Salary: ಸೆಪ್ಟೆಂಬರ್‌ನಲ್ಲಿ ನೌಕರರಿಗೆ ಸಂಬಳ ಹೆಚ್ಚಳ ಜೊತೆ ಬೋನಸ್‌ ಭಾಗ್ಯ!

DA Hike: ಸರ್ಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಸರಕಾರಿ ನೌಕರರು ಸರಕಾರದ ಮುಂದೆ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಇದೀಗ ಬೇಡಿಕೆ ಈಡೇರಿಕೆಗಾಗಿ ನೌಕರರು ಕಾಯುತ್ತಿದ್ದಾರೆ. ಸದ್ಯ ಸರ್ಕಾರಿ ನೌಕರರ ಇದೊಂದು ಸಿಹಿ ಸುದ್ದಿಯಾಗಿದೆ. ಹೌದು, ಸೆಪ್ಟೆಂಬರ್‌ನಲ್ಲಿ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಶೇ.3ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ತುಟ್ಟಿಭತ್ಯೆ (DA Hike) ಸರ್ಕಾರಿ ನೌಕರನ ಸಂಬಳದ ಪ್ರಮುಖ ಅಂಶವಾಗಿದೆ.

ಡಿಎ ಹೆಚ್ಚಳವು ಜುಲೈ 1, 2024 ರಿಂದ ಜಾರಿಗೆ ಬರಲಿದೆ. 3 ಶೇಕಡಾ ಡಿಎ ಹೆಚ್ಚಳವು ಇಲ್ಲಿಯವರೆಗೆ ಸ್ಥಿರವಾಗಿದ್ದು, ಹಣದುಬ್ಬರದ ಪರಿಸ್ಥಿತಿಗಳ ಆಧಾರದ ಮೇಲೆ 4 ಶೇಕಡಾ ಹೆಚ್ಚಳದ ಸಾಧ್ಯತೆಯೂ ಇದೆ.

ಪ್ರಸ್ತುತ, ಡಿಎ ಮೂಲ ವೇತನದ ಶೇಕಡಾ 50 ರಷ್ಟಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಡಿಎಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಇದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಮಾಹಿತಿ ಪ್ರಕಾರ 50 ಪ್ರತಿಶತವನ್ನು ಮೀರಿದಾಗ, ಮನೆ ಬಾಡಿಗೆ ಭತ್ಯೆ (HRA) ನಂತಹ ಭತ್ಯೆಗಳನ್ನು ಹೆಚ್ಚಿಸಲಾಗುತ್ತದೆ. ಈ ಬದಲಾವಣೆಗಳು ಈಗಾಗಲೇ ನಡೆದಿವೆ.

ಮಾರ್ಚ್ 2024 ರಲ್ಲಿ, ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿತು. ಈ ಮೊತ್ತವು ಮೂಲ ವೇತನದ 50 ಪ್ರತಿಶತವನ್ನು ತಲುಪಿದೆ. ಪಿಂಚಣಿದಾರರಿಗೆ ನೀಡಲಾಗುವ ಡಿಯರ್‌ನೆಸ್ ರಿಲೀಫ್ (ಡಿಆರ್) ಕೂಡ ಶೇಕಡಾ 4 ರಷ್ಟು ಹೆಚ್ಚಾಗಿದೆ. ಸಾಮಾನ್ಯವಾಗಿ, ಜನವರಿ ಮತ್ತು ಜುಲೈನಿಂದ ಜಾರಿಗೆ ಬರುವ ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ.

ಇದರ ನಡುವೆ ಕೂಡಲೇ 8ನೇ ವೇತನ ಆಯೋಗ ರಚನೆ ಹಾಗೂ ಹಳೆಯ ಪಿಂಚಣಿ ಪದ್ಧತಿಯನ್ನು ಮರುಸ್ಥಾಪಿಸಬೇಕು ಎಂದು ಕೇಂದ್ರ ಸರಕಾರಿ ನೌಕರರು ಮತ್ತು ಕಾರ್ಮಿಕ ಸಂಘಟನೆಗಳ ಒಕ್ಕೂಟಗಳು ಒತ್ತಾಯಿಸುತ್ತಿವೆ. ಆದರೆ ಪ್ರಸ್ತುತ 8ನೇ ವೇತನ ಆಯೋಗವನ್ನು ಸ್ಥಾಪಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

Leave A Reply

Your email address will not be published.