Second Hand Car: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಹೀಗೆಲ್ಲಾ ಮೋಸ ಮಾಡ್ತಾರೆ, ನಿಮಗಿರಲಿ ಈ ಎಲ್ಲಾ ಎಚ್ಚರ !!

Second Hand Car: ಹೊಸ ಕಾರಿಗಿಂತ ಸೆಕೆಂಡ್ ಹ್ಯಾಂಡ್ ಕಾರು(Second Hand Car) ಖರೀದಿಸಲು ಕೆಲವರು ಆಸಕ್ತಿ ತೋರುತ್ತಾರೆ. ತಮ್ಮ ಬಜೆಟ್‌ಗೆ, ಅನಕೂಲಕ್ಕೆ ತಕ್ಕಂತೆ ಇಂತಹ ಕಾರು ಖರೀದಿಸುವುದೇ ಹೆಚ್ಚು. ಭಾರತದಲ್ಲಿ ಹೊಸ ಕಾರುಗಳ ಖರೀದಿ ಟ್ರೆಂಡ್ ಜೋರಾಗಿದ್ದು, ಹೊಸ ಕಾರುಗಳ ಜೊತೆ ಜೊತೆಗೆ ಬಳಕೆ ಮಾಡಿದ ಕಾರುಗಳಿಗೂ (Used Cars) ಕೂಡಾ ಹೆಚ್ಚಿನ ಬೇಡಿಕೆ ಹರಿದುಬರುತ್ತಿದೆ.

ಈ ಸೆಕೆಂಡ್ ಹ್ಯಾಂಡ್ ಕಾರು ಕೊಳ್ಳವಾಗ ಮಾಲಿಕರಾಗಲಿ, ಬ್ರೋಕರ್ ಗಳಲಾಗಲಿ ನಾನಾ ತರದ ಮೋಸ ಮಾಡುತ್ತಾರೆ. ಹೀಗಾಗಿ ಇಂತಹ ಕಾರನ್ನು ಕೊಳ್ಳುವಾಗ ನೀವು ಒಂದಷ್ಟು ವಿಚಾರಗಳನ್ನು ತಿಳಿದಿರಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಮೋಸ ಹೋಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ನೀವು ಬಳಸಿದ ಅಥವಾ ಸೆಕೆಂಡ್ ಹ್ಯಾಂಡ್ ಕಾರು ಕೊಳ್ಳುವಾಗ ಈ ವಿಚಾರಗಳನ್ನು ತಪ್ಪದೇ ನೆನಪಿಡಿ.
ನೋಡಿದ ತಕ್ಷಣ ಖರೀದಿಯ ನಿರ್ಧಾರ ಬೇಡ:
ಮಾರುಕಟ್ಟೆಯಲ್ಲಿ ಕಾರನ್ನು ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ. ಹೀಗಾಗಿ ತಕ್ಷಣದ ನಿರ್ಧಾರ ಕೈಗೊಳ್ಳಬೇಡಿ. ಸಾಕಷ್ಟು ಸಮಯ ತೆಗೆದುಕೊಂಡ ನಂತರ ಕಾರಿನ ಬಗ್ಗೆ ಅಂತಿಮಗೊಳಿಸುವುದು ಯಾವಾಗಲೂ ಉತ್ತಮ. ಕಾರುಗಳು ಉತ್ತಮ ಸ್ಥಿತಿಯಲ್ಲಿ ಕಾಣಿಸಿಕೊಳ್ಳಬಹುದು, ಆದರೂ ವಿವಿಧ ಹಂತಗಳಲ್ಲಿ ಕಾರನ್ನ ಪರಿಶೀಲಿಸಬೇಕಾಗುತ್ತದೆ.
