Mysterious Train: ಸುರಂಗದೊಳಗೆ ಹೋಗ್ತಿದ್ದಂತೆ ಕಳೆಬರವು ಸಿಗದಂತೆ ಕಣ್ಮರೆಯಾದ ರೈಲು!

Mysterious Train: ಪ್ರಪಂಚದಲ್ಲಿ ಎಷ್ಟೋ ವಿಸ್ಮಯಗಳು, ನಿಗೂಢ ಘಟನೆ ನಡೆಯುತ್ತವೆ. ಕೆಲವು ವಿಸ್ಮಯಗಳಿಗೆ ಕೆಲವು ಕಾರಣ ಇರಬಹುದು ಆದ್ರೆ ಕೆಲವೊಂದು ಘಟನೆಗೆ ಯಾವುದೇ ಕಾರಣ ಮತ್ತು ಉತ್ತರ ಇಂದಿಗೂ ಸಿಕ್ಕಿಲ್ಲ. ಅಂತೆಯೇ 1911 ರಲ್ಲಿ, ರೈಲೊಂದು ಸುರಂಗದೊಳಗೆ ಹೋಗ್ತಿದ್ದಂತೆ ಕಳೆಬರವು ಸಿಗದಂತೆ ಕಣ್ಮರೆಯಾಯಿತು. ನಂತರ ಈ ಬಗ್ಗೆ ಅಂತಿಮ ಸ್ಪಷ್ಟನೆ ಸಿಗಲೇ ಇಲ್ಲ.

ಈ ಬಗ್ಗೆ ವಿಜ್ಞಾನಿಗಳು ಈ ರಹಸ್ಯವನ್ನು ಬಿಚ್ಚಿಡಲು ಪ್ರಯತ್ನಿಸಿದ್ದರು. ಆದರೆ ಈ ಘಟನೆ ಹಿಂದಿನ ನಿಗೂಢತೆ ಅಸಲಿ ಕಥೆ ಇನ್ನೂ ಹೊರ ಬಂದಿಲ್ಲ. ಹೌದು, 1911ರಲ್ಲಿ ಸುರಂಗದೊಳಗೆ ಹೋದ ಪ್ರಯಾಣಿಕರ ರೈಲು ನಿಗೂಢವಾಗಿ ಕಣ್ಮರೆಯಾಗಿತ್ತು. ಕಣ್ಮರೆಯಾದ ಈ ರೈಲಿನಲ್ಲಿ ಬರೋಬ್ಬರಿ 106 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

ಈ ಘಟನೆ ಇಟಲಿಯ ರಾಜಧಾನಿ ರೋಮ್‌ನಲ್ಲಿ ನಡೆದಿದೆ. 1911ರಲ್ಲಿ 106 ಪ್ರಯಾಣಿಕರನ್ನು ಹೊತ್ತ ರೈಲು ರೋಮ್ ನಗರದಿಂದ ತನ್ನ ಪ್ರಯಾಣ ಆರಂಭಿಸಿತ್ತು. ಸುರಂಗ ದಾಟಿದ ಬಳಿಕ ಮತ್ತೊಂದು ನಿಲ್ದಾಣವಿತ್ತು. ಆದ್ರೆ ಸುರಂಗ ಪ್ರವೇಶಿಸಿದ ರೈಲು ಹೊರಗಡೆ ಬರಲೇ ಇಲ್ಲ. ನಂತರ ಕಾಣೆಯಾದ ರೈಲಿನ (Mysterious Train) ಬಗ್ಗೆ ತೀವ್ರ ಹುಡುಕಾಟ ನಡೆಸಲಾಯ್ತು. ಎಷ್ಟು ಹುಡುಕಿದರೂ ಈ ರೈಲು ಮಾತ್ರ ಪತ್ತೆಯಾಗಲೇ ಇಲ್ಲ. ನಂತರ ರೈಲು ಕಣ್ಮರೆಯಾಗಿದೆ ಅಂತಾನೇ ಘೋಷಿಸಲಾಯ್ತು.

