Darshan Thoogudeepa: ರೇಣುಕಾಸ್ವಾಮಿ ಹಲ್ಲೆಯ ವಿಡಿಯೋ ಜೊತೆಗೆ ದರ್ಶನ್ ವಿರುದ್ಧ ಸಿಕ್ಕಿವೆ ಇವಿಷ್ಟು ಸ್ಟ್ರಾಂಗ್ ಎವಿಡೆನ್ಸ್!?

Darshan Thoogudeepa: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan Thoogudeepa) ಜೈಲು ಸೇರಿದ ಮೇಲೆ ಒಂದಲ್ಲ ಒಂದು ಆಪತ್ತು ಸುತ್ತಿಕೊಳ್ಳುತ್ತಲೇ ಇದೆ. ಅದಲ್ಲದೆ ದರ್ಶನ್ ಬಿಡುಗಡೆ ಬಗ್ಗೆ ಯಾವುದೇ ಪಾಸಿಟಿವ್ ಮಾಹಿತಿ ಸಿಕ್ಕಿಲ್ಲ. ಅವರು ಜೈಲಿನಲ್ಲಿ ಮಾಡಿದ ತಪ್ಪಿನ ಸಲುವಾಗಿ ಈಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದು, ಇದೀಗ ಮುಖ್ಯವಾಗಿ ಈ ಕೇಸ್ನ ತನಿಖೆ ಕೊನೇ ಹಂತಕ್ಕೆ ಬಂದಿದೆ. ಸದ್ಯ ಬೆಂಗಳೂರು ಪೊಲೀಸರು ಇನ್ನು ಎರಡೇ ದಿನದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಹೌದು, ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಈ ಮಧ್ಯೆ ದರ್ಶನ್ ವಿರುದ್ಧವಾಗಿ ಪ್ರಬಲ ಸಾಕ್ಷಿಗಳೇ ಲಭ್ಯವಾಗಿವೆ.

ಪ್ರತಿ ಹಂತದಲ್ಲಿ ಅಂದರೆ, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದು, ಅವರನ್ನು ಹತ್ಯೆ ಮಾಡಿ, ಬೇರೆಯವರ ತಲೆಗೆ ಈ ಕೇಸನ್ನು ಲಿಂಕ್ ಮಾಡುವ ವರೆಗೆ ದರ್ಶನ್ ಪಾತ್ರವನ್ನೇ ಕೇಸ್ ಎತ್ತಿ ಹಿಡಿಯುತ್ತಿದೆ. ಹೀಗಾಗಿ, ದರ್ಶನ್ ಪಾತ್ರದ ಬಗ್ಗೆ ಸಾಕ್ಷ್ಯಗಳ ಸಮೇತ ಚಾರ್ಜ್ಶೀಟ್ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಹಾಗಾದರೆ ದರ್ಶನ್ ವಿರುದ್ಧ ಸಿಕ್ಕಿರುವ ಸಾಕ್ಷ್ಯಗಳು ಏನು? ಆ ಬಗ್ಗೆ ಇಲ್ಲಿದೆ ವಿವರ.
ಮೊದಲು ಪವನ್ಗೆ ಹೇಳಿ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕರೆಸಿದ್ದೇ ದರ್ಶನ್, ನಂತರ ಪವನ್ ಸೂಚನೆಯಂತೆ ರಾಘವೇಂದ್ರ, ರೇಣುಕಾಸ್ವಾಮಿ ಕಿಡ್ನಾಪ್ ಮಾಡಿಸಿದ್ದರು.
ಇನ್ನು ಪ್ರಮುಖ ಸಾಕ್ಷಿಯಾಗಿ ದರ್ಶನ್ ಬಟ್ಟೆಯ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ ಆಗಿವೆ.
ಪಬ್ನಲ್ಲಿ ಪಾರ್ಟಿ ಮುಗಿಸಿ ನಂತರ ಪವಿತ್ರಾ ಮನೆಗೆ ಹೋಗಿ ಕೂಡಲೇ ಪವಿತ್ರಾರ ಕರೆದುಕೊಂಡು ಪಟ್ಟಣಗೆರೆಚಿಕ್ಕಣ್ಣ ಜೊತೆಗೆ ಪಾರ್ಟಿ ಮುಗಿಸಿ ಶೆಡ್ಗೆ ದರ್ಶನ್ ಹೋಗಿದ್ದು, ಅಲ್ಲಿಂದ ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ಆ ಬಳಿಕ ದರ್ಶನ್ ಪಬ್ಗೆ ಬಂದಿದ್ದ ಬಗ್ಗೆ ಸಾಕ್ಷಿ ಇದೆ.
