Currency: ಭಾರತದ 1 ರೂಪಾಯಿ ಈ ದೇಶದಲ್ಲಿ 500 ರೂ ಗೆ ಸಮ !! ನೀವೇನಾದ್ರೂ 1 ಲಕ್ಷ ರೂ ತಗೊಂಡು ಇಲ್ಲಿಗೆ ಹೋದ್ರೆ ಆಗರ್ಭ ಶ್ರೀಮಂತರಾಗೋದು ಪಕ್ಕಾ !!

Currency: ಭಾರತೀಯ ರೂಪಾಯಿಯ(Indian Rupee) ಮೌಲ್ಯ ಡಾಲರ್(Dollar) ಎದುರು ಕುಸಿಯುವುದು, ಕೊಂಚ ಮಟ್ಟಿಗೆ ಏರುವುದು ನಡೆಯುತ್ತಲೇ ಇರುತ್ತದೆ. ಆದರೆ ಡಾಲರ್ ಬೆಲೆಯನ್ನೇ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯನ್ನು ಪಡೆಯುವುದು ಸಾಧ್ಯವೇ ಇಲ್ಲವೇನೋ ಬಿಡಿ. ಇದು ಕಡಿಮೆ ಇರಬಹುದು. ಆದರೆ ಸಂತಸದ ವಿಚಾರ ಅಂದ್ರೆ ವಿಶ್ವದಲ್ಲಿರುವ ಎಷ್ಟೋ ದೇಶಗಳ ಹಣದ ಎದುರು ರೂಪಾಯಿ ಮೌಲ್ಯ ಹೆಚ್ಚಿದೆ. ಅದಲ್ಲೂ ನೀವು ಈ ಒಂದು ದೇಶಕ್ಕೆ ಭಾರತದ ಲಕ್ಷ ರೂಪಾಯಿ ಕೊಂಡು ಹೋದರೆ ಮರಳುವಾಗ ಕೋಟ್ಯಾದಿಪತಿಗಳಾಗಬಹುದು.

ನೀವು ವಿದೇಶ ಪ್ರವಾಸ ಮಾಡುವಾಗ ಭಾರತೀಯ ಕರೆನ್ಸಿಗೆ ಬದಲಾಗಿ ಆ ದೇಶದ ಕರೆನ್ಸಿಯನ್ನು ಬಳಸಬೇಕಾಗುತ್ತದೆ. ಅದರಲ್ಲೂ ನೀವು ಭಾರತೀಯ ಕರೆನ್ಸಿಗಿಂತ ತನ್ನ ಹಣದ ಮೌಲ್ಯ ಅಗ್ಗವಾಗಿರುವ ದೇಶಕ್ಕೆ ಪ್ರಯಾಣಿಸುವಾಗ, ಭಾರತೀಯರು ಕರೆನ್ಸಿಯನ್ನು ಹೆಚ್ಚಿನ ಮುಖಬೆಲೆಗೆ ವಿನಿಮಯ ಮಾಡಿಕೊಳ್ಳಬಹುದು. ಇದರಿಂದ ನೀವು ಒಮ್ಮೆಲೇ ಕೋಟ್ಯಾದಿಪತಿಗಳಾಗಬಹುದು.
ಹೌದು, ನಮ್ಮ ರೂಪಾಯಿ ಮೌಲ್ಯ ಹೆಚ್ಚಾಗುವ ದೇಶವೆಂದರೆ ಇರಾನ್(Iran). ಭಾರತೀಯ ಕರೆನ್ಸಿಗೆ ಹೋಲಿಸಿದರೆ ಪಶ್ಚಿಮ ಏಷ್ಯಾದ ಇರಾನ್ ನ ಕರೆನ್ಸಿ ತುಂಬಾ ಕಡಿಮೆ. 1 ಭಾರತೀಯ ರೂಪಾಯಿ 501 ಇರಾನಿನ ರಿಯಾಲ್ ಗಳಿಗೆ ಸಮ. ಇರಾನಿನ ರಿಯಾಲ್ (IRR) ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ನ ರಾಷ್ಟ್ರೀಯ ಕರೆನ್ಸಿಯಾಗಿದೆ. ಇದನ್ನು 100 ದಿನಾರ್ ಗಳಾಗಿ (ಪೈಸೆ) ವಿಂಗಡಿಸಲಾಗಿದೆ, ಆದರೆ ರಿಯಾಲ್ ನ ಕಡಿಮೆ ಮೌಲ್ಯದಿಂದಾಗಿ ದಿನಾರ್ ಅನ್ನು ಪ್ರಾಯೋಗಿಕವಾಗಿ ಬಳಸಲಾಗುವುದಿಲ್ಲ. ಹೀಗಾಗಿ ನೀವೇನಾದ್ರೂ ಇಲ್ಲಿಗೆ 1 ಲಕ್ಷ ತಗೊಂಡು ಹೋದ್ರೆ ಆಗರ್ಭ ಶ್ರೀಮಂತರಾಗುತ್ತೀರಿ.
ಇತಿಹಾಸದಲ್ಲಿ ಇರಾನ್ ಶ್ರೀಮಂತ ದೇಶವಾಗಿತ್ತು, ಟೆಹ್ರಾನ್ ಈ ದೇಶದ ರಾಜಧಾನಿ. ಈ ಮಧ್ಯಪ್ರಾಚ್ಯ ದೇಶವು ಇತಿಹಾಸದಲ್ಲಿ ಶ್ರೀಮಂತ ದೇಶಗಳಲ್ಲಿ ಒಂದಾಗಿತ್ತು. ಆದರೆ ಈಗ ಯುದ್ಧ-ದಾಳಿಗಳಿಂದ ಸುದ್ದಿಯಲ್ಲಿರುತ್ತದೆ. ಪ್ರಸ್ತುತ, ಇರಾನಿನ ರಿಯಾಲ್ ಅನ್ನು ವಿಶ್ವದ ಅತ್ಯಂತ ಕಡಿಮೆ ಮೌಲ್ಯಯುತ ಕರೆನ್ಸಿ ಎಂದು ಪರಿಗಣಿಸಲಾಗಿದೆ. ಇದು ದೇಶದ ರಾಜಕೀಯ ಅಶಾಂತಿಯಿಂದ ಉಂಟಾಗಿದೆ.