TB Dam: ಗೇಟ್ ದುರಸ್ತಿ ಬೆನ್ನಲ್ಲೇ ತುಂಗಾಭದ್ರಾ ಅಣೆಕಟ್ಟೆಗೆ ಎದುರಾಯ್ತು ಊಹಿಸದಂತ ಮತ್ತೊಂದು ಆಘಾತ – ಡ್ಯಾಂ ತಜ್ಞ ಕನ್ಹಯ್ಯನ ಮಾತಿಗೆ ನಡುಗಿ ಹೋದ ರೈತರು !!
TB Dam: ನಾಡಿನ ಅತೀ ದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ, ಬರೋಬ್ಬರಿ 12 ಲಕ್ಷ ಹೆಕ್ಟೇರ್ ಗಿಂತಲೂ ಹೆಚ್ಚಿಗೆ ಜಮೀನುಗಳಿಗೆ ನೀರುಣಿಸುವ, ಉತ್ತರ ಕರ್ನಾಟಕದ ಜೀವನಾಡಿ ಎಂದೇ ಕರೆಯಲ್ಪಡುವ ಹೊಸಪೇಟೆಯ(Hospete) ತುಂಗಭದ್ರಾ ಅಣೆಕಟ್ಟೆ(TB Dam)ಗೆ ಇದೀಗ ಊಹಿಸಲಾಗದ ಹೊಸ ಸಂಕಷ್ಟ ಎದುರಾಗಿದೆ. ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು(Kanhayya Naidu) ಹೇಳಿದ ಆ ಒಂದ ಮಾತು ಕೇಳಿ ಇಡೀ ರೈತ ಸಮೂಹವೇ ನಡುಗಿ ಹೋಗಿದೆ.
ಟಿಬಿ ಡ್ಯಾಂನ 19ನೇ ಗೇಟ್ ಲಿಂಕ್ ಮುರಿದು ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಪೋಲಾಗುತ್ತಿತ್ತು. ಆದರೆ ಡ್ಯಾಮ್ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದಲ್ಲಿ ಮುರಿದಿದ್ದ 19ನೇ ಗೇಟ್‍ನಲ್ಲಿ ಎಲ್ಲಾ 5 ಸ್ಟಾಪ್ ಲಾಗ್ (Stop Log Gate) ಅಳವಡಿಕೆ ಕಾರ್ಯ ಯಶಸ್ವಿಯಾಗಿ ನಡೆದಿತ್ತು. ಈ ಮೂಲಕ ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದ್ದು ತುಂಗಭದ್ರೆಯನ್ನ ಅವಲಂಭಿಸಿರೋ ರೈತರು ನಿಟ್ಟುಸಿರು ಬಿಟ್ಟಿದ್ದರು. ಇದೆಲ್ಲಾ ಆದ ಬಳಿಕ ಮಾತನಾಡಿದ ಕನ್ಹಯ್ಯ ಅವರು ತುಂಗಾ ಭದ್ರಾ ಡ್ಯಾಮ್ ಗೆ ಇನ್ನು ಬರೀ 30 ವರ್ಷ ಆಯಸ್ಸು ಎಂದು ಹೇಳಿದ್ದಾರೆ!!
ಹೌದು, ಬರೋಬ್ಬರಿ 70 ವರ್ಷಗಳ ಹಿಂದೆ ನಿರ್ಮಾಣವಾದ ಮೂರು ರಾಜ್ಯಗಳ ಲಕ್ಷಾಂತರ ಜನರ ಬದುಕಿಗೆ ಆಶ್ರಯವಾಗಿರುವ ತುಂಗಭದ್ರಾ ಜಲಾಶಯದ ಆಯಸ್ಸು ಇನ್ನು ಕೇವಲ ಮೂವತ್ತು ವರ್ಷ ಮಾತ್ರವಂತೆ !! ಇಂತಹದೊಂದು ಆತಂಕಕ್ಕೆ ಕಾರಣವಾಗಿದ್ದು ಡ್ಯಾಂ ಮತ್ತು ಕ್ರಸ್ಟಗೇಟ್ ತಜ್ಞ ಕನ್ನಯ್ಯನಾಯ್ಡು ಹೇಳಿರುವ ಅದೊಂದು ಹೇಳಿಕೆ.
ತುಂಗಭದ್ರಾ ಜಲಾಶಯದ ನಿರ್ಮಾಣ ಕಾರ್ಯ 1949 ರಲ್ಲಿ ಆರಂಭವಾಗಿತ್ತು. 1954 ರಲ್ಲಿ ಡ್ಯಾಂ ಲೋಕಾರ್ಪಣೆಗೊಂಡಿದೆ. ಅಂದ್ರೆ ತುಂಗಭದ್ರಾ ಜಲಾಶಯ ನಿರ್ಮಾಣವಾಗಿ ಈಗ ಬರೋಬ್ಬರಿ 70 ವರ್ಷವಾಗಿದೆ. ಅದರ ಆಯಸ್ಸುನ್ನು ನೋಡಿದಾಗ, ಡ್ಯಾಂ ಗೆ ಇರುವುದು ಇನ್ನು ಕೇವಲ ಮೂವತ್ತು ವರ್ಷ ಆಯಸ್ಸು ಮಾತ್ರ. ಅಂದರೆ ಒಂದು ಕಾಂಕ್ರಿಟ್ ನಿಂದ ಕಟ್ಟಿರುವ ಡ್ಯಾಂ ಆಯುಸ್ಸು ಕೇವಲ ಎಪ್ಪತ್ತೈದು ವರ್ಷ. ಇನ್ನು ತುಂಗಭದ್ರಾ ಜಲಾಶಯವನ್ನು ಕಲ್ಲಿನಿಂದ ಕಟ್ಟಿರುವುದರಿಂದ ಇದರ ಆಯಸ್ಸು 100 ವರ್ಷ ಇದೆ. ನೂರು ವರ್ಷವಾದ ಮೇಲೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕನ್ಹಯ್ಯ ನಾಯ್ಡು ಹೇಳಿದ್ದಾರೆ.
ಸದ್ಯ ಡ್ಯಾಂ ಮೇಲೆ ಅಧಿಕಾರ ಹೊಂದಿರುವ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸರ್ಕಾರಗಳು ಡ್ಯಾಂ ಬಗ್ಗೆ ಇನ್ನಷ್ಟು ಗಮನಹರಿಸಬೇಕಿದೆ. ಡ್ಯಾಂ ನ ಆಯಸ್ಸು ಮುಗಿದ ಮೇಲೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು, ಯಾವ ಕ್ರಮಗಳನ್ನು ಕೈಗೊಂಡರೆ, ರೈತರು, ಜನರಿಗೆ ತೊಂದರೆಯಾಗದಂತೆ ನೀರು ಪೂರೈಕೆ ಮಾಡಬೇಕು ಅನ್ನೋದರ ಬಗ್ಗೆ ಚಿಂತಿಸಿ, ಕ್ರಮ ಕೈಗೊಳ್ಳಬೇಕಾಗಿದೆ.