ಮೊದಲೇ ಬಜೆಟ್ ನಿರ್ಧರಿಸಿ:
ಮುಖ್ಯವಾಗಿ ನೀವು ಯಾವ ಬಜೆಟ್‌ನಲ್ಲಿ ಕಾರು ಖರೀದಿ ಮಾಡಬೇಕು ಎನ್ನುವುದನ್ನು ನಿರ್ಣಯಿಸಿಕೊಳ್ಳಿ. ಬಜೆಟ್‌ಗೆ ಮೀರಿದ ಕಾರುಗಳನ್ನು ಖರೀದಿಸುವ ಉತ್ಸಾಹ ಬೇಡ, ಕೊಳ್ಳುವಾಗ ಕೆಲವು ಸಾವಿರ ವ್ಯತ್ಯಾಸ ಎನಿಸಬಹುದು ಆದರೆ ಮುಂದೆ ಹೆಚ್ಚಿನ ಹೊರೆಗೆ ಕಾರಣವಾಗುತ್ತವೆ ಎನ್ನುವುದನ್ನು ಮರೆಯಬೇಡಿ.
ನಂಬಿಕಸ್ಥ ಮೆಕ್ಯಾನಿಕ್ ಸಲಹೆ:
ನೀವು ವರ್ಷಗಳಿಂದ ಕಾರುಗಳನ್ನು ಬಳಸುತ್ತಿದ್ದರೂ ಸಹ, ನೀವು ಖರೀದಿಸಬಹುದಾದ ಯಾವುದೇ ಬಳಸಿದ ಕಾರನ್ನು ಪರಿಣಿತ ಮೆಕ್ಯಾನಿಕ್ ಮೂಲಕ ಪರಿಶೀಲಿಸುವುದು ಒಳ್ಳೆಯದು. ಮೆಕ್ಯಾನಿಕ್ ಸಣ್ಣ ಸಮಸ್ಯೆಗಳನ್ನು ಕೂಡ ಗುರುತಿಸುತ್ತಾರೆ. ಯಾವುದೇ ರಿಪೇರಿ ಕೆಲಸಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂಬ ಮಾಹಿತಿ ಕೂಡ ನೀಡುತ್ತಾರೆ.
ಕಾರಿನ ಇಂಜಿನ್ ಸ್ಥಿತಿಗತಿ, ಯಾವುದೇ ಅಪಘಾತಗಳು ಅಥವಾ ರಿಪೇರಿ ಸೇರಿದಂತೆ ಕಾರಿನ ಇತಿಹಾಸವನ್ನು ಪರಿಶೀಲಿಸುವುದು ಸಹ ಮುಖ್ಯವಾಗಿದೆ, ಏಕೆಂದರೆ ಇದು ಕಾರಿನ ಮೌಲ್ಯದ ಮೇಲೆ ಪರಿಣಾಮ ಬೀರಬಹುದು.
ಟೆಸ್ಟ್ ಡ್ರೈವ್ ಮಾಡಬೇಕು:
ರಸ್ತೆಯಲ್ಲಿ ಕಾರು ನಿಮ್ಮ ಆದ್ಯತೆಗಳಿಗೆ ಸರಿಹೊಂದುತ್ತದೆಯೇ ಎಂದು ಸಂಪೂರ್ಣವಾಗಿ ಅರಿತುಕೊಳ್ಳಲು ಟೆಸ್ಟ್ ಡ್ರೈವ್ ಮಾಡಬೇಕು. ಕಾರು ಹೊಸದಾಗಿರಲಿ ಅಥವಾ ಹಳೆಯದಿರಲಿ, ಟೆಸ್ಟ್ ಡ್ರೈವ್ ವಿವಿಧ ಘಟಕಗಳ ಕಾರ್ಯಕ್ಷಮತೆ ಮತ್ತು ಚಾಲನಾ ಕಾರ್ಯಕ್ಷಮತೆಯ ಬಗ್ಗೆ ನಿಖರವಾದ ತಿಳಿಯಲು ನೆರವಾಗುತ್ತದೆ. ಹಲವಾರು ಬಾರಿ ಟೆಸ್ಟ್ ಡೈವ್ ಅಗತ್ಯವಾಗಿರುತ್ತದೆ. ಪ್ರಮುಖವಾಗಿ ಹಳೆಯ ಕಾರು ಖರೀದಿಸುವ ಮುನ್ನ ನಿಮಗೆ ಕಾರಿನ ಬಗ್ಗೆ ಗೊತ್ತಿಲ್ಲದಿದ್ದರೆ ಗ್ಯಾರೇಜ್ ತಜ್ಞರ ಸಲಹೆ ಪಡೆಯಿರಿ.
