Anna Bhagya: ಇನ್ಮುಂದೆ ಅಕ್ಕಿ ಹಣ ಕಟ್, ಬದಲಿಗೆ ಸಿಗಲಿದೆ ‘ದಿನಸಿ ಕಿಟ್’ !!

Share the Article

Anna Bhagya: ಕರ್ನಾಟಕ ಸರ್ಕಾರ ‘ಅನ್ನಭಾಗ್ಯ’(Anna Bhagya) ಯೋಜನೆಯಡಿ ಫಲಾನುಭವಿಗಳಿಗೆ ಸದ್ಯ 5 ಕೆಜಿ ಅಕ್ಕಿ ಬದಲಿಗೆ ಹಣ ವರ್ಗಾವಣೆ ನೀಡುತ್ತಿದ್ದು, ಇನ್ನು ಮುಂದೆ ಇದನ್ನು ಸರ್ಕಾರ ನಿಲ್ಲಿಸಲಿದೆ. ಯಾಕೆಂದರೆ ಅದರ ಬದಲಿಗೆ ಇನ್ನು ಸರ್ಕಾರ ಫಲಾನುಭವಿಗಳಿಗೆ ಕೆಟ್ ವಿತರಿಸಲಿದೆ.

ಹೌದು, ಕಾಂಗ್ರೆಸ್ ಸರ್ಕಾರ(Congress Government) ಅಧಿಕಾರಕ್ಕೆ ಬಂದಾಗ ಪ್ರತಿ ಫಲಾನುಭವಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರೂ, ಕೇವಲ 5 ಕೆಜಿ ಅಕ್ಕಿಯನ್ನು ಮಾತ್ರ ಪೂರೈಸಲು ಸಾಧ್ಯವಾಗಿದ್ದು, ಉಳಿದ 5 ಕೆಜಿ ಬದಲಿಗೆ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುತ್ತಿದೆ. ಆದರೆ ಇನ್ನು ಮುಂದೆ ಆ ಅಕ್ಕಿ ಹಣ ಜನರಿಗೆ ಸಿಗುವುದಿಲ್ಲ ಬದಲಿಗೆ ದಿನನಿತ್ಯ ಬಳಕೆಗೆ ಬೇಕಾಗುವ ದಿಅಸಿ ಕಿಟ್ ಅನ್ನು ಸರ್ಕಾರ ನೀಡಲಿದೆ. ಹಾಗಿದ್ರೆ ಆ ಕಿಟ್ ನಲ್ಲಿ ಏನೆಲ್ಲಾ ಇರಲಿದೆ?

ಸರ್ಕಾರವು ಕೊಡಲು ತೀರ್ಮಾನಿಸಿರುವ ದಿನಸಿ ಕಿಟ್ ನಲ್ಲಿ ಅಡುಗೆ ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ದಿನಸಿ ಕಿಟ್‌ನಲ್ಲಿ ಇರಲಿದೆ. ಈ ಕುರಿತು ಆಹಾರ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, ಅಕ್ಟೋಬರ್ 1ರಿಂದ ಜಾರಿಗೊಳಿಸಲು ಸಿದ್ಧತೆ ನಡೆದಿದೆ.

Leave A Reply