Bigg Boss Kannada-11: ಬಿಗ್ ಬಾಸ್-11ರ ಪ್ರೋಮ್ ರಿಲೀಸ್; ನಿರೂಪಣೆ ಕಿಚ್ಚನದ್ದೋ ಇಲ್ಲಾ ಬೇರೆಯವರದ್ದೋ?

Share the Article

Bigg Boss Kannada -11: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶುರುವಾಗುವ ಸಮಯ ಬಂದಿದೆ. ಪ್ರತೀ ಸಲದಂತೆ ಈ ಸಲವೂ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಶೋ ಆರಂಭವಾಗುವುದು ಫಿಕ್ಸ್ ಆಗಿದೆ. ಇನ್ನು ಈ ಸಲದ ಶೋನಲ್ಲಿ ಕಿಚ್ಚನ ನಿರೂಪಣೆ ಇರುತ್ತದೆಯೋ ಇಲ್ಲವೋ ಎಂಬ ಗೊಂದಲ ಅನುಮಾನಗಳು ಅಭಿಮಾನಿಗಳಲ್ಲಿ ಉಂಟಾಗಿತ್ತು. ಆದರೀಗ ಇದಕ್ಕೆಲ್ಲಾ ಉತ್ತರ ಸಿಕ್ಕಿದೆ. ಅದೂ ಕೂಡ ಬಿಗ್ ಬಾಸ್- 11 ರ ಪ್ರೋಮೋ ಮೂಲಕವೇ.

ಹೌದು, ಕನ್ನಡ ಬಿಗ್ ಬಾಸ್(Bigg Biss Kannada-11) ಪ್ರೋಮೊ ರೀಲಿಸ್ ಆಗಿದೆ. ಇದರ ಮೂಲಕ ಕಿಚ್ಚ ಸುದೀಪ್(Kiccha Sudeep) ನಿರೂಪಣೆ ಬಹುತೇಕ ಖಚಿತವಾಗಿದೆ. ಈ ಪ್ರೊಮೊದಲ್ಲಿ ಕಿಚ್ಚಸುದೀಪ್ ಹ್ಯಾಶ್ ಟ್ಯಾಗ್ ಬಳಸಿ ಪೋಸ್ಟ್ ಮಾಡಲಾಗಿದೆ. ಹೀಗಾಗಿ ಈ ಬಾರಿ ಕನ್ನಡದ ಬಿಗ್ ಬಾಸ್ ಶೋ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಾರೆ ಅನ್ನೋದು ಬಹುತೇಕ ಪಕ್ಕಾ ಆಗಿದೆ. ಹೀಗಾಗಿ ಅಭಿಮಾನಿಗಳಿಗೆ ಕಾತರತೆ ಹೆಚ್ಚಾಗಿದೆ. ಇನ್ನು ಇದರ ಜೊತೆಗೆ ಸ್ಪರ್ಧಿಗಳ ಪಟ್ಟಿಗಳು ಹರಿದಾಡುತ್ತಿದೆ.

ಇದಲ್ಲದೆ ಹಿಂದಿ ಬಿಗ್ ಬಾಸ್ ಕೂಡ ಶುರವಾಗಲಿದೆ. ಇತ್ತ ಗಾಯಗೊಂಡಿರುವ ಸಲ್ಮಾನ್ ಖಾನ್ ಹಿಂದಿ ಬಿಗ್ ಬಾಸ್ ನಿರೂಪಣೆಯಿಂದ ದೂರ ಉಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಸಲ್ಮಾನ್ ಖಾನ್ ನಿರೂಪಕ ಅನ್ನೋದು ಖಚಿತವಾಗಿದೆ. ಇದರ ಜೊತೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಬಿಡುಗಡೆಯಾಗಿದೆ.

Leave A Reply