Rahul Gandhi: ಮದುವೆ ಆಗುವ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಂದ ಯುವತಿ; 20-30 ವರ್ಷಗಳಿಂದ ‘ಅದನ್ನು’ ಸಹಿಸಿಕೊಂಡು ಬಂದಿದ್ದೇನೆ ಎಂದ ರಾಹುಲ್ !!

Share the Article

Rahul Gandhi: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ(Rahul Gandhi) 50ದಾಟಿದರೂ ಅವರು ಯುವ ನಾಯಕರಾಗೇ ಉಳಿದಿದ್ದಾರೆ. ಅಲ್ಲದೆ ಮದುವೆ ಆಗದೆಯೂ ಒಂಟಿಯಾಗೇ ಇದ್ದಾರೆ. ಅವರ ಮದುವೆ ಕುರಿತು ಆಗಾಗ ಚರ್ಚೆಗಳು, ಪ್ರಶ್ನೆಗಳು ಏಳವುದುಂಟು. ಅಂತೆಯೇ ಇದೀಗ ಪ್ರಶ್ನೆಯೊಂದು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅದೂ ಕೂಡ ಒಬ್ಬಳು ವಿದ್ಯಾರ್ಥಿನಿ ಈ ಪ್ರಶ್ಯೆಯನ್ನು ಎತ್ತಿದ್ದಾಳೆ.

ಹೌದು, ಕಾಶ್ಮೀರದ ಶ್ರೀನಗರದಲ್ಲಿ(Shrinagara) ವಿದ್ಯಾರ್ಥಿನಿಯರ ಜತೆ ರಾಹುಲ್ ಸಂವಾದ ನಡೆಸಿದ್ದು, ಈ ವೇಳೆ ದಾಂಪತ್ಯ ಜೀವನದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನೀವ್ಯಾಗ ಮದುವೆ ಆಗ್ತೀರಾ ಎಂದು ಯುವತಿಯೊಬ್ಬಳು ರಾಹುಲ್ ಗೆ ನೇರವಾಗಿ ಪ್ರಶ್ನೆ ಕೇಳಿದ್ದಾಳೆ. ಈ ಪ್ರಶ್ನೆಗೆ ಸದ್ಯ ರಾಹುಲ್ ಕೊಟ್ಟ ಉತ್ತರ ಇದೀಗ ವೈರಲ್ ಆಗಿದೆ.

ಹುಡುಗಿ ಪ್ರಶ್ನೆಯನ್ನು ಹರಿಬಿಡುತ್ತಿದ್ದಂತೆ ರಾಹುಲ್ ‘ಕಳೆದ 20-30 ವರ್ಷಗಳಿಂದ ನನ್ನ ಮೇಲೆ ಮದುವೆಯಾಗಲು ಒತ್ತಡ ಹೇರಲಾಗುತ್ತಿದೆ. ನಾನು ಆ ಬಗ್ಗೆ ಯೋಚಿಸುತ್ತಿಲ್ಲವಾದರೂ, ಮದುವೆಯಾದರೆ…’ ಎಂದು ಮಾತನ್ನು ಅರ್ಧಕ್ಕೇ ತುಂಡರಿಸಿದರು. ಅಲ್ಲದೆ ನಿಮ್ಮ ಮದುವೆಗೆ ನಮಗೂ ಆಹ್ವಾನಿಸಿ’ ಎಂಬ ಹುಡುಗಿಯರ ಮನವಿಗೆ ರಾಹುಲ್ ನಗುತ್ತ, ‘ಖಂಡಿತ’ ಎಂದರು. ಈ ವಿಡಿಯೋವನ್ನು ಅವರು ತಮ್ಮ ಯೂಟ್ಯೂಬ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

Leave A Reply