Pro Kabaddi 2024: ಪವನ್ ಸೆಹ್ರಾವತ್ ಈ ಬಾರಿ ಯಾವ ತಂಡ? ದುಬಾರಿ ಯಾರು? ಈ ತನಕದ ಹರಾಜಿನ ಒಟ್ಟಾರೆ ಪಟ್ಟಿ ಇಲ್ಲಿದೆ !

Pro Kabaddi 2024: ಪ್ರೊ ಕಬಡ್ಡಿ ಟೂರ್ನಿ ಹರಾಜು ಪ್ರಕ್ರಿಯೆ ಗುರುವಾರ ಆರಂಭವಾಗಿದ್ದು, ಎರಡು ದಿನಗಳ ಕಾಲ ನಡೆಯುವ ಹರಾಜು ಪ್ರಕ್ರಿಯೆಯ ಮೊದಲನೇ ದಿನವನ್ನು ಮುಗಿದಿದೆ. ಮೊದಲ ದಿನ ಒಟ್ಟು 20 ಆಟಗಾರರು ವಿವಿಧ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ. ಖ್ಯಾತ ಇರಾನ್ ಆಟಗಾರ ಮೊಹಮ್ಮದ್ರೇಜಾ ಬರೋಬ್ಬರಿ 2.07 ಕೋಟಿ ರೂ. ಗಳಿಗೆ ಹರಿಯಾಣ ಸ್ಟೀಲರ್ಸ್‌ ತಂಡಕ್ಕೆ ಖರೀದಿ ಆಗಿದ್ದಾರೆ. ಮತ್ತೊಂದು ಕಡೆ, ನಮ್ಮ ಬೆಂಗಳೂರು ಬುಲ್ಸ್‌ ತಂಡಕ್ಕೆ ಅಜಿಂಕ್ಯಾ ಪವಾರ್‌ ಸೇರಿಕೊಂಡಿದ್ದು ಅವರನ್ನು 1.11 ಕೋಟಿ ರೂ. ಕೊಟ್ಟು ಕರಕೊಂಡು ಬರಲಾಗಿದೆ. ಬೆಂಗಳೂರು ಬುಲ್ಸ್ ಸೇತುವೆ ಇನ್ನೊಬ್ಬ ಖ್ಯಾತ ಆಟಗಾರ ಪ್ರದೀಪ್‌ ನವ್ರಾಲ್‌ರನ್ನು 70 ಲಕ್ಷ ನೀಡಿ ಖರೀದಿಸಲಾಗಿದೆ.

11 ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi 2024) ಹರಾಜಿನಲ್ಲಿ ಒಟ್ಟು 500 ಆಟಗಾರರು ಭಾಗವಹಿಸಿದ್ದಾರೆ. 10ನೇ ಸೀಸನ್‌ ಮುಗಿದ ಬಳಿಕ ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ಆಟಗಾರರನ್ನು ಹರಾಜಿಗೆ ಬಿಡುಗಡೆ ಮಾಡಿದ್ದವು. ಇದರ ಜೊತೆಗೆ ಖೇಲೋ ಇಂಡಿಯಾ ಯೂನಿವರ್ಸಿಟಿ ಫೈನಲ್‌ ಆಡಿದ್ದ ಎರಡೂ ತಂಡಗಳ 24 ಆಟಗಾರರು ಕೂಡ ಈ ಸಾರಿ ಹರಾಜಿನಲ್ಲಿ ಭಾಗವಹಿಸಿದ್ದು ವಿಶೇಷ.

ಅಂದ ಹಾಗೆ ಹರಾಜಿನಲ್ಲಿ ಒಟ್ಟು ಐದು ವಿಭಾಗಗಳನ್ನು ಮಾಡಲಾಗಿದೆ. ಅತಿ ವಿಭಾಗಕ್ಕೂ ಮೂಲ ಬೆಲೆ ನಿಗದಿ ಪಡಿಸಲಾಗಿದೆ.

ಪ್ರೊ ಕಬಡ್ಡಿ ಹರಾಜಿನ ನಾಲ್ಕು ವಿಭಾಗಗಳ ವಿವರ:

‘ಎ’ ವಿಭಾಗದ ಆಟಗಾರರ ಮೂಲ ಬೆಲೆ 30 ಲಕ್ಷ ರೂ.

‘ಬಿ’ ವಿಭಾಗದ ಆಟಗಾರರ ಮೂಲ ಬೆಲೆ 20 ಲಕ್ಷ ರೂ.

‘ಸಿ’ ವಿಭಾಗದ ಆಟಗಾರರ ಮೂಲ ಬೆಲೆ 13 ಲಕ್ಷ ರೂ.

‘ಡಿ’ ವಿಭಾಗದ ಆಟಗಾರರ ಮೂಲ ಬೆಲೆ 9 ಲಕ್ಷ ರೂ.

ಇದರಲ್ಲಿ ಆಟಗಾರರನ್ನು ಆಲ್‌ರೌಂಡರ್‌ಗಳು, ರೈಡರ್ಸ್‌, ಡಿಫೆಂಡರ್‌ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.

