Fight against Congress: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮತ್ತೊಂದು ಪಾದಯಾತ್ರೆ – ಸಚಿವ ಪ್ರಲ್ಹಾದ ಜೋಶಿ

Fight against Congress: ರಾಜ್ಯ ಕಾಂಗ್ರೆಸ್ ಸರ್ಕಾರದ(Congress Govt) ಭ್ರಷ್ಟಾಚಾರದ(Scam) ವಿರುದ್ಧ ಬಿಜೆಪಿ(BJP) ಮತ್ತೊಂದು ಪಾದಯಾತ್ರೆ ನಡೆಸುವ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ(MP Prahalada Joshi) ಹೇಳಿದರು. ನವದೆಹಲಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ವಾಲ್ಮೀಕಿ ಹಗರಣ(Valmiki scam), ಮುಡಾ ಹಗರಣದ(MUDA Scam) ವಿರುದ್ಧ ಬಿಜೆಪಿ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಹೋರಾಟ ಸರಿ ದಿಕ್ಕಿನಲ್ಲೇ ಇದೆ: ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಸರಿಯಾದ ದಿಕ್ಕಿನಲ್ಲೇ ನಡೆಯುತ್ತಿದೆ. ಪಕ್ಷದೊಳಗೆ ಯಾವುದೇ ಅಪಸ್ವರವಿಲ್ಲ ಎಂದು ಫ್ರತಿಕ್ರಿಯಿಸಿದರು.

ಪಕ್ಷದ ವೇದಿಕೆಯಲ್ಲೇ ಹೋರಾಟ: ಬಿಜೆಪಿ ಹೋರಾಟಕ್ಕೆ ಮೊದಲನೇ ಪಾದಯಾತ್ರೆ, ಎರಡನೇ ಪಾದಯಾತ್ರೆ ಎನ್ನಬೇಕಿಲ್ಲ. ಪಕ್ಷದೊಳಗೆ ಎಲ್ಲರೂ ಕೂಡಿಯೇ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಗೃಹ ಸಚಿವರು ಸೇರಿದಂತೆ ನಾಯಕರೆಲ್ಲ ಸೇರಿ ಮತ್ತೊಂದು ಸುತ್ತಿನ ಹೋರಾಟದ ಬಗ್ಗೆ ನಿರ್ಧರಿಸಲಿದ್ದಾರೆ. ರಾಜ್ಯದ ಎಲ್ಲಾ ನಾಯಕರ ಮುಂದಾಳತ್ವದಲ್ಲೇ ನಡೆಯುತ್ತದೆ ಮತ್ತೊಂದು ಪಾದಯಾತ್ರೆ ಎಂದು ಜೋಶಿ ತಿಳಿಸಿದರು.

HDK ಅಕ್ರಮ ಎಸಗಿದ್ದರೆ 8 ವರ್ಷ ಏಕೆ ಸುಮ್ಮನಿದ್ರು?: ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಕ್ರಮ ಎಸಗಿದ್ದರೆ ಕಾಂಗ್ರೆಸ್ ತಾನು ಅಧಿಕಾರದಲ್ಲಿದ್ದ 8 ವರ್ಷ ಏನು ಕತ್ತೆ ಕಾಯುತ್ತಿತ್ತಾ? ಎಂದು ಪ್ರಶ್ನಿಸಿದರು ಪ್ರಲ್ಹಾದ ಜೋಶಿ.

ಕುಮಾರಸ್ವಾಮಿ ಅವರ ಕೇಸ್ ಇದ್ದುದು 2005-06ರಲ್ಲಿ. 2013ರಿಂದ 18ರವರೆಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಇದ್ದರು. ಅವಗೇಕೆ ಸುಮ್ಮನಿದ್ದರು? ಅಲ್ಲದೇ, 20018ರಲ್ಲಿ ಕುಮಾರಸ್ವಾಮಿ ಅವರ ಕೈ ಕಾಲು ಹಿಡಿದು ಮೊದಲು ಸರ್ಕಾರ ರಚಿಸಿದ್ದೂ ಇವರೇ. ಆಗಿನ ಒಂದೂವರೆ ವರ್ಷದ ಅಡಳಿತದಲ್ಲೂ ಸುಮ್ಮನಿದ್ದರು. 2024ರ ಒಂದೂವರೆ ವರ್ಷದ ಆಡಳಿತದಲ್ಲಿ ಸಹ ಮೌನ ತಾಳಿದರು. ಈಗ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡುತ್ತಲೇ ಆರೋಪದಲ್ಲಿ ತೊಡಗಿದ್ದಾರೆ ಎಂದು ಜೋಶಿ ಹರಿ ಹಾಯ್ದರು.

ಬ್ಲಾಕ್ ಮೇಲ್ ತಂತ್ರ: ಛಲವಾದಿ ನಾರಾಯಣಸ್ವಾಮಿ ಅವರ ಮೇಲಿನ ಆರೋಪ 2004ರದ್ದು, ಮುರುಗೇಶ ನಿರಾಣಿ ಮೇಲಿನ ಆರೋಪ 2008ರದ್ದು. ಕಾಂಗ್ರೆಸ್ ನವರು ಈಗ ಏಕೆ ಮುನ್ನಲೆಗೆ ತರುತ್ತಿದ್ದಾರೆ? ಐದು ಬ್ಲಾಕ್ ಮೇಲ್ ತಂತ್ರವಲ್ಲವೇ? ಎಂದು ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದರು.

Leave A Reply

Your email address will not be published.