ಈ ವಿಚಾರದಲ್ಲಿ ಮೋಸ ಹೋಗಬೇಡಿ:
ಹಗಲು ಹೊತ್ತಿನಲ್ಲಿ ಬಳಸಿದ ಕಾರನ್ನು ಪರೀಕ್ಷಿಸುವುದು ಗೀರುಗಳು, ಸಣ್ಣ ಡೆಂಟ್‌ಗಳು ಅಥವಾ ಪೇಂಟ್ ಅಪೂರ್ಣತೆಗಳಂತಹ ಯಾವುದೇ ದೋಷಗಳನ್ನು ಕಂಡು ಹಿಡಿಯಲು ಉತ್ತಮ ಮಾರ್ಗವಾಗಿದೆ. ಸೆಕೆಂಡ್‌ಹ್ಯಾಂಡ್ ಕಾರ್ ಶೋರೂಮ್‌ಗಳು ಕೆಲವೊಮ್ಮೆ ತಮ್ಮ ಕಾರನ್ನು ಪ್ರಕಾಶಮಾನ ದೀಪಗಳ ಅಡಿಯಲ್ಲಿ ಪ್ರದರ್ಶಿಸುತ್ತವೆ, ಅದು ಕಾರಿನ ಬಾಹ್ಯ ಹಾನಿಯನ್ನು ಮರೆಮಾಚುತ್ತದೆ. ಈ ಬಗ್ಗೆ ಎಚ್ಚರಿಕೆ ಇರಲಿ. ಎರಡು ವರ್ಷ ಅಥವಾ ಅದಕ್ಕಿಂತ ಕಡಿಮೆ ಹಳೆಯದಾದ ಮತ್ತು 20,000 ಕಿ.ಮೀಗಿಂತ ಕಡಿಮೆ ಓಡಿದ ಕಾರು ಉತ್ತಮ ಆಯ್ಕೆ. ಆದರೂ ನಿಮ್ಮ ಬಜೆಟ್‌ಗೆ ತಕ್ಕಂತೆ ಹಳೆ ಕಾರು ಆಯ್ಕೆ ಮಾಡಿ, ಅದರ ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಲಭ್ಯವಿದೆಯಾ ಎನ್ನುವ ಬಗ್ಗೆ ತಿಳಿದುಕೊಳ್ಳಿ.
ಸಂಚಾರಿ ನಿಯಮ ಉಲ್ಲಂಘನೆಯ ದಂಡಗಳನ್ನು ಪರಿಶೀಲಿಸಿ:
ಯಾವುದೇ ರೀತಿಯ ಬಳಸಿದ ವಾಹನಗಳನ್ನು ಖರೀದಿಸುವಾಗ ಪ್ರಾಥಮಿಕವಾಗಿ ಪರಿಶೀಲನೆ ಮಾಡಬೇಕಾದ ಅಂಶವೆಂದರೆ ನೀವು ಆಯ್ಕೆ ಮಾಡುತ್ತಿರುವ ವಾಹನವು ಟ್ರಾಫಿಕ್ ಉಲ್ಲಂಘನೆಗಾಗಿ ಯಾವುದೇ ರೀತಿಯ ಬಾಕಿ ದಂಡವನ್ನು ಹೊಂದಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಬಾಕಿ ಉಳಿದಿರುವ ದಂಡಗಳಿದ್ದರೆ ಸಂಪೂರ್ಣವಾಗಿ ದಂಡಪಾವತಿಗೆ ಸೂಚಿಸಬೇಕಾಗುತ್ತದೆ. ಒಂದು ವೇಳೆ ದಂಡದ ಮೊತ್ತ ಬಾಕಿಯಿದ್ದಲ್ಲಿ ವಾಹನದ ನೋಂದಣಿಯ ಪ್ರಕ್ರಿಯೆಯಲ್ಲಿ ವರ್ಗಾಯಿಸುವುದು ಸಮಸ್ಯೆಯಾಗಬಹುದು. ಜೊತೆಗೆ ಮೋಟಾರು ವಾಹನಗಳ ಕಾಯಿದೆಯ ಪ್ರಕಾರ ಯಾವುದೇ ಬಳಸಿದ ವಾಹದ ಮಾಲೀಕತ್ವ ವರ್ಗಾವಣೆ ಮತ್ತು ಎಫ್‌ಸಿ ನವೀಕರಣಕ್ಕಾಗಿ ಸಂಚಾರಿ ನಿಯಮ ಉಲ್ಲಂಘನೆಗಳ ದಂಡವನ್ನು ಹೊಂದಿರಬಾರದು ಎನ್ನುವ ನಿಯಮವಿದೆ.
