Mangaluru: ಅಬುದಾಬಿಯಲ್ಲಿ ಕಟ್ಟಡದಿಂದ ಬಿದ್ದು ಮಂಗಳೂರು ಮೂಲದ ಯುವಕ ಸಾವು !!

Mangaluru: ಅಬುದಾಬಿಯಲ್ಲಿ(Abudabi) ಟೆಕ್ನೀಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಂಗಳೂರು(Mangaluru) ಮೂಲದ 24 ವರ್ಷದ ಯುವಕ ನೌಫಲ್ ಪಟ್ಟೋರಿ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಹೌದು, ಕೆಲಸದ ಸಂದರ್ಭ ಕಟ್ಟಡದಿಂದ ಕೆಳಗಡೆ ಬಿದ್ದು ಮಂಗಳೂರಿನ ದೇರಳಕಟ್ಟೆಯ(Deralakatte) ಮೂಲದ ನೌಫಲ್ ಪಟ್ಟೋರಿ(Naufal Pattori) ಮೃತಪಟ್ಟ ಘಟನೆ ಅಬುದುಬಾಯಿಯಲ್ಲಿ ನಡೆದಿದೆ.
ಕೆಲಸದ ಹಿನ್ನಲೆ ಕಟ್ಟಡವೊಂದರ ಮೇಲಿನಿಂದ ಆಯ ತಪ್ಪಿ ಕೆಳಗಡೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತದೇಹವು ಖಲೀಫಾ ಆಸ್ಪತ್ರೆಯಲ್ಲಿದೆ ಎಂದು ತಿಳಿದು ಬಂದಿದೆ.