WhatsApp: ವಾಟ್ಸಾಪ್ ಚಾಟ್ ತೆರೆಯದೇ ಮೆಸೇಜ್ ಓದಲು ಜಸ್ಟ್ ಈ ಟ್ರಿಕ್ಸ್ ಬಳಸಿ
WhatsApp: ಆಧುನಿಕ ಯುಗದಲ್ಲಿ ವಾಟ್ಸಾಪ್ ಉಪಯೋಗ ಇವತ್ತು ಪ್ರತಿಯೊಬ್ಬರೂ ಮಾಡುತ್ತಾರೆ. ಆದ್ರೆ ಕೆಲವರು ವಾಟ್ಸಾಪ್ ಬಗ್ಗೆ ಕೆಲ ಮಾಹಿತಿ ತಿಳಿಯದೇ ಇರಬಹುದು. ಹೌದು, ಹೊಸ ಹೊಸ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿರುವ ವಾಟ್ಸಾಪ್ ನಲ್ಲಿ ನೀವು ತಿಳಿಯಬೇಕಾದ ವಿಚಾರ ಹಲವಾರು ಇದೆ.
ಈಗಾಗಲೇ ವಾಟ್ಸಾಪ್ (WhatsApp) ಮೆಸೇಜ್ ಎಡಿಟ್, ಡಿಲೀಟ್ ಆಯ್ಕೆ, ಸ್ಟೇಟಸ್ ಸೇವಿಂಗ್ ಆಪ್, ಡಿಲೀಟ್ ಆಗಿರುವ ಮೆಸೇಜ್ ಅನ್ನು ನೋಡುವಂತಹ ಆಯ್ಕೆ, ಡಿಪಿ ಯಾರು ನೋಡಿದ್ದಾರೆಂದು ತಿಳಿಯಲು ಆಪ್ ಹೀಗೆ ಕೆಲ ಥರ್ಡ್ ಪಾರ್ಟಿ ಆಪ್ ಮೂಲಕ ವಾಟ್ಸ್ಆಯಪ್ನ ಕೆಲ ಟ್ರಿಕ್ ತಿಳಿದುಕೊಳ್ಳಬಹುದು. ಅದರಂತೆ ವಾಟ್ಸ್ಆಯಪ್ನಲ್ಲಿ ಚಾಟ್ ಓಪನ್ ಮಾಡದೇ ಮೆಸೇಜ್ ಓದುವುದು ಹೇಗೆ ಎಂಬುದಕ್ಕೂ ಒಂದು ಟ್ರಿಕ್ ಇಲ್ಲಿದೆ.
ಇದಕ್ಕಾಗಿ ನೋಟಿಫಿಕೇಶನ್ ಪ್ಯಾನೆಲ್ನಲ್ಲಿ ಈ ಮೆಸೇಜ್ ಒದಬಹುದು. ನೀವು ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಮೈನ್ ಸ್ಕ್ರೀನ್ನಲ್ಲಿರುವ ಹೋಮ್ ಪೇಜ್ ಅನ್ನು ಲಾಂಗ್ ಪ್ರೆಸ್ ಮಾಡಿ. ಈಗ ಅಲ್ಲಿ ಕಾಣಿಸುವ Widgets ಆಯ್ಕೆ ಮೇಲೆ ಒತ್ತಿರಿ, ನಂತರ ಮೈನ್ ಸ್ಕ್ರೀನ್ನಲ್ಲಿ ಎಲ್ಲ Widgets ಕಾಣಿಸುತ್ತದೆ. ಇದರಲ್ಲಿ ವಾಟ್ಸಪ್ ಆಯ್ಕೆ ಮಾಡಿ, ವಾಟ್ಸಪ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಮೈನ್ ಸ್ಕ್ರೀನ್ನಲ್ಲಿ ಕಾಣಿಸುತ್ತದೆ. ನಂತರ ಡನ್ ಆಯ್ಕೆಯನ್ನು ಒತ್ತಿರಿ. ಈ ಸಂದರ್ಭ ಬೇಕಾದಲ್ಲಿ ಫುಲ್ ಸ್ಕ್ರೀನ್ ವರೆಗೂ ಸೆಲೆಕ್ಟ್ ಮಾಡಬಹುದು.
ಈ ಸೆಟ್ಟಿಂಗ್ ನಂತರ ಸ್ಕ್ರಾಲ್ ಮಾಡುವ ಮೂಲಕ ವಾಟ್ಸ್ಆಯಪ್ ತೆರೆಯದೆ ಮೆಸೇಜ್ ಓದಬಹುದು. ಆದ್ರೆ ಯಾವುದೇ ಕಾರಣಕ್ಕೂ ಮೆಸೇಜ್ ಮೇಲೆ ಕ್ಲಿಕ್ ಮಾಡಬೇಡಿ, ಮಾಡಿದರೆ ವಾಟ್ಸ್ಆಯಪ್ ಓಪನ್ ಆಗಿ ನೇರವಾಗಿ ಚಾಟ್ಗೆ ಪ್ರವೇಶಿಸುತ್ತದೆ. ಆದರೆ, ಇಲ್ಲಿ ತೀರಾ ಉದ್ದವಿದ್ದ ಮೆಸೇಜ್ ಓದಲು ಸಾಧ್ಯವಿಲ್ಲ.