Rain Season crop: ಅಧಿಕ ಮಳೆಯಾದಾಗ ಬೆಳೆ ಸುಧಾರಣೆ ಹೇಗೆ? ಸೂಕ್ತ ಕ್ರಮಗಳು ಏನು?
Rain Season crop: ಅತಿಯಾದ ಮಳೆ(Rain) ಬೆಳೆಗಳಿಗೆ(Crop) ಮಾರಕವಾಗಿದೆ. ಮಳೆಯು ನಿರಂತರ ಸುರಿಯುವುದರಿಂದ ಕೀಟಬಾಧೆ ಹಾಗೂ ರೋಗಬಾಧೆಗಳು(Pest infestation & diseases) ಹೆಚ್ಚಾಗುತ್ತವೆ. ಅದಕ್ಕಾಗಿ ತೋಟ ಹಾಗೂ ಹೊಲವನ್ನು(Field) ಸೂಕ್ಷ್ಮವಾಗಿ ಗಮನಿಸಿ ಅಗತ್ಯವಿದ್ದಲ್ಲಿ ಸೂಕ್ತ ಸುಧಾರಣೆ ಕ್ರಮ ಕೈಗೊಳ್ಳಬೇಕು. ಈ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಕಬ್ಬು ಬೆಳೆಯಲ್ಲಿ(Sugarcane Crop) ಹೆಚ್ಚಿನ ಮಳೆ ನೀರನ್ನು ಹೊರಹಾಕುವುದು ಮತ್ತು ಸಾಧ್ಯವಿದ್ದಲ್ಲಿ ಪ್ರತಿ ಲೀಟರ್ ನೀರಿಗೆ 5 ಗ್ರಾಂ 19:19:19 ಮತ್ತು 5 ಮಿ.ಲೀ. ಲಘು ಪೋಷಕಾಂಶಗಳ ದ್ರಾವಣ ಸಿಂಪಡಿಸಬೇಕು. ಇದನ್ನು ಎರಡು ವಾರಗಳಿಗೊಮ್ಮೆ ಪುನರಾವರ್ತಿಸಿ ಮಾಡಬಹುದು.
ಹೈಬ್ರಿಡ್ ಹತ್ತಿಯಲ್ಲಿ(Cotton) ಹೆಚ್ಚಿನ ಮಳೆ ನೀರನ್ನು ಹೊರಹಾಕುವುದು ಮತ್ತು ನೀರು ನಿಂತು ಬೆಳೆ ಬಾಡುತ್ತಿರುವುದು ಕಂಡಲ್ಲಿ ಪ್ರತಿ ಲೀ ನೀರಿಗೆ 2 ಗ್ರಾಂ ಕಾರ್ಬನ್‌ಡೈಜಿಂ ಬೆರೆಸಿದ ದ್ರಾವಣ ಸುರಿಯಬೇಕು. ಪ್ರತಿ ಲೀಟರ್ ನೀರಿಗೆ 10 ಗ್ರಾಂ 13:40:13 ಮತ್ತು 10 ಮಿಲೀ ಲಘು ಪೋಷಕಾಂಶಗಳ ದ್ರಾವಣವನ್ನು ಸಿಂಪಡಿಸಬೇಕು. ಎರಡು ವಾರಗಳಿಗೊಮ್ಮೆ ಬೇರೆ-ಬೇರೆ ಗೊಬ್ಬರ ಬಳಸಿ ಸಿಂಪಡಿಸಬೇಕು.
ಸೋಯಾ ಅವರೆ ಬೆಳೆಗೆ 2 ಗ್ರಾಂ ಪ್ರತಿ ಲೀ ಕಾರ್ಬನ್ ಡೈಜಿಂ ಮತ್ತು 5 ಗ್ರಾಂ.13:40:13 ಹಾಗೆ ಲಘು ಪೋಷಕಾಂಶಗಳ ದ್ರಾವಣ 5 ಮಿಲೀ ಪ್ರತಿ ಲೀಟರ್‌ಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು.
ಗೋವಿನಜೋಳ ಮತ್ತು ಜೋಳ ಬೆಳೆಗೆ(Mize Crop) ಪ್ರತಿ ಲೀಟರ್ ನೀರಿಗೆ 5 ಗ್ರಾಂ 19:19:19 ಮತ್ತು 5 ಮಿಲೀ ಲಘು ಪೋಷಕಾಂಶಗಳ ದ್ರಾವಣ ಸಿಂಪಡಿಸಬೇಕು ಮತ್ತು 45 ದಿನಗಳ ಹಂತದ ಕೆಂಪು ಜಮೀನಿನಲ್ಲಿ ತಲಾ 50 ಕೆಜಿ ಯೂರಿಯಾ, ಎಂಒಪಿ ಬೆರೆಸಿ ಬೆಳೆಯಿಂದ 4 ಇಂಚು ಬಿಟ್ಟು ಮಗ್ಗಲಿಗೆ ಆಳದಲ್ಲಿ ಕೊಡಬೇಕು.