Home Breaking Entertainment News Kannada Sandalwood: ಕನ್ನಡ ಚಿತ್ರರಂಗದಲ್ಲಿ ಹೋಮ, ಹವನ, ನಾಗಾರಾಧನೆ ಬೆನ್ನಲ್ಲೇ ನಟ ದೊಡ್ಡಣ್ಣಗೆ ಎದುರಾಯ್ತು ಸಂಕಷ್ಟ!!

Sandalwood: ಕನ್ನಡ ಚಿತ್ರರಂಗದಲ್ಲಿ ಹೋಮ, ಹವನ, ನಾಗಾರಾಧನೆ ಬೆನ್ನಲ್ಲೇ ನಟ ದೊಡ್ಡಣ್ಣಗೆ ಎದುರಾಯ್ತು ಸಂಕಷ್ಟ!!

Hindu neighbor gifts plot of land

Hindu neighbour gifts land to Muslim journalist

Sandalwood : ಕನ್ನಡ ಚಿತ್ರರಂಗದಲ್ಲಿ(Sandalwood) ಸಾಕಷ್ಟು ಸಮಸ್ಯೆಗಳು ಆಗುತ್ತಿರೋದ್ರಿಂದ ಪರಿಹಾರ ಕಂಡುಕೊಳ್ಳಲು ಕಲಾವಿದರ ಸಂಘ ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಪೂಜೆ, ಹೋಮ ಹವನ, ನಾಗಾರಾಧನೆಯನ್ನು ನಡೆಸಿದೆ. ಈ ಬೆನ್ನಲ್ಲೇ ನಟ, ನಿರ್ಮಾಪಕರ ಸಂಘದ ಖಜಾಂಜಿ ದೊಡ್ಡಣ್ಣಗೆ(Doddanna) ಸಂಕಷ್ಟ ಎದುರಾಗಿದೆ.

ಹೌದು, ಇಂಡಸ್ಟ್ರಿಯ ಒಗ್ಗಟ್ಟು, ಥಿಯೇಟರ್ ಸಮಸ್ಯೆ, ನಿರ್ಮಾಪಕರ ಸಮಸ್ಯೆ ನಿವಾರಣೆಗಾಗಿ ಪೂಜೆ ಮಾಡಲಾಗಿದ್ದು, ಈ ಮಧ್ಯೆ ಕಲಾವಿದರ ಸಂಘದ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಸಾಮಾಜಿಕ‌ ಹೋರಾಟಗಾರ ಎನ್.ಆರ್. ರಮೇಶ್ ಆರೋಪಗಳ ಸುರಿಮಳೆಗೈದಿದ್ದು, ಸಹಕಾರ ಸಂಘಗಳ ನಿಯಮನಾಸುರ ಚುನಾವಣೆ ನಡೆಸ್ತಿಲ್ಲ. ಹೊಸ ಕಲಾವಿದರ ನೋಂದಣಿ ಮಾಡಿಲ್ಲ. ಯಾವ ಕಲಾವಿದರೂ ಸೂಕ್ತ ಜವಾಬ್ದಾರಿಯನ್ನು ನಿಭಾಯಿಸ್ತಿಲ್ಲ. ಸರ್ವ ಸದಸ್ಯರ ವಾರ್ಷಿಕ ಸಭೆ ನಡೆಸಿಲ್ಲ. ಲೆಕ್ಕ ಪರಿಶೋಧನಾ ವರದಿ ಸಲ್ಲಿಸಿಲ್ಲ. ದೊಡ್ಡಣ್ಣ ಮಾತ್ರ ಸಂಘದ ಖಜಾಂಚಿ ಆಗಿದ್ದಾರೆ. ಉಳಿದವರ ಜವಾಬ್ದಾರಿಗಳ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಅಲ್ಲದೆ ಖಜಾಂಚಿ ದೊಡ್ಡಣ್ಣ ವಿರುದ್ಧ ಕ್ರಮ‌ ತೆಗೆದುಕೊಳ್ಳಬೇಕು. ಲೆಕ್ಕ ಪರಿಶೋಧನಾ ವರದಿ ಕೊಡದೇ ಇದ್ದಿದ್ದಕ್ಕೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮದಿಂದ ಬೇರೆ ಬೇರೆ ಸಂಘಗಳು ಆಗ್ತಿವೆ. ಜಗ್ಗೇಶ್, ಸುಂದರ್ ರಾಜ್, ಶ್ರೀನಾಥ್, ರಮೇಶ್ ಯಾರಿಗೂ ಒಂದೂ ಮೆಸೇಜ್ ಹೋಗಲ್ಲ. ಯಾರೋ ಇಬ್ಬರು ಈ ಸಂಘವನ್ನ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಕಲಾವಿದರು ಒಗ್ಗಟ್ಟಾಗಿಲ್ಲ.. ಅದೆಲ್ಲ ತೋರ್ಪಡಿಕೆ ಅಷ್ಟೇ. ಎಲ್ಲಿದೆ ಒಗ್ಗಟ್ಟು? ಕನ್ನಡ ಕಲಾವಿದರು ಒಗ್ಗಟ್ಟಾಗಿದ್ದಾರೆ ಅಂದ್ರೆ ಅದು ಏಂಟನೆ ಅದ್ಭುತ! ರಾಕ್​ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಇಬ್ಬರೇ ಇರೋದು. ಬೇರೆ ಯಾವ ಪದಾಧಿಕಾರಿಗಳು ಸಕ್ರಿಯರಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.