Mobile Phone: ಮಕ್ಕಳ ಮೊಬೈಲ್ ಚಟ ಬಿಡಿಸಲು ಏನು ಮಾಡಬೇಕು? ಇಲ್ಲಿದೆ ನೋಡಿ ಸರಳ ವಿಧಾನ

Mobile phone: ಪೋಷಕರು ಮಗು ಸ್ವಲ್ಪ ಹಟ ಮಾಡಿದರೆ ಅವರನ್ನು ತ್ವರಿತವಾಗಿ ಸುಧಾರಿಸಲು ಮೊಬೈಲ್‌ಗಳನ್ನು ನೀಡುವುದುಂಟು. ಇದರಿಂದ ಮಕ್ಕಳು- ಪೋಷಕರಿಗೆ ಹಾಗು ಪೋಷಕರಿಗೆ- ಮಕ್ಕಳು ದೂರವಾಗುತ್ತಿದ್ದಾರೆ. ವಾಸ್ತವವಾಗಿ, ಆನ್‌ಲೈನ್ ಪ್ರಪಂಚವು ಅತ್ಯಂತ ವ್ಯಸನಕಾರಿಯಾಗಿದೆ. ಇದು ಅತಿಯಾದರೆ ಮಗುವಿನ ಒಟ್ಟಾರೆ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಮಕ್ಕಳ ಮನಸ್ಸು ಮನೋರಂಜನೆ ಹೆಚ್ಚು ವಾಲುತ್ತದೆ ನಿಜ ಹಾಗಂತ ಮೊಬೈಲ್ ಕೈಗೆ ನೀಡದಿರಿ. ಯಾಕೆಂದರೆ ಬಹುತೇಕ ಮಕ್ಕಳಲ್ಲಿ ಇತ್ತೀಚಿಗೆ ಮೊಬೈಲ್ ಚಟ (Mobile phone) ವಿಪರೀತವಾಗಿ ಹೆಚ್ಚುತ್ತಿದೆ. ಆದ್ರೆ ಮಕ್ಕಳ ಮೊಬೈಲ್ ಅಭ್ಯಾಸವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಒಂದು ವೇಳೆ ನಿಮ್ಮ ಮಕ್ಕಳಿಗೂ ಮೊಬೈಲ್ ಅಭ್ಯಾಸವಿದ್ದರೆ ಅದನ್ನ ನಿಲ್ಲಿಸಲು ಪ್ರಯಸುವುದು ಸೂಕ್ತ.
ಒಮ್ಮೆ ಮಕ್ಕಳು ಮೊಬೈಲ್’ಗೆ ಒಗ್ಗಿಕೊಂಡರೆ ಅವರನ್ನ ಕೂರಿಸುವುದು ತುಂಬಾ ಕಷ್ಟ. ಕೆಲವು ಪಾಲಕರು ಕೂಡ ದಿನವಿಡೀ ಮೊಬೈಲ್’ನಲ್ಲಿ ಬ್ಯುಸಿಯಾಗಿರುತ್ತಾರೆ. ಕುಟುಂಬ ಮತ್ತು ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಬದಲು, ಮೊಬೈಲ್ ಅಭ್ಯಾಸವಾಗುತ್ತದೆ. ಇದನ್ನು ನೋಡಿ ಮಕ್ಕಳಿಗೂ ಮೊಬೈಲ್ ಕೆಟ್ಟ ಚಟಗಳು ಬರುತ್ತವೆ. ಅದಕ್ಕಾಗಿ ಮಕ್ಕಳಲ್ಲಿರುವ ಮೊಬೈಲ್ ಚಟವನ್ನ ಹೋಗಲಾಡಿಸಲು ಕೆಲವೊಂದು ಸಲಹೆಗಳನ್ನು ಪಾಲಿಸಬೇಕು ಎನ್ನುತ್ತಾರೆ ತಜ್ಞರು.
ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮೊಬೈಲ್ ಕೊಡಬೇಡಿ, ಬಿಡುವು ಮಾಡಿಕೊಂಡು ಮಕ್ಕಳ ಕಡೆಗೆ ಗಮನಹರಿಸಬೇಕು , ಹೊಸ ಹೊಸ ಅಭ್ಯಾಸ, ವಿಷಯಗಳನ್ನು , ಗ್ರಾಮೀಣ ಆಟಗಳ ಬಗ್ಗೆ ಪರಿಚಯಿಸಬೇಕು.
