Ayodhya: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಖರ್ಚಾದ ಮೊತ್ತವೆಷ್ಟು ಗೊತ್ತೇ?
Ayodhya: ಕೋಟ್ಯಾಂತರ ರಾಮಭಕ್ತರ ಕನಸು ಈಗಾಗಲೇ ನನಸಾಗಿದೆ. ಅಂತೂ ಅಯೋಧ್ಯೆಯಲ್ಲಿ (Ayodhya) ಹಲವು ವಿದಿವಿಧಾನದಿಂದ ಪೂಜೆ ನಡೆದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಹಾಗಾದ್ರೆ ಈ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಒಟ್ಟು ಎಷ್ಟು ಖರ್ಚು ಆಗಿರಬಹುದು ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಹೌದು, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೀಡಿರುವ ಮಾಹಿತಿಯಂತೆ ಜನವರಿ 22 ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬರೋಬ್ಬರಿ 113 ಕೋಟಿ ರೂ. ವೆಚ್ಚವಾಗಿದೆ.
ಇನ್ನು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಪ್ರಕಾರ 2024ರ ಎ. 1ರಿಂದ 2025ರ ಮಾ. 31ರವರೆಗೆ ರಾಮಮಂದಿರ ಯೋಜನೆಗೆ 850 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ 670 ಕೋಟಿ ರೂ. ದೇವಸ್ಥಾನದ ನಿರ್ಮಾಣಕ್ಕೆ ವೆಚ್ಚವಾದರೆ, ಉಳಿದ 180 ಕೋಟಿ ರೂ.ಗಳನ್ನು ಇತರ ಕೆಲಸಗಳಿಗೆ ಬಳಸಲಾಗುತ್ತದೆ.
ಇನ್ನು ಟ್ರಸ್ಟ್ ನೀಡಿರುವ ಮಾಹಿತಿ ಪ್ರಕಾರ 2023- 24ನೇ ಆರ್ಥಿಕ ವರ್ಷದಲ್ಲಿ 540 ಕೋಟಿ ರೂ. ಮಂದಿರ ನಿರ್ಮಾಣಕ್ಕೆ ವೆಚ್ಚವಾಗಿದ್ದರೆ, 136 ಕೋಟಿ ರೂ. ಇತರ ಕೆಲಸಗಳಿಗೆ ವೆಚ್ಚವಾಗಿದೆ. ಇನ್ನು ಮಂದಿರದ 363.34 ಕೋಟಿ ರೂ. ಆದಾಯ ದಲ್ಲಿ 204 ಕೋಟಿ ರೂ. ಬ್ಯಾಂಕ್‌ಗಳ ಬಡ್ಡಿಯಿಂದ ಬಂದಿದ್ದರೆ, 58 ಕೋಟಿ ರೂ. ಕೊಡುಗೆಗಳಿಂದ ಬಂದಿದೆ ಎಂದಿದ್ದಾರೆ.
ಈಗಾಗಲೇ ಕಳೆದ 4 ವರ್ಷಗಳಲ್ಲಿ ಭಕ್ತರು 20 ಕೆ.ಜಿ ಚಿನ್ನ, 13 ಕ್ವಿಂಟಲ್ ಬೆಳ್ಳಿಯ ಆಭರಣಗಳನ್ನು ದೇಗುಲಕ್ಕೆ ನೀಡಿದ್ದಾರೆ. ಮುಖ್ಯವಾಗಿ ಮಂದಿರ ನಿರ್ಮಾಣಕ್ಕೆ ಈವರೆಗೆ 1,800 ಕೋಟಿ ರೂ. ವೆಚ್ಚವಾಗಿದ್ದು, ಬಾಕಿ 2 ಹಂತಗಳ ನಿರ್ಮಾಣಕ್ಕೆ 670 ಕೋಟಿ ರೂ. ವೆಚ್ಚವಾಗಲಿದೆ ಎಂದು ಟ್ರಸ್ಟ್ ಇತ್ತೀಚೆಗೆ ತಿಳಿಸಿದೆ.
ಸದ್ಯ 2024ರ ಏಪ್ರಿಲ್ 1 ರಿಂದ 2025ರ ಮಾರ್ಚ್ 31ರವರೆಗೆ ₹850 ಕೋಟಿ ಖರ್ಚನ್ನು ಅಂದಾಜಿಸಲಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.