Punishment: ಶಿಕ್ಷಣ ನೀಡುವ ಶಿಕ್ಷಕನಿಂದಲೇ ವಿದ್ಯಾರ್ಥಿಗೆ ಶಿಕ್ಷೆ: ಅಮಾನುಷ ಹಲ್ಲೆ ಆರೋಪ
Punishment: ರಾಮನಗರ ಜಿಲ್ಲೆಯ ಕನಕಪುರ ನಗರದ ಐಪಿಪಿ ಆಸ್ಪತ್ರೆ ಸಮೀಪದ ಶ್ರೀ ನೀಲಕಂಠೇಶ್ವರ ಅನುದಾನಿತ ಶಾಲಾ(School) ಶಿಕ್ಷಕನೊಬ್ಬ(Teacher) 2ನೇ ತರಗತಿಯ 7 ವರ್ಷದ ಬಾಲಕನ(Student) ಮೇಲೆ ಅಮಾನುಷವಾಗಿ ಹಲ್ಲೆ(assaulted) ನಡೆಸಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನೀಲಕಂಠೇಶ್ವರ ಶಾಲೆಯ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಶ್ರವಣ ಎಂಬ ಶಿಕ್ಷಕ ಬಾಸುಂಡೆ ಬರುವಂತೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಪ್ರಕರಣ(Case) ದಾಖಲಾಗಿದೆ. ಆ.14ರಂದು ಶಾಲೆಯಲ್ಲಿ ಶಾಲಾ ಶಿಕ್ಷಕ ಕ್ಷುಲ್ಲಕ ವಿಷಯಕ್ಕೆ ಹಲ್ಲೆ ಮಾಡಿದ್ದಾರೆ. 15ನೇ ತಾರೀಖಿನಿಂದ ಸರ್ಕಾರಿ ರಜೆಗಳಿದ್ದ ಕಾರಣ ತಡವಾಗಿ ಬಂದು ಠಾಣೆಗೆ ದೂರು ನೀಡಿರುವುದಾಗಿ ದೂರಿನಲ್ಲಿ ಬಾಲಕನ ತಾಯಿ ತಿಳಿಸಿದ್ದಾರೆ. ಆ. 20 ರಂದು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಸ್ವರೂಪರವರು ತನಿಖೆಯ ವೇಳೆ ಶಾಲಾ ಆಡಳಿತ ಮಂಡಳಿ ಈ ಆರೋಪವನ್ನು ನಿರಾಕರಿಸಿದ್ದಾರೆ. ನೀಲಕಂಠೇಶ್ವರ ಶಾಲೆಯಲ್ಲಿ ಬಾಲಕನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಬಾಲಕ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿರುವುದರಿಂದ ಮತ್ತಷ್ಟು ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಮಿಥುನ್ ಶಿಲ್ಪಿ ತಿಳಿಸಿದ್ದಾರೆ.
ಬಾಲಕನ ಮೇಲೆ ಹಲ್ಲೆ ಪ್ರಕರಣ ಅಮಾನವೀಯ ಕೃತ್ಯವಾಗಿದೆ. ಶಿಕ್ಷಕರು ಮಾನವೀಯತೆ ಉಳ್ಳವರಾಗಿರಬೇಕೇ ವಿನಃ ರಾಕ್ಷಸರಂತೆ ವರ್ತಿಸಬಾರದು. ಮಕ್ಕಳ ಹಿತದೃಷ್ಟಿಯಿಂದ ತಪ್ಪಾಗಿದ್ದರೆ ಶಿಕ್ಷೆಯಾಗಬೇಕು. ಶಾಲೆಯಲ್ಲಿ ಸಿಸಿಟಿವಿ ಆಗಲೀ, ಯಾವುದೇ ಗುರುತರದ ಸಾಕ್ಷಿಗಳು ಇಲ್ಲದ ಕಾರಣ ಶಿಕ್ಷಕ ನುಣುಚಿಕೊಳ್ಳಬಹುದು. ಸರಿಯಾದ ತನಿಖೆ ಮಾಡಿ ಕ್ರಮ ಜರುಗಿಸಬೇಕು ಎಂದು ಕೆಆರ್ಎಸ್ ಪಕ್ಷದ ತಾಲೂಕು ಅಧ್ಯಕ್ಷ ಪ್ರಶಾಂತ್ ಆಗ್ರಹಿಸಿದ್ದಾರೆ.
qgNiYFHyZBC