Islam Religion: ಇಡೀ ಪ್ರಪಂಚದಲ್ಲೇ ಅತೀ ವೇಗವಾಗಿ ಬೆಳೆಯುತ್ತಿದೆ ಇಸ್ಲಾಂ !! 2070ರ ವೇಳೆಗೆ ಎಷ್ಟಾಗುತ್ತೆ ಮುಸ್ಲಿಂ ಜನಸಂಖ್ಯೆ?

Islam Religion : ಜಗತ್ತಿನಲ್ಲಿ ಎರಡನೇ ದೊಡ್ಡ ಧರ್ಮವಾಗಿರುವ ಇಸ್ಲಾಂ (Islam Religion) ಇಂದು ಅತ್ಯಂತ ವೇಗವಾಗಿ ಹರಡುತ್ತಿರುವ ಧರ್ಮ ಅನ್ನೋದು ಅನೇಕರಿಗೆ ಗೊತ್ತಿಲ್ಲ. ಇಸ್ಲಾಂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದರ ಜೊತೆಗೆ ಮುಸ್ಲಿಮರ ಜನಸಂಖ್ಯೆ (Muslim Population) ಸಹ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ. ಈ ಬಗ್ಗೆ ಪ್ಯೂ ರಿಸರ್ಚ್ 2015ರ ಅಂಕಿ ಅಂಶಗಳನ್ನು ಪ್ರಸ್ತುತಪಡಿಸಿದ್ದು, ಆ ಪ್ರಕಾರ (World Muslim Population) ವಿಶ್ವದ ಒಟ್ಟು ಮುಸ್ಲಿಮರ ಸಂಖ್ಯೆ 1.8 ಶತಕೋಟಿ ದಾಟಿದೆ ಎಂದು ತಿಳಿದುಬಂದಿದೆ.

ಹೌದು, 1.8 ಶತಕೋಟಿ(ಮುಸ್ಲಿಂ ಜನಸಂಖ್ಯೆಯು 100 ಕೋಟಿ 80 ಲಕ್ಷ ) ಸಂಖ್ಯೆಯು ಪ್ರಪಂಚದ ಒಟ್ಟು ಜನಸಂಖ್ಯೆಯ ಸರಿಸುಮಾರು 24% ಆಗಿದೆ. ಆ ಮೂಲಕ ಇಸ್ಲಾಂ ವಿಶ್ವದ ಎರಡನೇ ಅತಿ ದೊಡ್ಡ ಧರ್ಮವಾಗಿದೆ. ಕ್ರಿಶ್ಚಿಯನ್ ಧರ್ಮವು ಮೊದಲ ಸ್ಥಾನದಲ್ಲಿದ್ದರೆ, ಹಿಂದೂ ಧರ್ಮವನ್ನು ಅನುಸರಿಸುವವರ ಸಂಖ್ಯೆ ಮೂರನೇ ಸ್ಥಾನದಲ್ಲಿದೆ. ಆದರೆ ಮುಸ್ಲಿಂ ಜನಸಂಖ್ಯೆಯು ಹೆಚ್ಚುತ್ತಿರುವ ವೇಗವನ್ನು ಗಮನಿಸಿದರೆ 2070ರ ವೇಳೆಗೆ ಇಸ್ಲಾಂ ಅನ್ನು ಅನುಸರಿಸುತ್ತಿರುವವರ ಸಂಖ್ಯೆಯು ವಿಶ್ವದಲ್ಲೇ ಅತಿ ಹೆಚ್ಚಾಗಲಿದ್ದು, ಆ ಮೂಲಕ ಜಗತ್ತಿನ ಅತೀ ದೊಡ್ಡ ಧರ್ಮವಾದ ಕ್ರಿಶ್ಚಿಯನ್ ಧರ್ಮವನ್ನು ಹಿಂದಿಕ್ಕಲಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಈ ಶತಮಾನದ ಅಂತ್ಯದ ವೇಳೆಗೆ ಇಸ್ಲಾಂ ಧರ್ಮವನ್ನು ಅನುಸರಿಸುವವರ ಸಂಖ್ಯೆಯು ತುಂಬಾ ಹೆಚ್ಚಾಗುತ್ತದೆ, ಮತ್ತು ಮುಸ್ಲಿಮ್ ಜನಸಂಖ್ಯೆಯು ವಿಶ್ವದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಹಿಂದಿಕ್ಕಲಿದೆ ಎಂದು ಪ್ಯೂ ರಿಸರ್ಚ್ ಹೇಳಿದೆ. ಪ್ಯೂ ರಿಸರ್ಚ್ 2015 ಮತ್ತು 2060 ರ ನಡುವೆ ಸಂಭವಿಸುವ ಬದಲಾವಣೆಗಳ ಬಗ್ಗೆ ಅಂದಾಜನ್ನು ಪ್ರಸ್ತುತ ಪಡಿಸಿದೆ. ಇದರ ಪ್ರಕಾರ 2060ರ ವೇಳೆಗೆ ಮುಸ್ಲಿಮರ ಜನಸಂಖ್ಯೆ ಶೇ.70ರಷ್ಟು ಹೆಚ್ಚಾಗಲಿದೆ.