ಕಳ್ಳತನದ ವಾಹನಗಳ ಬಗ್ಗೆ ಎಚ್ಚರವಿರಲಿ:
ಬಳಸಿದ ಕಾರುಗಳನ್ನು ಖರೀದಿಸುವಾಗ ಹೆಚ್ಚಿನ ಮಾಲೀಕರು ಕಡಿಮೆ ಬೆಲೆಯಲ್ಲಿ ಉತ್ತಮ ವಾಹನಗಳನ್ನು ಖರೀದಿ ಬಯಸುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವು ಅನಧಿಕೃತ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುವ ದಲ್ಲಾಳಿಗಳು ಮಾರುಕಟ್ಟೆಗಳಿಂತಲೂ ಕಡಿಮೆ ಬೆಲೆಯ ಆಮೀಷದೊಂದಿಗೆ ಕದ್ದ ವಾಹನಗಳನ್ನು ಮಾರಾಟ ಮಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ನೀವು ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಅಧಿಕೃತವಾಗಿ ನೊಂದಣಿಯಾಗಿರುವ ಮಾರಾಟಗಾರರ ಬಳಿಯಲ್ಲಿಯೇ ಖರೀದಿ ಮಾಡಿ. ಇದರಿಂದ ನಿಮಗೆ ಕೆಲವು ಹೆಚ್ಚುವರಿ ಶುಲ್ಕಗಳ ಹೊರತಾಗಿ ಮೋಸದ ವ್ಯವಹಾರಗಳನ್ನು ತಪ್ಪಿಸಬಹುದಾಗಿದೆ. ಒಂದು ವೇಳೆ ಅಧಿಕೃತ ಮಾರಾಟಗಾರನಿಂದಲೂ ಮೋಸವಾಗಿದ್ದರೆ ನೀವು ಅವರ ವಿರುದ್ದ ಸುಲಭವಾಗಿ ಕಾನೂನು ಹೋರಾಟ ಮಾಡಬಹುದಾಗಿದೆ.
ಈ ದಾಖಲೆಗಳನ್ನು ತಪ್ಪದೇ ಪರಿಶೀಲಿಸಿ:
ಭಾರತದಲ್ಲಿ ಬಳಸಿದ ಕಾರನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ಕೆಲವು ದಾಖಲೆಗಳಿವು.
ನೋಂದಣಿ ಪ್ರಮಾಣಪತ್ರ (RC)
ಕಾರು ಖರೀದಿಯ ಸರಕುಪಟ್ಟಿ
ವಿಮಾ ದಾಖಲೆಗಳು
ಸೇವಾ ದಾಖಲೆಗಳ ಪುಸ್ತಕಆರ್ ಟಿಒ (RTO) ಫಾರ್ಮ್‌ಗಳು: 28,29 ಮತ್ತು 30 32, ಮತ್ತು 35
ಎನ್‌ಒಸಿ ಅಥವಾ ಕ್ಲಿಯರೆನ್ಸ್ ಪ್ರಮಾಣಪತ್ರ
ರಸ್ತೆ ತೆರಿಗೆ
ರಶೀದಿದ್ವಿ-ಇಂಧನ ಕಿಟ್‌ಗಳಿಗೆ ಪ್ರಮಾಣೀಕರಣ
ಹೊಗೆ ಮಾಲಿನ್ಯ ಪ್ರಮಾಣಪತ್ರ
ಮಾಲೀಕರ ಕೈಪಿಡಿ