Wayanad Landslide: ವಯನಾಡು ಗುಡ್ಡ ಕುಸಿತ- ಸಿಸಿಟಿವಿಯ ಭಯಾನಕ ದೃಶ್ಯಗಳು ವೈರಲ್ – ನೋಡುದ್ರೆ ಎದೆ ಝಲ್ ಅನ್ನುತ್ತೆ !!

Wayanad Landslide: ವಯನಾಡು ಭೂ ಕುಸಿತ(Wayanad Landslide) ದುರಂತ ಇತ್ತೀಚಿನ ವರ್ಷಗಳಲ್ಲಿ ಯಾರೂ ಕಂಡು ಕೇಳರಿಯದ ಭೂಕುಸಿತವಾಗಿದೆ. ವಿನಾಶಕಾರಿ ಭೂಕುಸಿತದ ಆಘಾತದಿಂದ ಕೇರಳದ ವಯನಾಡು ಇನ್ನೂ ಚೇತರಿಸಿಕೊಂಡಿಲ್ಲ. ಈ ದುರಂತದಲ್ಲಿ ನಾಪತ್ತೆಯಾದ ಇನ್ನೂ 100 ಕ್ಕೂ ಅಧಿಕ ಜನರು ಪತ್ತೆಯಾಗಬೇಕಿದೆ. ಈ ಬೆನ್ನಲ್ಲೇ ಅಂದು ನಡೆದ ಈ ವಯನಾಡು ದುರಂತದ ದಿನ ಸಿಸಿಟಿಯಲ್ಲಿ ಸೆರೆಯಾದ ಭಯಾನಕ ಭೂ ಕುಸಿತದ ದೃಶ್ಯಗಳು ವೈರಲ್ ಆಗುತ್ತಿವೆ. ಈ ವಿಡಿಯೋಗಳು ನೋಡುಗರ ಎದೆ ಝಲ್ ಎನಿಸುತ್ತವೆ.

ಹೌದು ಈಗ ವಿನಾಶಕಾರಿ ಭೂಕುಸಿತದ ತೀವ್ರತೆ ಎಷ್ಟಿತ್ತು ಎಂಬುದಕ್ಕೆ ಈ ವಿಡಿಯೊ ಸಾಕ್ಷಿಯಾಗಿದೆ. ದುರಂತದಲ್ಲಿ ಸಂಪೂರ್ಣವಾಗಿ ನಾಶವಾದ ಕುಗ್ರಾಮಗಳಲ್ಲಿ ಒಂದಾದ ಚೂರಲ್‌ಮಲಾದಲ್ಲಿನ ಕೆಲವು ಅಂಗಡಿಗಳಲ್ಲಿನ ಸಿಸಿಟಿವಿಗಳಲ್ಲಿ ಸೆರೆಹಿಡಿದ ದೃಶ್ಯಗಳನ್ನು ಮಲಯಾಳಂ ದೂರದರ್ಶನ ಚಾನೆಲ್‌ಗಳು ಪ್ರಸಾರ ಮಾಡಿವೆ . ಮುಚ್ಚಿದ ಅಂಗಡಿಗಳಿಗೆ ನುಗ್ಗಿದ ಪ್ರವಾಹದ ನೀರು ಕ್ಷಣಾರ್ಧದಲ್ಲಿ ಶಟರ್ ಮತ್ತು ಕಾಂಕ್ರೀಟ್ ಗೋಡೆಗಳನ್ನು ಧ್ವಂಸಗೊಳಿಸಿದ ದೃಶ್ಯಗಳು ಯಾರ ಊಹೆಗೂ ನಿಲುಕದವು.

https://x.com/AsianetNewsEN/status/1825021710761861350?t=9Ag1jVPta3QqEa_yIpkVbQ&s=19

ಒಂದು ದೃಶ್ಯದಲ್ಲಿ, ಪ್ರವಾಹದ ನೀರು ಅಂಗಡಿಯೊಳಗೆ ನುಗ್ಗಿದ್ದು, ಬೃಹತ್ ಬಂಡೆಗಳ ಜೊತೆಗೆ ಗೋಡೆಗಳನ್ನು ಒಡೆಯುವುದನ್ನು ಕಾಣಬಹುದು. ಮತ್ತೊಂದು ದೃಶ್ಯದಲ್ಲಿ, ಕೆಲವು ಪ್ರಾಣಿಗಳು ಕೊಚ್ಚಿಕೊಂಡು ಹೋಗಿ ಅಂಗಡಿಯಲ್ಲಿ ಇಳಿಯುವುದನ್ನು ಕಾಣಬಹುದು.

https://x.com/Unmai_Kasakkum/status/1825132355843178587?t=etk1xWzNvfNny96L4OQmeQ&s=08

ಇನ್ನು ಭೂ ಕುಸಿತ ಪ್ರದೇಶವಾದ ಚೂರಲ್‌ಮಾಲ, . ಪುಂಜರಿಮಟ್, ಮುಂಡಕ್ಕೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಪೊಲೀಸರ ನೇತೃತ್ವದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ದುರಂತ ಸಂಭವಿಸಿ 18 ದಿನ ಕಳೆದರೂ, 100ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ. ವಿವಿಧ ಪಡೆಗಳು ಚಾಲಿಯಾರ್ ನದಿ ತೀರದಲ್ಲಿ ಶೋಧ ನಡೆಸುತ್ತಿದ್ದರೂ, ಕೆಲವು ಶವಗಳ ಅಂಗಾಂಗಳ ಹೊರತಾಗಿ ಹೆಚ್ಚಿನದೇನೂ ಪತ್ತೆಯಾಗಿಲ್ಲ. ಈ ದುರಂತದಲ್ಲಿ ನಾಪತ್ತೆಯಾದವರು ಶೋಧ ಕಾರ್ಯ ಮುಂದುವರೆಸಬೇಕೆ ಬೇಡವೇ ಎನ್ನುವ ಬಗ್ಗೆ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಚಿಂತನೆ ನಡೆಸುತ್ತಿದೆ. ಇನ್ನೂ 100 ಕ್ಕೂ ಅಧಿಕ ಜನರು ಪತ್ತೆಯಾಗಬೇಕಿದೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಕೇರಳ ಸರಕಾರದ ಸಚಿವ ಸಂಪುಟವು ಶೀಘ್ರವೇ ತೆಗೆದುಕೊಳ್ಳಲಿದೆ.

7 Comments
  1. tlovertonet says

    Thanks , I’ve recently been looking for info about this topic for ages and yours is the greatest I’ve discovered till now. But, what about the bottom line? Are you sure about the source?

  2. MichaelLiemo says

    ventolin over the counter nz: buy Ventolin – buying ventolin online
    can i buy ventolin online

  3. MichaelLiemo says

    ventolin hfa 90 mcg: buy albuterol inhaler – ventolin inhaler without prescription
    ventolin 2.5 mg

  4. Josephquees says

    furosemide 100mg: furosemide online – furosemide 40mg

  5. Timothydub says

    canadian pharmacy online reviews: Pharmacies in Canada that ship to the US – canadian drug pharmacy

  6. Timothydub says

    buying from online mexican pharmacy: mexican pharmacy – buying from online mexican pharmacy

  7. Kylee Gallipo says

    There are some attention-grabbing cut-off dates in this article however I don’t know if I see all of them center to heart. There’s some validity but I will take maintain opinion until I look into it further. Good article , thanks and we wish more! Added to FeedBurner as effectively

Leave A Reply

Your email address will not be published.