ಹೆಚ್ಚಿನ ಮುಸ್ಲಿಂಮರು ಎಲ್ಲಿದ್ದಾರೆ?
2010ರಲ್ಲಿ, ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ, ಇಂಡೋನೇಷ್ಯಾ, ಪಾಕಿಸ್ತಾನ ಮತ್ತು ಭಾರತವನ್ನು ಕ್ರಮವಾಗಿ ಟಾಪ್ 3 ದೇಶಗಳು ಎಂದು ಗುರುತಿಸಲಾಗಿದೆ. ಪ್ಯೂ ರಿಸರ್ಚ್ ಪ್ರಕಾರ, 2030ರ ವೇಳೆಗೆ ಪಾಕಿಸ್ತಾನವು ಇಂಡೋನೇಷ್ಯಾವನ್ನು ಹಿಂದಿಕ್ಕಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದೆ. ಇದೇ ಸ್ಥಿತಿ ಮುಂದುವರಿದರೆ 2050ರ ವೇಳೆಗೆ ಪಾಕಿಸ್ತಾನವೂ ಹಿಂದೆ ಉಳಿಯಲಿದ್ದು, ಇಡೀ ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ದೇಶ ಭಾರತವಾಗಲಿದೆ. ಆದರೆ ಆಗಲೂ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯು ಹಿಂದೂಗಳದ್ದೇ ಆಗಿರಲಿದೆ ಎಂದು ಸಂಶೋಧನೆ ತಿಳಿಸಿದೆ.

ಭಾರತದಲ್ಲಿ ಎಷ್ಟು ಮುಸ್ಲಿಮರಿದ್ದಾರೆ?
2011ರ ಜನಗಣತಿಯ ಪ್ರಕಾರ, ಭಾರತದಲ್ಲಿ 17.22 ಕೋಟಿ ಮುಸ್ಲಿಮರಿದ್ದರು, ಇದು ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 14.2 ರಷ್ಟಿತ್ತು. ಇತ್ತೀಚೆಗೆ ಸರ್ಕಾರವು 2023 ರ ಅಂತ್ಯದ ವೇಳೆಗೆ ದೇಶದ ಒಟ್ಟು ಮುಸ್ಲಿಮರ ಜನಸಂಖ್ಯೆ (Latest data on population of Muslims in India) 20 ಕೋಟಿ ತಲುಪುವ ನಿರೀಕ್ಷೆಯಿದೆ ಎಂದು ಹೇಳಿತ್ತು. ಮುಸ್ಲಿಂ ಜನಸಂಖ್ಯೆಯು ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತವೂ ಸೇರಿದೆ. ದೇಶದ ಬಹುಸಂಖ್ಯಾತ ಹಿಂದೂ ಜನಸಂಖ್ಯೆಗೆ ಹೋಲಿಸಿದರೆ ಮುಸ್ಲಿಂ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ ಎಂದು ತಿಳಿದು ಬಂದಿದೆ.

2060 ರ ವೇಳೆಗೆ ಹಿಂದೂಗಳ ಸಂಖ್ಯೆ 27% ಹೆಚ್ಚಳ!
ಜನಸಂಖ್ಯೆಯ ಹೆಚ್ಚಳದ ವಿಷಯದಲ್ಲಿ ಹಿಂದೂಗಳ ಸ್ಥಿತಿಗತಿ ಇನ್ನೂ ನಿಧಾನವಾಗಿರುತ್ತದೆ. ಪ್ಯೂ ರಿಸರ್ಚ್ ಪ್ರಕಾರ, 2015 ಮತ್ತು 2060 ರ ನಡುವೆ ಹಿಂದೂಗಳ ಜನಸಂಖ್ಯೆಯು ಕೇವಲ 27% ಮಾತ್ರ ಹೆಚ್ಚಾಗುತ್ತದೆ. ಈ ವರದಿಯಲ್ಲಿ ಆಘಾತಕಾರಿ ಮಾಹಿತಿಯೂ ಇದೆ. ಅದೇನೆಂದರೆ 2060 ರ ಹೊತ್ತಿಗೆ ಬೌದ್ಧ ಧರ್ಮವನ್ನು ಅನುಸರಿಸುವವರ ಸಂಖ್ಯೆ ಕಡಿಮೆಯಾಗುತ್ತದೆ. ಪ್ಯೂ ರಿಸರ್ಚ್ ಅಂದಾಜಿನ ಪ್ರಕಾರ ಇದು 7% ಮಾತ್ರ ಇರಬಹುದು. ಅಂದರೆ 2060 ರ ವೇಳೆಗೆ ಬೌದ್ಧ ಧರ್ಮವನ್ನು ಅನುಸರಿಸುವವರ ಸಂಖ್ಯೆಯು ಶೇಕಡಾ 7 ರಷ್ಟು ಕಡಿಮೆಯಾಗಬಹುದು.

Leave A Reply

Your email address will not be published.