Neeraj Chopra: ನೀರಜ್ ಚೋಪ್ರಾ-ಮನು ಭಾಕರ್ ಮದುವೆ? ಈ ಬಗ್ಗೆ ಮನು ತಂದೆ ರಾಮ್ ಕಿಶನ್ ಶಾಕಿಂಗ್ ಹೇಳಿಕೆ

Share the Article

Neeraj Chopra: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ವೈಯಕ್ತಿಕ ವಿಭಾಗ ಮತ್ತು ಮಿಶ್ರ ವಿಭಾಗದಲ್ಲಿ ಮನು ಭಾಕರ್ ಅವಳಿ ಕಂಚಿನ ಪದಕ ಗೆದ್ದರೆ, ನೀರಜ್ ಚೋಪ್ರಾ (Neeraj Chopra) ಪುರುಷರ ಜಾವೆಲಿನ್ ಥೋ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇದೀಗ ಭಾರತೀಯರಿಗೆ ಇವರಿಬ್ಬರ ನಡುವೆ ಏನೋ ಇದೆ. ಕ್ರಶ್ ಆಗಿದೆ. ಅಲ್ಲದೇ ಇದೀಗ ಈ ಇಬ್ಬರು ಸ್ಟಾರ್ ಆಟಗಾರರು ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೌದು, ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಹಾಗೂ ನೀರಜ್ ಚೋಪ್ರಾ ಭೇಟಿಯಾದ ವಿಡಿಯೊ, ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದು, ಇಬ್ಬರೂ ಆತ್ಮೀಯವಾಗಿ ಮಾತನಾಡಿದ್ದಾರೆ. ವಿಡಿಯೋ ದಲ್ಲಿ ಮನು ತಾಯಿ ಸುಮೇಧಾ ಅವರು ನೀರಜ್ ಕೈಯನ್ನು ಹಿಡಿದುಕೊಂಡು ತಮ್ಮ ತಲೆಯ ಮೇಲೆ ಇರಿಸಿಕೊಂಡು ಪ್ರಮಾಣ ಮಾಡಿಸಿದಂಥಾ ದೃಶ್ಯ ಇದಾಗಿದೆ. ಇದು ಖಂಡಿತಾ ಮದುವೆ ಮಾತುಕತೆ ಆಗಿದೆ ಎಂದು ಎಕ್ಸ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.

ಅಲ್ಲದೇ ಇಬ್ಬರು ಕ್ರೀಡಾಪಟುಗಳು ಒಬ್ಬರಿಗೊಬ್ಬರು ಮಾತನಾಡುತ್ತಿದ್ದರೂ, ಕಣ್ಣು ನೋಡಿಕೊಂಡು ಮಾತನಾಡುತ್ತಿಲ್ಲ. ಇಬ್ಬರ ನಡುವೆ ಕ್ರಶ್ ಆಗಿದೆ. ಹೀಗಾಗಿ ಅವರಿಂದ ಮುಖ ನೋಡಿ ಮಾತನಾಡಲು ಆಗುತ್ತಿಲ್ಲ ಎಂಬ ಅಭಿಪ್ರಾಯ ಅಭಿಮಾನಿ ಬಳಗ ಎಲ್ಲರಲ್ಲೂ ಇದೆ .

ಆದ್ರೆ ಈ ಬಗ್ಗೆ ಮನು ಭಾಕರ್ ಅವರ ತಂದೆ ರಾಮ್ ಕಿಶನ್ ಪ್ರತಿಕ್ರಿಯೆ ನೀಡಿದ್ದು, ಮನು ಇನ್ನೂ ಚಿಕ್ಕವಳು. ಅವಳ ಮದುವೆಯ ಬಗ್ಗೆ ಯೋಚಿಸುತ್ತಿಲ್ಲ ಎಂದು ತಂದೆ ಹೇಳಿದ್ದಾರೆ. ಇನ್ನು ತಮ್ಮ ಪತ್ನಿ ಸುಮೇಧಾ ಭಾಕರ್ ಮತ್ತು ನೀರಜ್ ಚೋಪ್ರಾ ಅವರು ಆತ್ಮೀಯವಾಗಿ ಮಾತನಾಡುತ್ತಿರುವ ವೈರಲ್ ವೀಡಿಯೊ ಕುರಿತು ಪ್ರತಿಕ್ರಿಯಿಸಿದ ರಾಮ್ ಕಿಶನ್, ಮನು ಭಾಕರ್ ತಾಯಿ ನೀರಜ್ ಅವರನ್ನು ತನ್ನ ಮಗನಂತೆ ಕಾಣುತ್ತಾರೆ. ಇನ್ನು ನೀರಜ್ ಪದಕ ತಂದಾಗ ಇಡೀ ದೇಶಕ್ಕೆ ಗೊತ್ತಾಗಿದೆ ಅದೇ ರೀತಿ ಆತ ಮದುವೆಯಾದಾಗ ಕೂಡಾ ಎಲ್ಲರಿಗೂ ತಿಳಿಯುತ್ತದೆ ಎಂದು ಎಲ್ಲಾ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

 

Leave A Reply