*ಮೊದಲನೇ ದಿನ ಸೋಲ್ಡ್‌ ಆದ ಆಟಗಾರರ ಪಟ್ಟಿ ಇಲ್ಲಿದೆ.*

ಮೊಹಮ್ಮದ್ರೇಜಾ ಶಾದ್ಲೌಯಿ (ಇರಾನ್): ಹರಿಯಾಣ ಸ್ಟೀಲರ್ಸ್-2.07 ಕೋಟಿ ರೂ. (ಆಲ್ ರೌಂಡರ್)

*ಫಝೆಲ್ ಅತ್ರಾಚಲಿ (ಇರಾನ್): ಬೆಂಗಾಲ್ ವಾರಿಯರ್ಜ್ -50 ಲಕ್ಷ (ಡಿಫೆಂಡರ್)

*ಪವನ್ ಸೆಹ್ರಾವತ್: ತೆಲುಗು ಟೈಟನ್ಸ್- 1.725 ಕೋಟಿ (ಆಲ್‌ರೌಂಡರ್)

ಕ್ರಿಶನ್ ಧುಲ್: ತೆಲುಗು ಟೈಟನ್ಸ್- 70 ಲಕ್ಷ ಡಿಫೆಂಡರ್ (ರೈಟ್ ಕಾರ್ನರ್)

*ಪ್ರದೀಪ್‌ ನವ್ರಾಲ್: ಬೆಂಗಳೂರು ಬುಲ್ಸ್‌-70 ಲಕ್ಷ ರೂ. (

ಮಂಜೀತ್‌: ಯು ಮುಂಬಾ-80 ಲಕ್ಷ ರೂ.

*ಸುನಿಲ್ ಕುಮಾರ್: ಯು ಮುಂಬಾ 1.015 ಕೋಟಿ (ಡಿಫೆಂಡರ್)

*ಸಚಿನ್ ತನ್ವರ್: ತಮಿಳ್‌ ತೈಲಾವಾಸ್-2.15 ಕೋಟಿ (ರೈಡರ್)

*ಗುಮನ್ ಸಿಂಗ್: ಗುಜರಾತ್ ಜಯಂಟ್ಸ್‌-1.97 ಕೋಟಿ (ರೈಡರ್)

*ಮಣಿಂದರ್ ಸಿಂಗ್: ಬೆಂಗಾಲ್ ವಾರಿಯರ್ಜ್- 1.15 ಕೋಟಿ (ರೈಡರ್)

*ಭರತ್ ಹೂಡಾ: ಯು.ಪಿ. ಯೋಧಸ್- 1.30 ಕೋಟಿ (ಆಲ್‌ರೌಂಡರ್)

*ವಿಜಯ್ ಮಲಿಕ್: ತೆಲುಗು ಟೈಟನ್ಸ್- 20 ಲಕ್ಷ (ಆಲ್‌ರೌಂಡರ್)

*ಶುಭಂ ಶಿಂಧೆ: ಪಾಟ್ನಾ ಪೈರೇಟ್ಸ್- 70 ಲಕ್ಷ (ಡಿಫೆಂಡರ್)

*ಸುರ್ಜೀತ್ ಸಿಂಗ್: ಜೈಪುರ ಪಿಂಕ್ ಪ್ಯಾಂಥರ್ಸ್- 60 ಲಕ್ಷ (ಡಿಫೆಂಡರ್)

*ಆಶಿಶ್ ದಬಾಂಗ್: ದಿಲ್ಲಿ ಕೆ.ಸಿ- 23.50 ಲಕ್ಷ (ಆಲ್‌ರೌಂಡರ್)

*ಸೋಂಬಿರ್: ಗುಜರಾತ್ ಜಯಂಟ್ಸ್- 20 ಲಕ್ಷ (ಡಿಫೆಂಡರ್)

ಸಾಹುಲ್ ಕುಮಾರ್: ಯು.ಪಿ. ಯೋಧಾಸ್‌ -30 ಲಕ್ಷ (ಡಿಫೆಂಡರ್‌)

*ಮೋಹಿತ್: ಪುಣೇರಿ ಪಲ್ಟಾನ್- 20 ಲಕ್ಷ (ಡಿಫೆಂಡರ್)

ಸಿದ್ಧಾರ್ಥ್ ದೇಸಾಯಿ: ದಬಾಂಗ್ ದಿಲ್ಲಿಕೆ.ಸಿ- 26 ಲಕ್ಷ (ರೈಡರ್)

*ಅಜಿಂಕ್ಯ ಪವಾರ್: ಬೆಂಗಳೂರು ಬುಲ್ಸ್- 1.11 ಕೋಟಿ (ರೈಡರ್)

*ಮೊದಲನೇ ದಿನ ಮಾರಾಟ ಆಗದೆ ಉಳಿದ ಆಟಗಾರರು

ವಿಶ್ವಂತ್‌ ವಿ: ಮೂಲ ಬೆಲೆ 20 ಲಕ್ಷ ರೂಪಾಯಿ (ಆಲ್‌ರೌಂಡರ್‌)

*ರೋಹಿತ್‌ ಗುಲಿಯಾ: ಮೂಲ ಬೆಲೆ 20 ಲಕ್ಷ ರೂ.

*ವೈಭವ್ ಗರ್ಜೆ: ಮೂಲ ಬೆಲೆ 20 ಲಕ್ಷ ರೂಪಾಯಿ (ಡಿಫೆಂಡರ್‌)(ಆಲ್‌ರೌಂಡರ್‌)

*ವಿಶಾಲ್‌ ಭಾರಧ್ವಾಜ್‌: ಮೂಲ ಬೆಲೆ 20 ಲಕ್ಷ ರೂ. (ಡಿಫೆಂಡರ್)

https://twitter.com/ProKabaddi/status/1824133607415587215/photo/1?ref_src=twsrc%5Etfw%7Ctwcamp%5Etweetembed%7Ctwterm%5E1824133607415587215%7Ctwgr%5E8b8ea59236104b935b81930fa57ae31be83f90aa%7Ctwcon%5Es1_&ref_url=https%3A%2F%2Fd-9524372723654525167.ampproject.net%2F2406131415000%2Fframe.html

Leave A Reply

Your email address will not be published.