Shed tea stall: ‘ಶೆಡ್ ಟೀ ಶಾಪ್ ‘: ಬಾ ಗುರು ಶೆಡ್‌ಗೆ ಟೀ ಕುಡಿಯೋಣ

Shed tea stall: ಸಿನಿಮಾಗಳು, ಸಿನಿಮಾ(Cinema) ಮಂದಿ ಸಾರ್ವಜನಿಕರ ಜೀವನದಲ್ಲಿ ಬಹಳ ಬೇಗ ಬೆರೆಯುತ್ತಾರೆ. ಅದಕ್ಕಿರುವ ತಾಕತ್ತೇ ಅಂಥದ್ದು. ಅಂದು ಡಾ. ರಾಜ್‌ ಕುಮಾರ್‌(Dr Raj kumar) ಅವರು ಮಾಡಿದ್ದ ಸಂಪತ್ತಿಗೆ ಸವಾಲ್‌(Sampathige Saval) ಚಿತ್ರ ಅನೇಕ ಯುವಕರ ದಾರಿ ದೀಪವಾಗಿತ್ತು. ಎಷ್ಟೋ ಯುವಕರು(Youths) ಮತ್ತೆ ಕೃಷಿಗೆ(Farming) ಇಳಿದಿದ್ದರು. ಅದೇ ರೀತಿ ಸಿನಿಮಾ ತಾರೆಯರು ರೀಲ್‌ನಲ್ಲೋ(Reel) ರಿಯಲ್‌ನಲ್ಲೋ(Real) ಏನೇ ಮಾಡಿದರು ಅದು ಅಭಿಮಾನಿಗಳಿಗೆ(Fans) ಸಹಜವಾಗೇ ನಾಟುತ್ತದೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟ ದರ್ಶನ್‌, ತಪ್ಪು ಮಾಡಿದ್ರು ಕೆಲ ವಿಷಯದಲ್ಲಿ ಕೆಲವರಿಗೆ ಬದುಕುವ ದಾರಿ ತೋರಿದ್ದಾರೆ.

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅಲಿಯಾಸ್ ಡಿ ಬಾಸ್ ಸದ್ಯ ತನ್ನ ಅಭಿಮಾನಿ ರೇಣುಕಾ ಸ್ವಾಮಿ ಹತ್ಯೆ ಕೇಸಲ್ಲಿ ಅಂದರ್ ಆಗಿದ್ದಾರೆ. ಈ ಘಟನೆ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈ ಘಟನೆ ನಡೆದದ್ದು, ಬೆಂಗಳೂರಿನ ಪಟ್ಟನಗೆರೆಯ ಶೆಡ್ನಲ್ಲಿ(Shed). ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮುಖ್ಯ ಸಾಕ್ಷಿಯೇ ಈ ಶೆಡ್. ರೇಣುಕಾ ಸ್ವಾಮಿಯನ್ನು ಕರೆತಂದು ಅವನನ್ನು ಚಿತ್ರ ಹಿಂಸೆ ಕೊಟ್ಟು ಸಾಯಿಸಿದ್ದೇ ಈ ಶೆಡ್‌ನಲ್ಲಿ. ದರ್ಶನ್‌, ಪವಿತ್ರಾ ಗೌಡ ಹೋಗಿ ಅವನಿಗೆ ಟಾರ್ಚರ್‌ ಕೊಟ್ಟಿದ್ದು ಈ ಶೆಡ್‌ನಲ್ಲಿ. ಅಲ್ಲದೆ ಇದು ದರ್ಶನ್‌ ಹಾಗೂ ಅವನ ಗ್ಯಾಂಗ್‌ ಸೇರುವ ಅಜ್ಞಾತ ಸ್ಥಳವೂ ಹೌದು.

ರೇಣುಕಾ ಸ್ವಾಮಿ ಕೊಲೆ ನಂತರವಂತೂ ಈ ಶೆಡ್‌ , ಎಲ್ಲರಿಗೂ ಚಿರಪರಿಚಿತವಾಯ್ತು. ಇದರ ಮೇಲೆ ರೀಲ್ಸ್‌, ಕಾಮಿಡಿಗಳು, ಸ್ಟೇಟಸ್‌ಗಳು ಒಂದಾ ಎರಡಾ.. ಎಲ್ಲರ ಬಾಯಲ್ಲೂ ಶೆಡ್‌ದ್ದೇ ಮಾತು ಕತೆ. ರೇಣುಕಾ ಸ್ವಾಮಿ ಕೊಲೆ ನಡೆದು ಈಗಾಗಲೇ ಎರಡು ತಿಂಗಳು ಕಳೆದಿದೆ. ಅದಾದ ಬಳಿಕ ಅದೇನೇನೋ ಬೆಳವಣಿಗೆಯಲ್ಲಿ ದರ್ಶನ್‌ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಬೇರೆ ಇಂದೇ ಶಿಫ್ಟ್‌ ಆಗಿದ್ದಾರೆ. ಈ ಮಧ್ಯೆ ಇದೇ ಶೆಡ್‌ ಕಾನ್ಸ್‌ಪ್ಟ್‌ ಇಟ್ಟುಕೊಂಡು ಹಳ್ಳಿ ಹೈದನೊಬ್ಬ ಟೀ ಅಂಗಡಿ ಇಟ್ಟಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ತರಿಕೇರೆಯ ಎಂ ಜಿ ರಸ್ತೆಯಲ್ಲಿ ಇಟ್ಟುಕೊಂಡಿದ್ದಾನೆ. ಅಂಗಡಿಗೆ ‘ಶೆಡ್ ಟೀ ಶಾಪ್ ‘ ಅಂತ ಹೆಸರಿಟ್ಟು ಅದಕ್ಕೆ ʻಬಾ ಗುರು ಶೆಡ್‌ಗೆ ಟೀ ಕುಡಿಯೋಣʼ ಅಂತ ಡ್ಯಾಗ್‌ ಲೈನ್‌ ಬೇರೆ ಹಾಕೊಂಡಿದ್ದಾನೆ.

ಅಂತೂ ದರ್ಶನ್‌ ಹೆಸರಲ್ಲಿ ಬೇರೆಯವರು ಟೀ ಅಂಗಡಿ ಇಟ್ಟು ಸ್ವಾಭಿಮಾನದ ಬದುಕು ಬಾಳುವಂಗಾಯ್ತು. ದರ್ಶನ್‌ ಆಶೀರ್ವಾದದಿಂದ ವ್ಯಾಪಾರ ಚೆನ್ನಾಗಿ ಆಗ್ಲಿ. ಹಂಗೆ ಇವತ್ತು ದರ್ಶನ್‌ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಒಳ ದಾರಿಯಿಂದ ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ. ಇದೇ ಮಾರ್ಗವಾಗಿ ಬಂದು ಪೊಲೀಸರು ಟಿ ಕುಡಿಸಕೊಂಡು ಹೋದ್ರೋ ಏನೋ? ಅಂಗಡಿ ಹಾಕಿದ ಹುಡುಗನಿಗೆ ಒಳ್ಳೆ ಲಾಭ ಆಗ್ಲಿ.

Leave A Reply

Your email address will not be published.