B Y Vijayendra: ಯತ್ನಾಳ್ ನೇತೃತ್ವದ ಪಾದಯಾತ್ರೆಯನ್ನು ನಾನು ತಡೆಯಲ್ಲ, ಆದ್ರೆ ಒಂದು ಕಂಡೀಷನ್…!! ರಾಜ್ಯಾಧ್ಯಕ್ಷ ವಿಜಯೇಂದ್ರ !!
B Y Vijayendra: ಕಾಂಗ್ರೆಸ್ ಸರ್ಕಾರದ ಮುಡಾ ಹಗರಣದ(Muda Scam) ವಿರುದ್ಧ ಬಿಜೆಪಿ-ಜೆಡಿಎಸ್(BJP-JDS) ಮೈಸೂರು ಪಾದಯಾತ್ರೆ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ವಿರುದ್ಧ ಹತ್ತುಕ್ಕೂ ಹೆಚ್ಚು ಬಿಜೆಪಿ ನಾಯಕರು ಬಸವನಗೌಡ ಪಾಟೀಲ್ ಯತ್ನಾಳ್(Basavanagouda Patil Yatnal) ನೇತೃತ್ವದಲ್ಲಿ ಸಭೆ ನಡೆಸಿದ್ದು, ಮತ್ತೊಂದು ಪಾದಯಾತ್ರೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದೀಗ ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ(BJP) ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೊಸ ಕಂಡೀಷನ್ ಹಾಕಿದ್ದಾರೆ.
ಗೌಪ್ಯ ಸಭೆ ಬಳಿಕ ಕೆಲ ನಾಯಕರು, ನಮ್ಮದು ಗೌಪ್ಯ ಸಭೆ ಅಲ್ಲ, ಈಗಾಗಲೇ ಮುಡಾ ಹಗರಣದ ವಿಚಾರವಾಗಿ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸಲಾಗಿದೆ. ಅದೇ ರೀತಿ ವಾಲ್ಮೀಕಿ ನಿಗಮದಲ್ಲಿನ ಭ್ರಷ್ಟಾಚಾರದ ವಿಚಾರವಾಗಿಯೂ ಪಾದಯಾತ್ರೆ ನಡೆಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದ್ದು, ಈ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದರು. ಆದರೆ ಕೆಲವು ಮೂಲಗಳು ಇದು ಕೇವಲ ಹೇಳಿಕೆಯಾಗಿದ್ದು, ಇಡೀ ಸಭೆಯು ವಿಜಯೇಂದ್ರನ ವಿರುದ್ಧ ನಡೆದುದಾಗಿದೆ, ಅವರ ನಾಯಕತ್ವದ ವಿರುದ್ಧವೇ ಪಾದಯಾತ್ರೆ ಕೈಗೊಳ್ಳಲು ಅಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದವು. ಇಷ್ಟೇ ಅಲ್ಲದೆ ಬಿಜೆಪಿಯ ಮೈಸೂರು ಪಾದಯಾತ್ರೆ ಆರಂಭದವೇಳೆ ಯತ್ನಾಳ್ ಅವರು ವಿಜಯೇಂದ್ರ ಮಾಡಿದ ಭ್ರಷ್ಟಾಚಾರದ ವಿರುದ್ಧ ತನಿಖೆ ಮಾಡಲು ಮತ್ತೊಂದು ಪಾದಯಾತ್ರೆ ಮಾಡಬೇಕು ಎಂದು ಹೇಳಿದ್ದರು. ಹೀಗಾಗಿ ಇದರೆಲ್ಲದರಿಂದ ಈ ಅತೃಪ್ತ ನಾಯಕರ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ನಡುವೆ ವಿಜಯೇಂದ್ರ ಅವರು ಯತ್ನಾಳ್ ಗೆ ಹೊಸ ಕಂಡೀಷನ್ ಹಾಕಿ ಅಚ್ಚರಿ ಉಂಟುಮಾಡಿದ್ದಾರೆ.
ಹೌದು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ‘ಉತ್ತರ ಕರ್ನಾಟಕದ ಶಾಸಕರಾದ ಯತ್ನಾಳ್ ನೇತೃತ್ವದಲ್ಲಿ ಕೆಲವು ಬಿಜೆಪಿ ಶಾಸಕರು ಉತ್ತರ ಕರ್ನಾಟಕದಲ್ಲಿ ಕಾಲಿಡಲು ನಿರ್ಧರಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಎಲ್ಲರಲ್ಲೂ ಆತ್ಮವಿಶ್ವಾಸ ತುಂಬಿ ಮುನ್ನಡೆಯಲು ಪ್ರಯತ್ನಿಸಿದ್ದೇನೆ. ಯತ್ನಾಳ್ ಅವರ ಪಾದಯಾತ್ರೆಗೆ ನನ್ನ ಯಾವ ಅಭ್ಯಂತರವಿಲ್ಲ, ಅವರ ಉದ್ದೇಶಿತ ಪಾದಯಾತ್ರೆಯಿಂದ ಯಾವುದೇ ತೊಂದರೆ ಇಲ್ಲ. ಆದರೆ ಅವರ ನಡಿಗೆ ಪಕ್ಷ ಸಂಘಟನೆಗೆ ಪೂರಕವಾಗಿರಬೇಕು ಅಷ್ಟೇ. ಪಾದಯಾತ್ರೆ ನಡೆಸಲು ಹಿರಿಯರಿಂದ ಅನುಮತಿ ಪಡೆಯುವುದು ಕೂಡ ಮುಖ್ಯ ಎಂದು ವಿಜಯೇಂದ್ರ ಕಂಡೀಷನ್ ಅನ್ನು ಹಾಕಿದ್ದಾರೆ.