Passport Seva portal: ಪಾಸ್​ಪೋರ್ಟ್ ಸೇವಾ ಪೋರ್ಟಲ್ ನಾಳೆಯಿಂದ 4 ದಿನ ಬಂದ್: ಪಾಸ್ ಪೋರ್ಟ್ ಇಲಾಖೆ ಆದೇಶ

Passport Seva portal:  ಪಾಸ್​ಪೋರ್ಟ್ ಸಂಬಂಧ ಪಟ್ಟ ಕೆಲಸಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ಆಗಸ್ಟ್ 29, ಗುರುವಾರ ಸಂಜೆ 8 ಗಂಟೆಯಿಂದ ಸೆಪ್ಟಂಬರ್ 2, ಬೆಳಗ್ಗೆ 6 ಗಂಟೆಯವರೆಗೂ ಪಾಸ್​ಪೋರ್ಟ್ ಸೇವಾ ಪೋರ್ಟಲ್ (Passport Seva portal) ಬಂದ್ ಆಗಿರುತ್ತದೆ. ಮುಖ್ಯವಾಗಿ ಟೆಕ್ನಿಕಲ್ ಮೈಂಟೆನೆನ್ಸ್ ಕಾರಣಕ್ಕೆ ಪೋರ್ಟಲ್ ಸುಮಾರು ನಾಲ್ಕು ದಿನ ಸಾರ್ವಜನಿಕರಿಗೆ ಅಲಭ್ಯ ಇರುತ್ತದೆ ಎಂದು ಪಾಸ್​ಪೋರ್ಟ್ ಇಲಾಖೆ ತಿಳಿಸಿದೆ.

ಹೌದು, ಪಾಸ್​ಪೋರ್ಟ್ ಸೇವಾ ಕೇಂದ್ರದ ಜಾಲತಾಣ ನಾಲ್ಕು ದಿನ ಬಂದ್ ಆಗಿರಲಿದೆ. ಪೋರ್ಟಲ್​ನ ಟೆಕ್ನಿಕಲ್ ಮೈಂಟೆನೆನ್ಸ್ ಕಾರ್ಯ ನಡೆಯುತ್ತಿರುವುದರಿಂದ ಅದು ಸಾರ್ವಜನಿಕ ಬಳಕೆಗೆ ಲಭ್ಯ ಇರುವುದಿಲ್ಲ. ನಾಳೆ ಗುರುವಾರ(ಆಗಸ್ಟ್ 29) ಸಂಜೆ 8ರಿಂದ ಸೆಪ್ಟಂಬರ್ 2ರ ಬೆಳಗ್ಗೆ 6ಗಂಟೆಯವರೆಗೂ ಈ ಪೋರ್ಟಲ್​ನಲ್ಲಿ ಯಾವ ಸರ್ವಿಸ್ ಇರುವುದಿಲ್ಲ. ಸದ್ಯ ಆಗಸ್ಟ್ 30ರಂದು ನೀಡಲಾಗಿರುವ ಎಲ್ಲಾ ಅಪಾಯಿಂಟ್ಮೆಂಟ್​ಗಳನ್ನು ರದ್ದು ಮಾಡಲಾಗಿದ್ದು, ಅಪಾಯಿಂಟ್ಮೆಂಟ್ ಪಡೆದಿರುವ ಅಭ್ಯರ್ಥಿಗಳಿಗೆ ಎಸ್ಸೆಮ್ಮೆಸ್ ಮೂಲಕ ಮುಂದಿನ ಮಾಹಿತಿ ನೀಡಲಾಗುತ್ತದೆ ಎಂದು ಪಾಸ್​ಪೋರ್ಟ್ ಇಲಾಖೆ ಹೇಳಿದೆ.

ಅಲ್ಲದೆ ಪಾಸ್​ಪೋರ್ಟ್ ಸೇವಾ ಪೋರ್ಟಲ್ ಮಾತ್ರವಲ್ಲ, ವಿವಿಧೆಡೆ ಇರುವ ಪಾಸ್​ಪೋರ್ಟ್ ಸೇವಾ ಕೇಂದ್ರಗಳೂ ಆಗಸ್ಟ್ 30ರಂದು ಬಂದ್ ಆಗಿರುತ್ತವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಪಾಸ್​ಪೋರ್ಟ್ ಸೇವಾ ವಿಭಾಗ ಈ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿತ್ತು.

ಟೆಕ್ನಿಕಲ್ ಮೈಂಟೆನೆನ್ಸ್​ನಿಂದಾಗಿ ಪಾಸ್​ಪೋರ್ಟ್ ಸೇವಾ ಪೋರ್ಟಲ್ ಬಂದ್ ಆಗಿರುವ ಅವಧಿಯಲ್ಲಿ ನಾಗರಿಕರಿಗೆ ಹಾಗೂ ಎಲ್ಲಾ ಎಂಇಎ, ಆರ್​ಪಿಒ, ಬಿಒಐ, ಡಿಒಪಿ, ಪೊಲೀಸ್ ಪ್ರಾಧಿಕಾರಗಳಿಗೆ ಸಿಸ್ಟಂ ಲಭ್ಯ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.

Leave A Reply

Your email address will not be published.