Pest in Tuvar Dal: ಸಾವಯವ ವಿಧಾನದಿಂದ ತೊಗರಿಯಲ್ಲಿ ಕೀಟ ನಿರ್ವಹಣೆ ಹೇಗೆ?

Pest in Tuvar Dal: ತೊಗರಿ ಕಲ್ಯಾಣ ಕರ್ನಾಟಕದ(Kalayana Karnataka) ಪ್ರಮುಖ ವಾಣಿಜ್ಯ ಬೆಳೆಯಾಗಿದೆ(Commercial crop). ಆದರೆ ಇದನ್ನು ದೇಶದಾದ್ಯಂತ ಆಹಾರ ಪದಾರ್ಥವಾಗಿ(Food) ಹೆಚ್ಚಿನ ಜನ ಬಳಸುತ್ತಾರೆ. ತೊಗರಿ ಬೆಳೆಯು(Tuvar Dal) ಈಗ ಮೊಗ್ಗು ಬಿಡುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಪ್ರಸಕ್ತ ವಾತಾವರಣದಿಂದಾಗಿ ಕೀಟ ಬಾಧೆ(Pest) ಹೆಚ್ಚಾಗುವ ಸಾಧ್ಯತೆಯಿದೆ. ತೊಗರಿಯನ್ನು ಹೆಚ್ಚಾಗಿ ಅಡುಗೆ ಮಾಡಲು ಬಳಸುವುದರಿಂದ ಸಾವಯವ(Organic) ಕ್ರಮಗಳನ್ನಳವಡಿಸಿ ಕೀಟ ಹತೋಟಿ(Pest control) ಮಾಡುವುದು ಉತ್ತಮ ಪದ್ಧತಿ. ಈ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.

– ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಕಷಾಯ ತಯಾರಿಸುವ ವಿಧಾನ: 1.0 ಕೆಜಿ. ಬೆಳ್ಳುಳ್ಳಿಯನ್ನು 100 ಮಿ.ಲೀ ಸೀಮೆ ಎಣ್ಣೆಯಲ್ಲಿ ನೆನೆಸಿ, ರುಬ್ಬಿ, 0.8 ಲೀಟರ್ ದ್ರಾವಣ ಹಾಗೂ 2 ಕೆಜಿ ಮೆಣಸಿನಕಾಯಿಯನ್ನು ಚೆನ್ನಾಗಿ ರುಬ್ಬಿ 1.2 ಲೀಟರ್ ದ್ರಾವಣ ತಯಾರಿಸಬೇಕು.

– ಎರಡೂ ದ್ರಾವಣಗಳನ್ನು 400 ಲೀಟರ್ ನೀರಿನಲ್ಲಿ ಬೆರೆಸಿ, ಒಂದು ಎಕರೆ ಕ್ಷೇತ್ರದಲ್ಲಿ ಬೆಳೆಗೆ ಸಿಂಪಡಿಸಬೇಕು.

– ಬೇವಿನ ಬೀಜದ ಕಷಾಯ ತಯಾರಿಸುವ ವಿಧಾನ: 20 ಕೆಜಿ ಪುಡಿ ಮಾಡಿದ ಬೇವಿನ ಬೀಜವನ್ನು ಬಟ್ಟೆಯಲ್ಲಿ ಕಟ್ಟಿ ನೀರಿನಲ್ಲಿ 10 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಸೊಸಿಕೊಂಡ ಈ ದ್ರಾವಣಕ್ಕೆ 100 ಗ್ರಾಂ. ಸಾಬೂನಿನ ಪುಡಿಯನ್ನು ಬೆರೆಸಿ, 400 ಲೀಟರ್ ನೀರಿನಲ್ಲಿ ಬೆರೆಸಿ ಒಂದು ಎಕರೆ ಕ್ಷೇತ್ರದಲ್ಲಿನ ಬೆಳೆಗೆ ಸಿಂಪಡಿಸಬೇಕು. ಈ ರೀತಿ ಮಾಡುವುದರಿಂದ ತೊಗರಿಗೆ ಬರುವ ಕೀಟಗಳನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು.

ಇಳುವರಿ ಹೆಚ್ಚಿಸಲು, ಬೆಳೆಯ ಬೆಳವಣಿಗೆ ಹೆಚ್ಚಿಸಿ ಹೂ ಮತ್ತು ಕಾಯಿ ಉದುರುವುದನ್ನು ತಡೆಗಟ್ಟಲು ಲಘು ಪೋಷಕಾಂಶಗಳ ಬಳಕೆ ಮಾಡಬೇಕು. ಇದಕ್ಕಾಗಿ ಪಲ್ಸ್ ಬೂಸ್ಟರ್ ಮತ್ತು ಪಲ್ಸ್ ಮ್ಯಾಜಿಕ್ ಸಿಂಪಡಿಸಬೇಕು.

Leave A Reply

Your email address will not be published.