Trichy: ಆನ್‌ಲೈನ್‌ನಲ್ಲಿ ಖರೀದಿ ಮಾಡಿದ ನೂಡಲ್ಸ್‌ ತಿಂದು 15 ವರ್ಷದ ಬಾಲಕಿ ಸಾವು

Trichy: ಈಗ ಆನ್‌ಲೈನ್‌ ಯುಗ. ಏನೇ ಬೇಕಾದರೂ ಆರ್ಡರ್‌ ಮಾಡಿದರೆ ಮನೆಗೆ ತಲುಪುತ್ತದೆ. ಈ ಟೆಕ್ನಾಲಜಿ ಎಷ್ಟು ನಮಗೆ ಉಪಯೋಗವಿದೆಯೋ ಅದೇ ರೀತಿ ಅಪಕಾರ ಕೂಡಾ ಇದೆ. ಅಂತಹುದೇ ಒಂದು ಘಟನೆ ತಿರುಚ್ಚಿಯಲ್ಲಿ ನಡೆದಿದೆ.

ತಿರುಚ್ಚಿಯಲ್ಲಿ ನೂಡಲ್ಸ್‌ ತಿಂದು 15 ವರ್ಷದ ಬಾಲಕಿಯೋರ್ವಳು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಈಕೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ನೂಡಲ್ಸ್‌ ತಿಂದ ನಂತರ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.

ಜಾನ್‌ ಜೂಡಿ ತಿರುಚ್ಚಿ ಅರಿಯಮಂಗಲಂ ಕೀಲಾ ಅಂಬಿಕಾಪುರಂ ನಿವಾಸಿ. ಇವರು ರೈಲ್ವೇ ಉದ್ಯೋಗಿ. ಇವರ ಮಗಳು ಜಾನ್‌ ಸ್ಟೆಫಿ ಜಾಕ್ವೆಲಿನ್‌ ಮೈಲ್‌ (15 ವರ್ಷ). ಈಕೆ ತಿರುಚ್ಚಿಯಲ್ಲಿ 11ನೇ ತರಗತಿಯ ವಿದ್ಯಾರ್ಥಿನಿ.

ಈಕೆ ನೂಡಲ್ಸ್‌ ಪ್ರೇಮಿ. ಎಂದಿನಂತೆ ಈಕೆ ಆನ್‌ಲೈನ್‌ ಮೂಲಕ ಖರೀದಿ ಮಾಡಿದ ನೂಡಲ್ಸ್‌ ಪ್ಯಾಕೆಟ್‌ ತೆಗೆದು ಅದನ್ನು ಬೇಯಿಸಿ ತಿಂದಿದ್ದಾಳೆ. ನಂತರ ಮಲಗಲು ಹೋಗಿದ್ದಾಳೆ. ಅದರ ಮರುದಿನವೇ ಆಕೆ ಮೃತ ಹೊಂದಿದ್ದಾರೆ. ಆದರೆ ಜಾಕ್ವೆಲಿನ್‌ ಸಾವಿನ ಕುರಿತು ಅನುಮಾನವಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಬುಲ್ಡಾಕ್‌ ನೂಡಲ್ಸ್‌ ಮತ್ತು ಚೀನಾ ಕಂಪನಿಯ ತಂಪು ಪಾನೀಯ ಸೇವಿಸಿದ ನಂತರ ಸಾವಿಗೀಡಾಗಿದ್ದಾಳೆ ಎಂದು ಹೇಳಲಾಗಿದೆ. ಆಹಾರ ಇಲಾಖೆ ಈ ಕುರಿತು ತನಿಖೆ ನಡೆಸಿದ್ದು, ಅವಧಿ ಮೀರಿದ ನೂಡಲ್ಸ್‌ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.

Leave A Reply

Your email address will not be published.