Rape-aXe : ಅತ್ಯಾಚಾರ ತಡೆಗೆ ಬಂತು ಹೊಸ ‘ಕಾಂಡೋಮ್’ – ಯಪ್ಪಾ.. ಇದು ಎಷ್ಟು ಅಪಾಯಕಾರಿ ಗೊತ್ತಾ ? ಬಲತ್ಕಾರ ಮಾಡಲು ಬಂದವನ ಕಥೆ ಕತಮ್ !!

Rape-aXe: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಮುಗಿಯದ ಅಧ್ಯಾಯವಾಗಿದೆ. ದಿನಕ್ಕೊಂದು ಇಂತಹ ಅಘಾತಕಾರಿ ಘಟನೆಗಳ ಬಗ್ಗೆ ಕೇಳುತ್ತಿರುವುದು ನಿಜಕ್ಕೂ ವಿಷಾದನೀಯ. ದೇಶದಲ್ಲಿ ಅತ್ಯಾಚಾರವು ಅಪರಾಧವಾಗಿ ಎಷ್ಟು ದೊಡ್ಡ ಸಮಸ್ಯೆಯಾಗಿದೆ ಎಂಬುದನ್ನು ಇಂದಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವ ಪ್ರಕರಣಗಳು ತೋರಿಸುತ್ತವೆ. ಈ ಸಮಸ್ಯೆಯನ್ನು ನಿಭಾಯಿಸಲು, ಮಹಿಳಾ ವೈದ್ಯರೊಬ್ಬರು ಉತ್ತಮ ಪರಿಹಾರವನ್ನು ಕಂಡುಕೊಂಡಿದ್ದು, ಅತ್ಯಾಚಾರಿಗಳು ಇನ್ನು ಮುಂದೆ ಭಯ ಬೀಳಬೇಕು ಅಂತಹ ಸಾಧನವನ್ನು ರಚಿಸಿದ್ದಾರೆ.

ಹೌದು, ಆಫ್ರಿಕಾದ ವೈದ್ಯೆ ಡಾ. ಸೋನೆಟ್ ಎಹ್ಲರ್ಸ್(Dr. Sonnet Ehlers) ಎಂಬುವವರು ಅತ್ಯಾಚಾರ ವಿರೋಧಿ ಸಾಧನವನ್ನು ಕಂಡುಹಿಡಿದಿದ್ದು, ಹಲವು ವರ್ಷಗಳ ಸಂಶೋಧನೆಯ ಇದನ್ನು ರಚಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆಯೊಬ್ಬರು ಅವರ ಬಳಿ ಆಕೆಗೆ ಬಂದಾಗ ಆಕೆಯ ಸ್ಥಿತಿ ನೋಡಿ ಇವರಿಗೆ ತುಂಬಾ ನೋವಾಗಿದೆ. ಆ ಅತ್ಯಾಚಾರ ಸಂತ್ರಸ್ತೆಯನ್ನು ಪಾಪಿಗಳು ಕ್ರೂರವಾಗಿ ನಡೆಸಿಕೊಂಡಿದ್ದರು. ಅವಳು ಸರಿಯಾಗಿ ಉಸಿರಾಡಲು ಸಹ ಸಾಧ್ಯವಾಗದೆ ನಿರ್ಜೀವ ಶವದಂತಿದ್ದಳು. ಈ ಪ್ರಕರಣದಿಂದಲೇ ಡಾ. ಸಾನೆಟ್ ಎಹ್ಲರ್ಸ್ ಈ ಸಾಧನವನ್ನು ತಯಾರಿಸುವ ಕಲ್ಪನೆಯನ್ನು ಪಡೆದು, ಛಲದಿಂದ ಅದನ್ನು ಕಂಡುಹಿಡಿದಿದ್ದಾರೆ.

ಯಪ್ಪಾ.. ಎಷ್ಟು ಅಪಾಯಕಾರಿ ಗೊತ್ತಾ ಇದು?
ಈ ಅತ್ಯಾಚಾರ-ವಿರೋಧಿ ಸಾಧನಕ್ಕೆ Rape-aXe ಎಂದು ಹೆಸರಿಸಲಾಗಿದೆ. ಇದು ಕಾಂಡೋಮ್‌ನಂತೆಯೇ ಇದೆ, ಆದರೆ ಅದರೊಳಗೆ ಚೂಪಾದ ಮುಳ್ಳಿನ ಕೊಕ್ಕೆಗಳಿವೆ. ಒಬ್ಬ ಪುರುಷನು ಅತ್ಯಾಚಾರಕ್ಕೆ ಪ್ರಯತ್ನಿಸಿದಾಗ ಮಹಿಳೆಯರು ಅದನ್ನು ಬಳಸಬಹುದು. ಆಗ ಈ ಕಾಂಡೋಮ್ ನ ಮುಳ್ಳುಗಳಲ್ಲಿ ಆತನ ಖಾಸಗಿ ಅಂಗ ಸಿಲುಕಿ ನೋವಿನಿಂದ ಚೀರಾಡುತ್ತಾನೆ.

ಸೊನೆಟ್ ಎಹ್ಲರ್ಸ್ ಪ್ರಕಾರ, ‘ಇದು ನೋವುಂಟುಮಾಡುತ್ತದೆ, ಈ ಕಾಂಡೋಮ್ ಸಿಕ್ಕಿಹಾಕಿಕೊಂಡಾಗ, ಆರೋಪಿಯು ಮೂತ್ರ ವಿಸರ್ಜಿಸಲು ಸಾಧ್ಯವಿಲ್ಲ ಅಥವಾ ಅವನು ನಡೆಯಲು ಸಾಧ್ಯವಾಗುವುದಿಲ್ಲ. ಅವನು ಅದನ್ನು ತೆಗೆದುಹಾಕಲು ಪ್ರಯತ್ನಿಸಿದರೂ, ಕಾಂಡೋಮ್ ಕೆಟ್ಟದಾಗಿ ಅಂಟಿಕೊಳ್ಳುವುದರಿಂದ ಅವನು ತೊಂದರೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಇಷ್ಟೇ ಅಲ್ಲದೆ ಈ ಸಾಧನವು ವ್ಯಕ್ತಿಯ ಖಾಸಗಿ ಭಾಗಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುವುದಿಲ್ಲ, ಆದರೆ ಕೆಲವು ದಿನಗಳ ನಂತರ ನೋವು ಗುಣವಾಗುತ್ತದೆ. ಈ ಮೂಲಕ ಮಹಿಳೆಯರು ಅತ್ಯಾಚಾರದಂತಹ ದೌರ್ಜನ್ಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಸಾಧನವನ್ನು ಆಂಟಿ ರೇಪ್ ಡಿವೈಸ್ ಎಂದೂ ಕರೆಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.