Hamsalekha: ಸರಿಗಮಪ ಬಹಿಷ್ಕಾರಕ್ಕೆ ಮೀಡಿಯಾದಲ್ಲಿ ಕರೆ; ಹಂಸಲೇಖ ಇದ್ರೆ ಶೋ ನೋಡಲ್ಲ, ಯಾಕಾಗಿ ಈ ಕರೆ?

Share the Article

Hamsalekha: ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ವಿವಾದ ಬಂದು ಸೇರುತ್ತಿದೆಯೋ ಅಥವಾ ಇವರೇ ವಿವಾದದ ಬೆನ್ನತ್ತಿ ಹೋಗುತ್ತಿದ್ದಾರೆಯೋ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಇತ್ತೀಚೆಗೆ ಇವರು ಮೋದಿಯನ್ನು ಟೀಕಿಸುವ ಭರದಲ್ಲಿ ಮಲಯಾಳಿಗಳು ಬುದ್ಧಿವಂತರು, ಕನ್ನಡಿಗರು ಬುದ್ಧಿ ಉಪಯೋಗಿಸುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು.

ಒಂದು ವರ್ಗದ ಜನರಿಗೆ ಈ ಹೇಳಿಕೆ ಇಷ್ಟವಾಗದೇ ಇದ್ದಿದ್ದು, ಇದರ ಜೊತೆಯಲ್ಲೇ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಶೋನಲ್ಲಿ ಬಂದರೆ ಶೋವನ್ನು ನೋಡುವುದಿಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಒಂದು ವೇಳೆ ಹಂಸಲೇಖ ಕಾಣಿಸಿಕೊಂಡಿರೆ ಬಾಯ್‌ಕಾಟ್‌ ಮಾಡಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ.

Leave A Reply