ತಿಂಡಿ ತಿನಿಸು ಮಾಡುವಾಗ ಮೊಬೈಲ್ ಕೊಡಬೇಡಿ, ಹಾಗೆ ಮಾಡಿದರೆ ಪ್ರತಿ ಬಾರಿ ಊಟಕ್ಕೂ ಮುನ್ನ ಮೊಬೈಲ್ ಕೊಡಬೇಕು. ಇಲ್ಲದಿದ್ದರೆ ಅವರು ತಿನ್ನುವುದಿಲ್ಲ. ಆದ್ದರಿಂದ ಮೊದಲೇ ಮೊಬೈಲ್ ದೂರವಿಡಿ.
ಹೊರಾಂಗಣ ಆಟಗಳು ಅಥವಾ ಚಟುವಟಿಕೆಗಳಲ್ಲಿ ಅವರನ್ನ ತೊಡಗಿಸಿಕೊಳ್ಳಿ. ನೀವು ಮಗುವನ್ನು ಸೈಕ್ಲಿಂಗ್’ಗೆ ಕರೆದೊಯ್ಯಬಹುದು. ಗಿಡ ಮರಗಳನ್ನು ಬೆಳೆಸುವ ಬಗ್ಗೆ, ಆರೈಕೆ ಮಾಡುವ ರೀತಿ ಜೊತೆಯಾಗಿ ಇದ್ದು ಅವರಿಗೆ ಮಾರ್ಗದರ್ಶನ ನೀಡಿ.
ಇನ್ನು ನಿಮ್ಮ ಅನುಮತಿಯಿಲ್ಲದೆ ನಿಮ್ಮ ಮಕ್ಕಳು ಮೊಬೈಲ್ ಬಳಸದಂತೆ ನಿಮ್ಮ ಮೊಬೈಲ್’ನಲ್ಲಿ ಪಾಸ್‌ವರ್ಡ್ ಇರಿಸಿ. ನೀವು ನಿಮ್ಮ ಮೊಬೈಲ್’ನಲ್ಲಿ ಕೆಲಸ ಮುಗಿದ ನಂತರ ನೀವು ಇಂಟರ್ನೆಟ್ ಅಥವಾ ವೈಫೈ ಆಫ್ ಮಾಡಿ. ಹೀಗೆ ಮಾಡುವುದರಿಂದ ಮಕ್ಕಳು ಮೊಬೈಲ್ ಬಳಸುವುದಿಲ್ಲ.
ಮಗುವಿನ ಕೈಯಲ್ಲಿ ಫೋನ್ ಕಂಡರೆ ತಕ್ಷಣ ತೆಗೆದುಕೊಂಡು ಹೋಗಬೇಡಿ. ಇದರಿಂದ ನಿಮ್ಮ ಮಗುವಿಗೆ ಕೋಪ ಬರುತ್ತದೆ. ಶಾಂತವಾಗಿ ವಿವರಿಸಿ ಮತ್ತು ಅವರಿಂದ ಫೋನ್ ತೆಗೆದುಕೊಳ್ಳಿ.
ಮೊಬೈಲ್ ಬದಲು ಮನೆಯಲ್ಲಿ ಮಕ್ಕಳು ಟಿವಿ ನೋಡುವ ಮೂಲಕ, ಪುಸ್ತಕಗಳನ್ನು ಓದುವ, ಡ್ರಾಯಿಂಗ್, ಸ್ಪೀಕರ್’ನಲ್ಲಿ ಹಾಡುಗಳನ್ನು ಕೇಳುವ ಮೂಲಕ ಮನರಂಜಿಸಲು ಪ್ರೋತ್ಸಾಹಿಸಿ. ನಿಮ್ಮ ಮಕ್ಕಳು ಸ್ಮಾರ್ಟ್ ಟಿವಿ ವೀಕ್ಷಿಸಲು ನೀವು ಸಮಯವನ್ನ ನಿಗದಿಪಡಿಸಬಹುದು.