Home Entertainment Ramya: ರಾಜಸ್ಥಾನ ಮೂಲದ ಉದ್ಯಮಿ ಜೊತೆ ನಟಿ ರಮ್ಯಾ ಮದುವೆ? ಮೋಹಕತಾರೆ ಕೊಟ್ರು ಬಿಗ್ ಅಪ್ಡೇಟ್...

Ramya: ರಾಜಸ್ಥಾನ ಮೂಲದ ಉದ್ಯಮಿ ಜೊತೆ ನಟಿ ರಮ್ಯಾ ಮದುವೆ? ಮೋಹಕತಾರೆ ಕೊಟ್ರು ಬಿಗ್ ಅಪ್ಡೇಟ್ !!

Ramya

Hindu neighbor gifts plot of land

Hindu neighbour gifts land to Muslim journalist

Ramya: ಸ್ಯಾಂಡಲ್‌ವುಡ್ ಕ್ವೀನ್ ಮೋಹಕ ತಾರೆ ರಮ್ಯಾ(Ramya) ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಅಲ್ಲಿ ಮದುವೆ ವಿಷಯ ಪ್ರಸ್ತಾಪ ಆಗಿಯೇ ಆಗತ್ತೆ. ಈ ವೀಕೆಂಡ್ ನಲ್ಲೂ ರಮ್ಯಾ ಮದುವೆ ವಿಷ್ಯ ಬ್ರೇಕಿಂಗ್ ಆಗಿತ್ತು. ಚಂದನವನದ ತುಂಬಾ ರಮ್ಯ ಉದ್ಯಮಿಯೊಬ್ಬರನ್ನು ಮದುವೆ ಆಗುವುದು ಪಕ್ಕಾ ವಿಚಾರ ಗುಲ್ಲೆಬ್ಬಿತ್ತು.

ಹೌದು, ರಾಜಸ್ಥಾನ(Rajasthan) ಮೂಲದ ಟೆಕ್ಸ್‌ಟೈಲ್ ಉದ್ಯಮಿ (Businessman) ಜೊತೆ ರಮ್ಯಾ ನಿಶ್ಚಿತಾರ್ಥ ಆಗಿದೆ ಅನ್ನೋ ವಿಚಾರ ಗಾಂದಿನಗರದ ಗಲ್ಲಿಗಲ್ಲಿಗಳಲ್ಲಿ ಇವತ್ತು ಕೇಳಿ ಬಂತು. ಆಪ್ತರು ಹೇಳುವಂತೆ ಅಕ್ಟೋಬರ್ ನಲ್ಲಿ ಎಂಗೇಜ್‌ಮೆಂಟ್ ಆಗಲಿದ್ದಾರಂತೆ. ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯಲಿದೆ. ರಾಜಸ್ಥಾನದ ಲ್ಲಿ ಆರತಕ್ಷತೆ ನಡೆಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇದನ್ನು ಅವರ ಆಪ್ತರು ಕೂಡ ಖಚಿತ ಪಡಿಸಿದ್ದು, ಅವರ ಹುಟ್ಟುಹಬ್ಬದ ದಿನ (ನವೆಂಬರ್ 29) ಮದುವೆ ನಡೆಯಲಿದೆ ಎಂದು ಸುದ್ದಿ ಹರಡಿದೆ. ಆದರೆ ಅದು ನಿಜವೇ? ಇಲ್ಲಿದೆ ನೋಡಿ ಉತ್ತರ.

ಈ ಸುದ್ದಿ ನಿಜವೇ ಎಂದು ಕನ್ಫರ್ಮ್‌ ಮಾಡಿಕೊಂಡಾಗ, ಅದು ನಿಜವಲ್ಲ, ನಟಿ ರಮ್ಯಾ ಅವರು ಆಪ್ತರೊಬ್ಬರ ಫಂಕ್ಷನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೇ ಈ ಸುದ್ದಿ ಹಬ್ಬಿದೆ ಎನ್ನಲಾಗಿದೆ. ಈ ಸುದ್ದಿ ಹಬ್ಬಿದಾಗ ಬಹಳಷ್ಟು ಮಂದಿ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಚರ್ಚೆ ಮಾಡತೊಡಗಿದ್ದರು ಕಾರಣ, ನಟಿ ರಮ್ಯಾ ಅವರನ್ನು ಹೋದಲ್ಲಿ ಬಂದಲ್ಲಿ ಎಲ್ಲರೂ ಮದುವೆ ಬಗ್ಗೆ ಕೇಳುತ್ತಿದ್ದರು. ಆದರೀಗ ಈ ಎಲ್ಲಾ ವಿಚಾರಕ್ಕೆ ರಮ್ಯ ತೆರೆ ಎಳೆದಿದ್ದಾರೆ.

ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ರಮ್ಯಾ, ಇದೊಂದು ರೂಮರ್ಸ್ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಇನ್ನು ಹಲವಾರು ಬಾರಿಯೂ ಮದುವೆ ಸುದ್ದಿ ಬಂದಾಗ ಅದನ್ನು ರಮ್ಯಾ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಎಂದಿನಂತೆ ಈ ಬಾರಿಯೂ ಅದನ್ನೇ ಮಾಡಿದ್ದಾರೆ.

ಅಂದಹಾಗೆ ನಟಿ ರಮ್ಯಾ ಅವರು ಕನ್ನಡದಲ್ಲಿ ಒಂದು ದಶಕಗಳಿಗೂ ಹೆಚ್ಚು ಕಾಲ ಸ್ಟಾರ್ ನಟಿಯಾಗಿ ಮೆರೆದವರು. ಪಕ್ಕದ ತಮಿಳು ಚಿತ್ರರಂಗದಲ್ಲಿ ಕೂಡ ನಟಿಸಿ ಸೈ ಎನ್ನಿಸಿಕೊಂಡವರು. ಆ ಬಳಿಕ ರಾಜಕೀಯಕ್ಕೆ ಪ್ರವೇಶಿಸಿದ್ದ ನಟಿ ರಮ್ಯಾ, ಮಂಡ್ಯದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಎಂಪಿ ಕೂಡ ಆಗಿದ್ದವರು. ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾವನ್ನು ಹ್ಯಾಂಡಲ್‌ ಮಾಡಿ ಸಾಕಷ್ಟು ಸುದ್ದಿಯಾಗಿದ್ದವರು.