CM Candidate: ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕ ಯು ಟರ್ನ್! ಈಗೇನು ಹೇಳ್ತಾರೆ?

CM Candidate:‌ ನಾನು ಮುಖ್ಯಮಂತ್ರಿ(CM) ಕುರ್ಚಿಯ ಆಕಾಂಕ್ಷಿ ಎಂದು ಹೇಳಿದ್ದ ಕೈ ಹಿರಿಯ ನಾಯಕ ಆರ್ ವಿ ದೇಶಪಾಂಡೆ(R V Deshpande) ಇಂದು ಧಾರವಾಡದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನನ್ನ ಹೇಳಿಕೆ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂದು ನುಣುಚಿಕೊಂಡರು. ಈ ವಿಚಾರವಾಗಿ ಬಿಜೆಪಿ(BJP) ಅವರು ತಮ್ಮ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ ಎಂದಾಗ ಅದರ ಬಗ್ಗೆ ನನಗೇನು ಗೊತ್ತಿಲ್ಲ, ಬಿಜೆಪಿಯಲ್ಲಿ ಇರುವ ಹೊಡೆದಾಟವನ್ನು ಅವರು ಸುಧಾರಿಸಿಕೊಳ್ಳಲು ಹೇಳಿ, ನಮ್ಮ ಪಕ್ಷ ಗಟ್ಟಿಯಿದೆ ಎಂದರು.

ಸಿಎಂ ಸಿದ್ದರಾಮಯ್ಯನವರಿಗಿಂತ(CM Siddaramaiah) ನಾನು 2 ವರ್ಷ ದೊಡ್ಡವನು, ನಾನು ಸಿದ್ದರಾಮಯ್ಯನವರು ಅವರು ಬಹಳ ಆಪ್ತರು. ಅವರು ಓಕೆ ಅಂದ್ರೆ, ನಾನು ಮುಂದಿನ ಸಿಎಂ ಆಗೋಕೆ ರೆಡಿ ಎಂದಿದ್ದ ಆರ್.ವಿ.ದೇಶಪಾಂಡೆ, ಇದೀಗ ಈ ಬಗ್ಗೆ ಮಾತಾನಾಡಲು ನಿರಾಕರಿಸಿದ್ದಾರೆ. ಅಲ್ಲದೆ ಈ ಹೇಳಿಕೆಗೆ ವಿರೋಧ ಪಕ್ಷದವರು ವ್ಯಗ್ಯವಾಡಿದ್ದಲ್ಲದೆ, ತನ್ನದೇ ಪಕ್ಷದವರು ಕೌಂಟರ್‌ ಕೊಟ್ಟಿದ್ದರು.

ಒಟ್ಟಿನಲ್ಲಿ ಸಿದ್ದರಾಮಯ್ಯನವರ ಪ್ರಾಸಿಕ್ಯೂಷನ್‌ ಗೆ ರಾಜ್ಯಪಾಲರು ಅನುಮತಿ ಕೊಟ್ಟಾಂಗಿಂದ ಸಿಎಂ ಕುರ್ಚಿಗಾಗಿ ಟವಲ್‌ ಹಾಕುವ ಕಾರ್ಯ ತೆರೆಮರೆಯಲ್ಲಿ ನಡೆಯುತ್ತಿದೆ. ಅತ್ತ ಬಿಜೆಪಿ ಹಾಗೂ ಜೆಡಿಎಸ್‌ ಸರ್ಕಾರ ಬೀಳಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಅದೇನೆ ಆಗಬೇಕಾದರು ಸೆಪ್ಟೆಂಬರ್‌ ೯ರಂದು ನ್ಯಾಯಾಲೈದಿಂದ ತೀರ್ಪು ಬರಬೇಕು. ಅಲ್ಲಿಯವರೆಗೆ ಹಿಂದಿನ ಬಾಗಿಲಲ್ಲಿ ರಾಜಕಾರಣ ಆಗುಹೋಗುಗಳ ಲೆಕ್ಕಾಚಾರ ಹಾಕಬಹುದಷ್ಟೆ. ಆದರೆ ಸತೀಶ್ ಜಾರಕಿಹೊಳಿ ದೆಹಲಿ ಭೇಟಿ ವಿಚಾರ ಕೇಳುತ್ತಿದ್ದಂತೆಯೇ ಅಲ್ಲಿಂದ ದೇಶಪಾಂಡೆ ಯಾವುದೇ ಉತ್ತರ ನೀಡದೆ ಹೊರಟೇ ಬಿಟ್ರು.

Leave A Reply

Your email address will not be published.