Liquor sale ban: ರಾಜ್ಯ ರಾಜಧಾನಿಯಲ್ಲಿ ಈ ದಿನ ಮದ್ಯ ಮಾರಾಟ ಬಂದ್!

Liquor sale ban: ಬೆಂಗಳೂರು ಪೊಲೀಸ್‌ ಆಯುಕ್ತರಾದ ಬಿ.ದಯಾನಂದ ಅವರು ಮಹತ್ವ ಮಾಹಿತಿ ಒಂದನ್ನು ನೀಡಿದ್ದಾರೆ. ಬೆಂಗಳೂರುನಲ್ಲಿ ಸೇಂಟ್‌ ಮೇರಿ ಉತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಭಾಗದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ (Liquor sale ban) ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಶಿವಾಜಿನಗರದಲ್ಲಿ ಸೇಂಟ್‌ ಮೇರಿ ಚರ್ಚ್‌ನ ಆರೋಗ್ಯ ಮಾತೆಯ ವಾರ್ಷಿಕ ಮಹೋತ್ಸವ ಇದೇ ತಿಂಗಳು 08/09/2024 ರಂದು ನಡೆಯಲಿದೆ. ಹೀಗಾಗಿ, ಈ ದಿನ ಬೆಂಗಳೂರಿನ ಶಿವಾಜಿನಗರ ಸೇರಿದಂತೆ ಪ್ರಮುಖ ಭಾಗದಲ್ಲಿ ಮದ್ಯ ಮಾರಾಟ ನಿಷೇಧಿಸಲು ನಿರ್ಧರಿಸಲಾಗಿದೆ.

ಉತ್ಸವ ಸಂದರ್ಭದಲ್ಲಿ ವಿವಿಧ ಭಾಷೆಗಳಲ್ಲಿ ಪ್ರಾರ್ಥನೆ ನಡೆಯಲಿದೆ. ಅಂತಿಮವಾಗಿ ಬೃಹತ್‌ ತೇರಿನಲ್ಲಿ ಆರೋಗ್ಯ ಮಾತೆಯ ಮೆರವಣಿಗೆಯು ನಡೆಯಲಿದೆ. ಸೇಂಟ್‌ ಮೇರಿ ಚರ್ಚ್‌ನಿಂದ ಪ್ರಾರಂಭವಾಗಿ ಎಂ.ಕೆ ಸ್ಟ್ರೀಟ್‌, ಶಿವಾಜಿರಸ್ತೆ, ಬ್ರಾಡ್‌ ವೇ ರಸ್ತೆ, ರಸೆಲ್‌ ಮಾರುಕಟ್ಟೆ ಹಾಗೂ ನರೋನ್ಹಾ ರಸ್ತೆ ಮಾರ್ಗವಾಗಿ ಹಿಂದಿರುಗಿ ಚರ್ಚ್ ಗೆ ಬರಲಿದೆ.

ಈ ಉತ್ಸವವು ಕ್ರೈಸ್ತರ ಪ್ರಮುಖ ಉತ್ಸವಗಳಲ್ಲಿ ಒಂದಾಗಿದೆ ಹೀಗಾಗಿ ಉತ್ಸವದಲ್ಲಿ ಲಕ್ಷಾಂತರ ಜನ ಸೇರುವ ಸಾಧ್ಯತೆ ಇದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಈ ನಿರ್ಧಾರವನ್ನು ಪೊಲೀಸ್‌ ಇಲಾಖೆ ತೆಗೆದುಕೊಂಡಿದೆ. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಮದ್ಯಪಾನದ ಅಮಲಿನಲ್ಲಿ ಸಮಸ್ಯೆ ಮಾಡುವ ಸಾಧ್ಯತೆ ಇದೆ ಈ ಹಿನ್ನೆಲೆ , ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಎಲ್ಲೆಲ್ಲಿ ಮದ್ಯ ಮಾರಾಟ ನಿಷೇಧ :

ಸೆಪ್ಟೆಂಬರ್‌ 8ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 11ರ ವರೆಗೆ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಹಾಗೂ ಭಾರತೀನಗರ ಭಾಗದಲ್ಲಿ ಮದ್ಯ ಮಾರಾಟ ಬಂದ್. ಈ ಭಾಗದ ಎಲ್ಲಾ ರೀತಿಯ ಬಾರ್‌ ಅಂಡ್ ರೆಸ್ಟೋರೆಂಟ್‌ಗಳು, ವೈನ್ಸ್‌ ಶಾಪ್‌ಗಳು, ಪಬ್‌ಗಳು, ಎಂಎಸ್‌ಐಎಲ್ ಮಳಿಗೆಗಳು ಸೇರಿದಂತೆ ಎಲ್ಲಾ ಮಾದರಿಯ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದನ್ನು ಬೆಂಗಳೂರು ಪೊಲೀಸ್‌ ಕಮಿಷನರ್‌ ದಯಾನಂದ್ ಅವರೇ ಖಚಿತಪಡಿಸಿದ್ದಾರೆ.

Leave A Reply

Your email address will not be published.