Viral Video: ಬೊಗಳುತ್ತಾ, ಕಾದಾಡುತ್ತಾ ಎರಡೆರಡು ಸಿಂಹಗಳನ್ನು ಹಿಮ್ಮೆಟ್ಟಿಸಿ, ಹಸುಗಳನ್ನು ರಕ್ಷಿಸಿದ ನಾಯಿಗಳು- ಭಯಾನಕ ವಿಡಿಯೋ ವೈರಲ್

Share the Article

Viral Video: ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗೋ ಕೆಲವು ವಿಶೇಷವಾದ ವಿಡಿಯೋಗಳು ನಿಜಕ್ಕೂ ಮೈ ರೋಮಾಂಚನಗೊಳಿಸುತ್ತಾ ಅಚ್ಚರಿ ಉಂಟುಮಾಡುತ್ತದೆ. ಅಂತೆಯೇ ಇದೀಗ ಹಸು ಹಿಡಿಯಲು ಬಂದ ಸಿಂಹವನ್ನು ಸಾಕು ನಾಯಿಗಳು ನಿಂತಲ್ಲೇ ಎದುರಿಸಿ ಹಸುಗಳನ್ನು ರಕ್ಷಿಸಿದ ಭಯಾನಕ ವಿಡಿಯೋ ವೈರಲ್(Viral Video) ಆಗಿದೆ.

ಹೌದು, ಸಾಕುನಾಯಿಗಳೆರಡು ಸೇರಿ ಮನೆ ಮುಂದೆ ಬಂದ ಎರಡು ಸಿಂಹಗಳನ್ನು ಬೊಗಳಿ ದೂರ ಓಡಿಸಿದ ಘಟನೆ ಗುಜರಾತ್‌ನಲ್ಲಿ(Gujarath) ನಡೆದಿದೆ. ಅಂದಹಾಗೆ ಗುಜರಾತ್‌ ಪ್ರಸಿದ್ಧ ಅಭಯಾರಣ್ಯವಾಗಿರುವ ಗಿರ್ ನ್ಯಾಷನಲ್ ಪಾರ್ಕ್‌ನಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿರೋ ಅಮ್ರೇಲಿಯಲ್ಲಿರುವ ಸಾವರ್‌ಕುಂಡ್ಲ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನಾಯಿಗಳ ಶೌರ್ಯಕ್ಕೆ ಜನ ಶಹಭಾಷ್ ಅಂತಿದ್ದಾರೆ.

ವೈರಲ್ ಆಗಿರುವ ವೀಡಿಯೋದಲ್ಲಿ ಎರಡು ಸಿಂಹಗಳು ಹಸುಗಳಿರುವ ಹಟ್ಟಿಯ ಗೇಟ್ ಸಮೀಪ ಬಂದಿದ್ದು, ಇದನ್ನು ಗಮನಿಸಿದ ಸಾಕುನಾಯಿಗಳು ಜೋರಾಗಿ ಬೊಬ್ಬೆ ಹೊಡೆದು ಅವುಗಳನ್ನು ಅಲ್ಲಿಂದ ಓಡಿಸಿದೆ. ಗೇಟ್‌ನ ಹೊರಗೆ ಎರಡು ಸಿಂಹಗಳು ಮುಗಿ ಬೀಳಲು ನೋಡುತ್ತಿದ್ದರೆ, ಗೇಟ್‌ನ ಒಳಭಾಗದಲ್ಲಿ ನಾಯಿಗಳು ಜೋರಾಗಿ ಬೊಬ್ಬೆ ಹೊಡೆದು ಗೇಟಿನ ಮೇಲೆ ಎಗರಾಡಿವೆ.

ನಾಯಿಗಳ ಮೊರೆತದಿಂದಾಗಿ ಸಿಂಹಗಳು ಕೆಲ ಕ್ಷಣದಲ್ಲೇ ಅಲ್ಲಿಂದ ದೂರ ಹೋಗಿವೆ. ನಾಯಿಗಳು ಹಾಗೂ ಸಿಂಹಗಳ ಈ ಹಾರಾಟಕ್ಕೆ ಹಾಕಿದ್ದ ಗೇಟ್‌ ಕೂಡ ಒಮ್ಮೆ ತೆರೆದುಕೊಳ್ಳುತ್ತದೆ. ಅಷ್ಟರಲ್ಲಿ ಸಿಂಹಗಳು ಅಲ್ಲಿಂದ ಹೊರ ಹೋಗಿವೆ. ಹೀಗಾಗಿ ನಾಯಿಗಳಿಗಾಗಿ ಸಿಂಹಗಳಿಗಾಗಲಿ ಯಾವುದೇ ಜೀವಹಾನಿ ಉಂಟಾಗಿಲ್ಲ, ಇದೇ ಸಮಯದಲ್ಲಿ ಬಹುಶಃ ಮನೆ ಮಾಲೀಕ ಗೇಟ್‌ನ ಬಳಿ ಬಂದಿದ್ದು, ಗೇಟ್‌ನ್ನು ವಾಪಸ್ ಹಾಕಿ ಬಂದ್ ಮಾಡುತ್ತಾನೆ. ಈ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

https://x.com/dwsamachar/status/1823616844307009947

Leave A Reply