Home News Fall of state govt: ರಾಜ್ಯದಲ್ಲಿ ಸಿದ್ದು ಸರ್ಕಾರ ಬಿದ್ದರೆ, ಇನ್ನೊಂದು ರಾಜ್ಯದಲ್ಲೂ ಸರ್ಕಾರ ಪತನ!...

Fall of state govt: ರಾಜ್ಯದಲ್ಲಿ ಸಿದ್ದು ಸರ್ಕಾರ ಬಿದ್ದರೆ, ಇನ್ನೊಂದು ರಾಜ್ಯದಲ್ಲೂ ಸರ್ಕಾರ ಪತನ! ಯಾವ ರಾಜ್ಯ..?

Fall of state govt

Hindu neighbor gifts plot of land

Hindu neighbour gifts land to Muslim journalist

Fall of state govt: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಆಪ್ತರೂ ಆಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ತೆಲಂಗಾಣದಲ್ಲೂ ನಮ್ಮ ಪಕ್ಷ ಅಧಿಕಾರ ಕಳೆದುಕೊಳ್ಳುತ್ತದೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ. ಇದನ್ನು ಗಮನದಲ್ಲಿ ಇರಿಸಿಕೊಂಡೇ ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದೆ. ಹಾಗೂ ಬಿಜೆಪಿಯಿಂದ ಎರಡು ಸರ್ಕಾರಗಳನ್ನು ಹೇಗಾದರು ಉಳಿಸಿಕೊಳ್ಳಬೇಕು ಎಂದು ಗಟ್ಟಿಯಾಗಿ ನಿಂತಿದೆ.

ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಮುಡಾ ಹಗರಣ ಇಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಕುಗ್ಗಿಸಲು ಹೊರಟಿದ್ದಾರೆ. ಸಿದ್ದರಾಮಯ್ಯ ಅವರನ್ನು ಕುಗ್ಗಿಸಿದರೆ ಸರ್ಕಾರವನ್ನು ಬೀಳಿಸಬಹುದೆಂಬ ಲೆಕ್ಕಾಚಾರ ಅವರದ್ದಾಗಿದೆ ಎಂದು ಆರೋಪಿಸಿದರು. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡಿರುವ ಪಕ್ಷದ ವರಿಷ್ಠರು ರಾಜಕೀಯವಾಗಿ ತೀರ್ಮಾನ ಕೈಗೊಂಡು ಸಿದ್ದರಾಮಯ್ಯ ಬೆನ್ನಿಗೆ ಬಲವಾಗಿ ನಿಂತಿದ್ದಾರೆ. ಆದ್ದರಿಂದ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ, ಬೇಕಿದ್ದರೆ ತನಿಖೆ ಆಗಲಿ, ಬಿಜೆಪಿಯ ತೆರೆಮರೆಯ ಆಟ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದರು.

ರಾಜ್ಯಪಾಲರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಆಟದಿಂದ ನಾವು ಮತ್ತಷ್ಟು ಗಟ್ಟಿಯಾಗಿ, ಒಂದಾಗಿ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದೇವೆ. ಸಿದ್ದರಾಮಯ್ಯ ಅವರನ್ನೂ ಮುಂದುವರೆಸಿಕೊಂಡು, ನಮ್ಮ ಸರ್ಕಾರವನ್ನು ಉಳಿಸಿಕೊಳ್ಳುತ್ತೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.