ವಿಶೇಷ ಅಂದ್ರೆ ರೈಲು ಕಣ್ಮರೆಯಾದ ಸುರಂಗದ ಹೊರಗೆ ಗಾಯಗೊಂಡ ಪ್ರಯಾಣಿಕರು ಸಿಕ್ಕಿದ್ದರು. ಈ ಇಬ್ಬರು ಕಾಣೆಯಾದ ರೈಲಿನಲ್ಲಿಯೇ ಪ್ರಯಾಣಿಸುತ್ತಿದ್ದರು. ಇವರಿಬ್ಬರ ಹೇಳಿಕೆಯ ಪ್ರಕಾರ, ರೈಲು ಸುರಂಗದ ಬಳಿ ಸಮೀಪಿಸುತ್ತಿದ್ದಂತೆ ದಟ್ಟವಾದ ಹೊಗೆ ಕಾಣಿಸಿಕೊಳ್ಳಲು ಆರಂಭಿಸಿತು. ಎಲ್ಲಾ ಪ್ರಯಾಣಿಕರು ಭಯಗೊಂಡರು. ಆದ್ರೆ ನಾವಿರಬ್ಬರೂ ಕೂಡಲೇ ಚಲಿಸುತ್ತಿದ್ದ ರೈಲಿನಿಂದ ಜಿಗಿದೆವು. ನಂತರ ರೈಲು ಹೊಗೆ ತುಂಬಿದ ಸುರಂಗದೊಳಗೆ ಕಣ್ಮರೆಯಾಯ್ತು ಎಂದು ಹೇಳಿದ್ದಾರೆ.

ಆದ್ರೆ ಕೆಲ ವರದಿಗಳ ಪ್ರಕಾರ, ಕಣ್ಮರೆಯಾದ ರೈಲು 71 ವರ್ಷದ ಹಿಂದೆ ಹೋಗಿತ್ತು. ರೋಮ್ ಸುರಂಗದಲ್ಲಿ ನಾಪತ್ತೆಯಾದ ರೈಲು ಮೆಕ್ಸಿಕೋ ನಗರವನ್ನು ಸೇರಿತ್ತು. ಹಾಗಾಗಿ ಇದನ್ನು ಭೂತದ ರೈಲು ಎಂದು ಕರೆಯಲಾಗುತ್ತದೆ. 1911ರಿಂದ 1840 ಇಸವಿಗೆ ರೈಲು ಹಿಂದಕ್ಕೆ ಚಲಿಸಿತ್ತು ಎನ್ನಲಾಗಿದೆ. ಯಾಕೆಂದರೆ ಮೆಕ್ಸಿಕೋನ್ ವೈದ್ಯರೊಬ್ಬರು, 104 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಈ ಎಲ್ಲಾ 104 ಜನರು ಹುಚ್ಚರಾಗಿದ್ದರು. ಈ 104 ಜನರು ಇಲ್ಲಿಗೆ ಹೇಗೆ ಬಂದರು, ಇವರೆಲ್ಲಾ ಯಾರು? ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಆದ್ರೆ ಅಂದಿನ ಕಾಲದಲ್ಲಿ ರೋಮ್ ನಗರದಿಂದ ಮೆಕ್ಸಿಕೊಗೆ ಯಾವುದೇ ಸಂಪರ್ಕ ಇರಲಿಲ್ಲ. ಹಾಗಾದ್ರೆ ಸುರಂಗದೊಳಗೆ ಹೋದ ರೈಲು ಮೆಕ್ಸಿಕೋ ತಲುಪಿದ್ದೇಗೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ.

ಅಲ್ಲದೆ ಸುರಂಗದಲ್ಲಿ ನಿಗೂಢವಾಗಿ ಕಣ್ಮರೆಯಾದ ಭೂತದ ರೈಲು ಇಟಲಿ, ರಷ್ಯಾ, ಜರ್ಮನಿ ಮತ್ತು ರೊಮೇನಿಯಾದ ಹಲವು ಪ್ರದೇಶಗಳಲ್ಲಿ ಕಂಡುಬಂದಿದೆ ಆದ್ರೆ ಇದನ್ನು ಕಾಣೆಯಾದ ರೈಲು ಎಂದು ಯಾರೂ ಖಚಿತಪಡಿಸಿಲ್ಲ. ಯಾಕೆಂದರೆ 1911 ರಲ್ಲಿ ಕಣ್ಮರೆಯಾದ ರೈಲನ್ನು ಹೋಲುವ ರೈಲನ್ನು ನೋಡಿದ್ದೇವೆ ಎಂದು ಹಲವರು ಹೇಳಿಕೊಂಡಿದ್ದರು ಮಾತ್ರವಲ್ಲದೇ ಆ ಬಗ್ಗೆ ಯಾವುದೇ ಪುರಾವೆಗಳು ಇರಲಿಲ್ಲ. ಕೊನೆಗೂ ಈ ರೈಲು ರಹಸ್ಯವಾಗಿಯೇ ಮಾಯವಾಗಿದೆ.

Leave A Reply

Your email address will not be published.