PM Modi: 20 ವರ್ಷಗಳ ಕಾಲ ನರೇಂದ್ರ ಮೋದಿಗಾಗಿ ಹುಡುಕಾಟ ನಡೆಸಿತ್ತಂತೆ ಈ ಬ್ಯಾಂಕ್ – ಯಾವ ಬ್ಯಾಂಕ್, ಯಾಕಾಗಿ ?

PM Modi: ದೇಶದ ಪ್ರಧಾನಿ ಆದ ಬಳಿಕ ನರೇಂದ್ರ ಮೋದಿಯವರು ಬಡವರಿಗಾಗಿ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅದರಲ್ಲಿ ‘ಜನ್ ಧನ್'(Jan-Dhan Scheme)ಯೋಜನೆ ಕೂಡ ಒಂದು. ಈ ಯೋಜನೆಗೆ ಇದೀಗ ದಶಮಾನೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿ ಪ್ರಧಾನಿಯವರೂ ಪಾಲ್ಗೊಂಡಿದ್ದಾರೆ.

ಅಂದಹಾಗೆ ಸುಮಾರು 10 ವರ್ಷಗಳ ಹಿಂದೆ ಮೋದಿ(PM Modi)ಯವರು ಪ್ರಧಾನಿ ಆದ ಆರಂಭದ ದಿನಗಳಲ್ಲಿ ಈ ಯೋಜನೆ ಜಾರಿಗೊಳಿಸಿದ್ದರು. ಅಂದರೆ ಅದು 2014ರ ಸಮಯ. ಈ ಉದ್ಘಾಟನಾ ಸಮಾರಂಭದಲ್ಲಿ ಮೋದಿ ತಮ್ಮ ಬಾಲ್ಯದ ದಿನಗಳನ್ನು ನೆನೆದಿದ್ದರು. ಕೆಲವು ಘಟನೆಗಳನ್ನು ಮೆಲಕು ಹಾಕಿದ್ದರು. ಆ ವಿಡಿಯೋ ಇದೀಗ ವೈರಲ್ ಆಗಿದೆ. ಅದರಲ್ಲಿ ಮೋದಿ ಅವರು ಬ್ಯಾಂಕ್ ಒಂದು ತನಗಾಗಿ 20 ವರ್ಷಗಳ ಕಾಲ ಹುಡುಕಾಟ ನಡೆಸಿದ ಪ್ರಸಂಗವೊಂದನ್ನು ತೆರೆದಿಟ್ಟಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಮೋದಿಯವರ ಭಾಷಣದ ತುಣುಕಾದ ಈ ವಿಡಿಯೋದಲ್ಲಿ ‘ನಾನು ನನ್ನ ಹಳ್ಳಿಯ ಶಾಲೆಯಲ್ಲಿ ಓದುತ್ತಿದ್ದೆ. ಆ ಸಮಯದಲ್ಲಿ ‘ದೇನಾ ಬ್ಯಾಂಕ್’ನವರು ನಮ್ಮ ಶಾಲೆಗೆ ಬಂದಿದ್ದರು. ಎಲ್ಲರಿಗೂ ಹಣ ಸಂಗ್ರಹ ಮಾಡುವ ಹುಂಡಿಗಳನ್ನು ನೀಡಿ ಹಣ ಉಳಿಸುವುದು ಹೇಗೆ ಎಂದು ವಿವರಿಸುತ್ತಿದ್ದರು.ಇನ್ನು ಹಣ ಉಳಿಸುವ ಸಲುವಾಗಿಯೇ ಎಲ್ಲರ ಬ್ಯಾಂಕ್ ಖಾತೆಯನ್ನೂ ತೆರೆಯಲಾಗಿತ್ತು. ನನ್ನ ಹುಂಡಿ ಮಾತ್ರ ಯಾವತ್ತೂ ತುಂಬಲೇ ಇಲ್ಲ. ಏಕೆಂದರೆ ಆ ಹುಂಡಿಗೆ ಒಂದು ರೂಪಾಯಿ ಕೂಡ ಹಾಕಿರಲಿಲ್ಲ’ ಎಂದಿದ್ದಾರೆ ಪ್ರಧಾನಿ ಮೋದಿ.

ಮುಂದುವರೆದು ಮಾತನಾಡಿರವ ಅವರು ‘ನಾನು ಶಾಲೆ ತೊರೆದ ಬಳಿಕ ಸುಮಾರು 20 ವರ್ಷಗಳವರೆಗೆ ಖಾತೆ ತೆರೆಸಿದ ಈ ಬ್ಯಾಂಕಿನವರೇ ನನ್ನನ್ನು ಹುಡುಕುತ್ತಿದ್ದರು. ಯಾಕಾಗಿ ಅಂದರೆ ಬ್ಯಾಂಕಿನವರು ಮೋದಿಯವರ ಹೆಸರಿನಲ್ಲಿ ತೆರೆದಿದ್ದ ಖಾತೆಯನ್ನು ಮುಚ್ಚುವ ಸಲುವಾಗಿ ೨೦ ವರ್ಷ ಅವರಿಗಾಗಿ ಹುಡುಕಾಟ ಮಾಡಿದ್ದರಂತೆ. ದಶಕಗಳಿಂದ ಬಳಕೆಯಾಗದೆ ಬಿದ್ದಿರುವ ಖಾತೆಯನ್ನು ಹೊರೆಯಾಗಿ ಕಂಡ ವ್ಯವಸ್ಥೆ ಆ ಖಾತೆಯನ್ನೇ ಮುಚ್ಚುವ ನಿರ್ಧಾರ ಮಾಡಿತ್ತಂತೆ. ಬ್ಯಾಂಕಿನವರು ತನ್ನ ಖಾತೆ ಮುಚ್ಚುವ ಸಲುವಾಗಿ ತನ್ನನ್ನು ಹುಡುಕುತ್ತಿದ್ದಾರೆ ಎಂದು ತಿಳಿದ ಮೇಲೆ ಮೋದಿಯವರೇ ತೆರಳಿ ತನ್ನ ಹೆಸರಿನ ಖಾತೆಯನ್ನು ಕ್ಲೋಸ್ ಮಾಡಿಸಿದ್ದರಂತೆ.

 

Leave A Reply

Your email address will not be published.