Koppala: ರಾಜ್ಯದಲ್ಲೊಂದು ವಿಚಿತ್ರ ರಾಜಕೀಯ ಬೆಳವಣಿಗೆ- ಕಾಂಗ್ರೆಸ್‌ ಬೆಂಬಲದಿಂದ ನಗರಸಭೆ ಉಪಾಧ್ಯಕ್ಷೆಯಾದ ಬಿಜೆಪಿ ಸದಸ್ಯೆ !!

Koppala: ರಾಜ್ಯದಲ್ಲೊಂದು ವಿಚಿತ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಕಾಂಗ್ರೆಸ್‌ ಬೆಂಬಲದಿಂದ ಉಪಾಧ್ಯಕ್ಷೆಯಾಗಿ ಬಿಜೆಪಿ ಸದಸ್ಯೆ ಆಯ್ಕೆಯಾಗಿರುವ ಪ್ರಸಂಗ ಕೊಪ್ಪಳ ನಗರಸಭೆಯಲ್ಲಿ(Koppala Municipality) ನಡೆದಿದೆ.

ಹೌದು, ಬಿಜೆಪಿ ಹಾಗೂ ಕಾಂಗ್ರೆಸ್‌(BJP-Congress) ಎರಡು ಪಕ್ಕಾ ರಾಜಕೀಯವಾಗಿ ಬದ್ಧ ವೈರಿಗಳು. ಹಾವು ಮುಂಗಸಿ ಎಂದರೂ ತಪ್ಪಾಗಲಾರದು. ಒಂದಕ್ಕೊಂದು ಬೆಂಬಲ ನೀಡುತ್ತವೆ, ಒಂದರ ನಡೆಯನ್ನು ಒಂದು ಪ್ರೋತ್ಸಾಹಿಸುತ್ತವೆ ಎಂಬುದಂತೂ ಕನಸಿನ ಮಾತು. ಕನಸಲ್ಲೂ ಬರಲು ಸಾಧ್ಯವಿಲ್ಲ ಬಿಡಿ. ಅದರಲ್ಲೂ ಈ ಎರಡು ಪಕ್ಷದ ನಾಯಕರು ರಾಜಕೀಯ ಎದುರಾಳಿಗಳಾಗಿ ನಿತ್ಯ ಜಿದ್ದಾಜಿದ್ದಿ ನಡೆಸುತ್ತಿದ್ದಾರೆ. ಆದರೆ ಈ ನಡುವೆ ಅಚ್ಚರಿ ಎಂಬಂತೆ ಕೊಪ್ಪಳ ನಗರಸಭೆಯಲ್ಲಿ ಕಾಂಗ್ರೆಸ್‌ ಬೆಂಬಲದೊಂದಿಗೆ ಬಿಜೆಪಿ ಸದಸ್ಯೆ ಅಶ್ವಿನಿ ಗದಗಿನಮಠ(Ashwini Gadaginamuta) ಅವರು ಬುಧವಾರ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಕೊಪ್ಪಳ ನಗರಸಭೆಯಲ್ಲಿ ಒಟ್ಟು 31 ಜನ ಸದಸ್ಯರಿದ್ದು, 15 ಕಾಂಗ್ರೆಸ್, ಒಂಬತ್ತು ಬಿಜೆಪಿ, ಮೂರು ಪಕ್ಷೇತರ ಮತ್ತು ಇಬ್ಬರು ಜೆಡಿಎಸ್‌ ಸದಸ್ಯರಿದ್ದಾರೆ. ಇಬ್ಬರು ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣಾ ಪೂರ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಮಾಜಿ ಸಂಸದ ಸಂಗಣ್ಣ ಕರಡಿ ಅವರ ಜೊತೆ ಅಶ್ವಿನಿ ಗುರುತಿಸಿಕೊಂಡಿದ್ದಾರೆ. ಇದೇ ಇಲ್ಲಿ ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಆಗಿದೆ. ಅಲ್ಲದೆ ಕೆಲವು ಪೂರ್ವ ನಿಗದಿ ನಿರ್ಧಾರಗಳೂ ಈ ವಿಚಿತ್ರ ಹಾಗೂ ವಿಶೇಷ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಯಸ್, ಬಿಜೆಪಿ ಮಾಜಿ ಸಂಸದ ಸಂಗಣ್ಣ ಕರಡಿ ಅವರು ಕಾಂಗ್ರೆಸ್ ನಲ್ಲಿರುವ ಕಾರಣ ಅಧ್ಯಕ್ವ ಸ್ಥಾನ ಸ್ಥಳೀಯ ಶಾಸಕ ಕಾಂಗ್ರೆಸ್‌ ರಾಘವೇಂದ್ರ ಹಿಟ್ನಾಳ ಆಪ್ತ ಅಮ್ಜದ್‌ ಪಟೇಲ್‌ ಪಾಲಾಗಿದೆ. ಅಂತೆಯೇ ಉಪಾಧ್ಯಕ್ಷ ಸ್ಥಾನ ಅಶ್ವಿನಿ ಅವರಿಗೆ ಮೀಸಲು ಎಂದು ಮುಂಚಿತವಾಗಿಯೇ ನಿರ್ಧರಿತವಾಗಿದ್ದ ಕಾರಣ ಅವರು ಬಿಜೆಪಿಯಲ್ಲಿದ್ದರೂ ಕಾಂಗ್ರೆಸ್ ಬೆಂಬಲ ನೀಡಿದೆ.

ಅಂದಹಾಗೆ ಈ ಎಲ್ಲ ಬೆಳವಣಿಗೆ ಗಮನಿಸಿಯೇ ಬಿಜೆಪಿ ತನ್ನ ಸದಸ್ಯರಿಗೆ ವಿಪ್‌ ಜಾರಿ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಯಾವುದನ್ನೂ ಲೆಕ್ಕಿಸದೇ ಅಶ್ವಿನಿ ಹಾಗೂ ಬಿಜೆಪಿಯ ಇನ್ನಿಬ್ಬ ಸದಸ್ಯರು ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಹೊಂದಿರುವ ಜೆಡಿಎಸ್‌ ಕೂಡ ಇಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ ಸದಸ್ಯನಿಗೆ ಬೆಂಬಲ ನೀಡಿದೆ. ಒಟ್ಟು 29 ಸದಸ್ಯರು ಮತ ಚಲಾಯಿಸಿದ್ದು ಇದರಲ್ಲಿ ಅಶ್ಚಿನಿ ಸದಸ್ಯರ 23, ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಸಂಸದ ರಾಜಶೇಖರ ಹಿಟ್ನಾಳ ಅವರ ತಲಾ ಒಂದು ಮತ ಪಡೆದುಕೊಂಡು ಉಪಾಧ್ಯಕ್ಷ ಗಾದಿಗೆ ಏರಿದ್ದಾರೆ.

1 Comment
  1. startup talky says

    startup talky This was beautiful Admin. Thank you for your reflections.

Leave A Reply

Your email address will not be published.