್ಲ. ಜೊತೆಗೆ ಎಂದು ತಲೆಕೆಡಿಸಿಕೊಳ್ಳಲಿಲ್ಲವಂತೆ. ನಿಜಕ್ಕೂ ಇದರಲ್ಲಿ ಎಷ್ಟು ಸತ್ಯವಿದೆ ಎಂಬುದು ತಿಳಿದಿಲ್ಲ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಈ ಗಾಸಿಪ್ ಹಲ್‌ಚಲ್ ಸೃಷ್ಟಿಸಿತ್ತು.

ಏನೇ ಇರಲಿ ಅಷ್ಟೊಂದು ಅದ್ಭುತ ನಟಿ.. ಮನಸ್ಸಿನಿಂದಲೂ ಒಳ್ಳೆಯವರಾಗಿದ್ದ ತಾರೆ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದು ಬಹಳ ದುಃಖಕರ. ಸೌಂದರ್ಯ ನಿಧನರಾಗಿ ಈ ವರ್ಷಕ್ಕೆ 20 ವರ್ಷಗಳು ತುಂಬುತ್ತಿದೆ. ಆದರೂ ಅವರು ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಅವರ ಸಿನಿಮಾಗಳನ್ನು ನೋಡುವಾಗಲೆಲ್ಲಾ ಮನಸ್ಸಿನಲ್ಲಿ ಮೂಡಿ ಬರುತ್ತಾರೆ.

Soundarya: ಈ ಒಬ್ಬ ವ್ಯಕ್ತಿಗೆ ಮಾತ್ರ ಗೊತ್ತಿತ್ತಂತೆ ನಟಿ ಸೌಂದರ್ಯ ಸಾವಿನ ರಹಸ್ಯ- ಆದರೂ ತಪ್ಪಿಸದೆ ಸುಮ್ಮನಿದ್ದಿದ್ದೇಕೆ? Soundarya: ಭಾರತೀಯ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ ನಟಿ ಸೌಂದರ್ಯ. 1992ರಲ್ಲಿ ‘ಗಂಧರ್ವ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ(Sandalwood)ಎಂಟ್ರಿ ನೀಡಿದ ಸೌಂದರ್ಯ ಆನಂತರ ಪರಭಾಷೆಗೂ ಕಾಲಿಟ್ಟರು. ನಂತರ ದಿನಗಳಲ್ಲಿ ಪಂಚಭಾಷಾ ತಾರೆಯಾಗಿ ಮಿಂಚಿದರು. ಭಾರತೀಯ ಚಿತ್ರರಂಗದಲ್ಲಿ ಸೌಂದರ್ಯಾ(Soundarya) ಕೆಲಸ ಮಾಡಿದ್ದು ಹನ್ನೆರಡೇ ವರ್ಷವಾದರೂ, ಅವರು ಮಾಡಿರುವ ಸಾಧನೆಗಳು ಒಂದೆರಡಲ್ಲ!