ಇನ್ನು ಪಬ್ನಲ್ಲಿ ಇರುವಾಗ ರೇಣುಕಾಸ್ವಾಮಿ ಫೋಟೋ ದರ್ಶನ್ಗೆ ಬಂದಿತ್ತು. ಆ ಬಳಿಕ ದರ್ಶನ್ ಮತ್ತೆ ಪಬ್ನಿಂದ ಪಟ್ಟಣಗೆರೆ ಶೆಡ್ಗೆ ಹೋಗಿದ್ದಕ್ಕೆ ಸಾಕ್ಷ್ಯ ಸಿಕ್ಕಿದೆ. ಆ ಬಳಿಕ RR ನಗರ ಮನೆಗೆ ಬಂದು ಬಟ್ಟೆ ಬದಲಿಸಿದ್ದರು ದರ್ಶನ್.
ಮರುದಿವಸ ಬೆಳಗ್ಗೆ,ಬನಶಂಕರಿಯ ವಿಜಯಲಕ್ಷ್ಮಿ ಮನೆಯಲ್ಲಿ ಪೂಜೆಯಲ್ಲಿ ಭಾಗಿಯಾಗಿದ್ದು, ಹೊರಡುವಾಗ ದರ್ಶನ್ ಶೂ ಬಿಟ್ಟು ಹೋಗಿದ್ದರು. ನಂತರ ಮೈಸೂರಿನ ಫಾರ್ಮ್ ಹೌಸ್ಗೆ ಹೋಗಿ ಅಲ್ಲಿಂದ ಹೋಟೆಲ್ಗೆ ತೆರಳಿದ್ದರು.
ಇನ್ನು ದರ್ಶನ್ ಓಡಾಟದ ಸಿಸಿಟಿವಿ, ಟವರ್ ಲೊಕೇಷನ್ ತನಿಖೆಯಲ್ಲಿ ಸಿಕ್ಕಿವೆ.
ಸಿಸಿಟಿವಿ ದೃಶ್ಯಗಳಿಗೂ ಟವರ್ ಲೊಕೇಷನ್ಗಳೀಗೂ ಮ್ಯಾಚ್ ಆಗಿದೆ. ಪ್ರತಿ ಹಂತದಲ್ಲೂ ದರ್ಶನ್ ನೋಡಿದ್ದ ಐ ವಿಟ್ನೇಸ್ ಹೇಳಿಕೆಗಳು. ನಟ ಚಿಕ್ಕಣ್ಣ ಸೇರಿದಂತೆ ಅನೇಕ ಸಾಕ್ಷಿಗಳ ಹೇಳಿಕೆಗಳು ಉಲ್ಲೇಖ ಮಾಡಲಾಗಿದೆ.
ಮುಖ್ಯವಾಗಿ ಪ್ರದೋಶ್ ಮೊಬೈಲ್ನಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೋ ಇತ್ತು. ಫೋನ್ ಕಾಲ್, ಚಾಟಿಂಗ್ನಲ್ಲಿ ಸಂಚಿನ ಬಗ್ಗೆ ಮಾಹಿತಿ ಸಿಕ್ಕಿದೆ.
ಅಲ್ಲದೆ ಇತರರನ್ನು ಸರೆಂಡರ್ ಮಾಡಿಸಲು ಮನವೊಲಿಸಿದ್ದು, ಹಣ ಕೊಟ್ಟಿದ್ದು ಎಲ್ಲವೂ ದೃಢವಾಗಿದೆ.
ಇಷ್ಟೆಲ್ಲಾ ಸಾಕ್ಷಿಗಳು ದರ್ಶನ್ ವಿರುದ್ಧವಾಗಿ ಇರುವ ಕಾರಣ ದರ್ಶನ್ ಬಿಡುಗಡೆ ದೂರದ ಮಾತು ಎನ್ನಲಾಗುತ್ತಿದೆ.